ಶ್ರಾವಣ ಬಂದಿದೆ
ಸಂಭ್ರಮ ತಂದಿದೆ
ಜಿನುಗುವ ಸೋನೆಗೂ
ಬಿಡುವಿಲ್ಲದಾಗಿದೆ
ಮೊದಲು ಬಂತು
ಭೀಮನ ಅಮಾವಾಸ್ಯೆ
ಗೌರಿ ಶಂಕರರ ಪೂಜಿಸಿ
ಪತ್ನಿ ಪತಿಗೆ ಅಭಿವಂದನೆ
ಸಲ್ಲಿಸುವ ಹಬ್ಬ
ಬಂತದೋ ಶ್ರಾವಣ
ಶುಕ್ರವಾರ ಮತ್ತೆ
ಸಕಲ ಸೌಭಾಗ್ಯ ನೀಡುವ
ಲಕುಮಿಯ
ಪೂಜಿಸುವ ಹಬ್ಬ
ಮತ್ತೆ ಬಂತು ಶ್ರಾವಣ
ಸೋಮವಾರ
ಸೋಮನಾಥನ ಪೂಜಿಸಿ
ವರ ಬೇಡುವ ಹಬ್ಬ
ಅದೋ ಬಂತು
ವರಮಹಾಲಕ್ಷ್ಮಿ ಪೂಜೆ
ವರದಾಯಿನಿ ಕರುಣಿ
ಸೌಭಾಗ್ಯ ದೇವಿಯ
ಪೂಜಿಪ ಹಬ್ಬ
ಮತ್ತೆ ಬಂತದು
ನೂಲು ಹುಣ್ಣಿಮೆ
ಗಾಯತ್ರಿ ದೇವಿಯ
ಮಂತ್ರವ ಜಪಿಸುತ
ಜನಿವಾರ ಬದಲಿಸುವ ಹಬ್ಬ
ಇನ್ನೂ ಒಂದಿದೆ
ಇಂದಿನ ದಿನವೇ
ಅಣ್ಣ ತಂಗಿಯರ
ಬೆಸೆವ ರಕ್ಷಾ ಬಂಧನ
ಸುಂದರ ಹಬ್ಬ
ರಾಯರ ಮರೆಯಲು
ಸಾಧ್ಯವೇ ಅಣ್ಣ
ಎಲ್ಲರ ಬದುಕಿಗೂ
ಆಸರೆ ನೀಡುವ
ರಾಘವೇಂದ್ರರಾಯರ
ಆರಾಧನೆ ಹಬ್ಬ
ಪುಟು ಪುಟು ಓಡುತ
ಬೆಣ್ಣೆಯ ಮೆದ್ದು
ಗೋಪಿಯರ ಮನ ಗೆದ್ದ
ಬಾಲಕೃಷ್ಣ ಉದಿಸಿದ ಹಬ್ಬ
ಹೀಗೇ ಹಬ್ಬಗಳ
ಸಾಲಾವಳಿ ದೇವರ ನೆನೆದು
ಹೋಳಿಗೆ ಹುಗ್ಗಿ ಉಂಡು
ತಿಂದು ಅರೋಗ್ಯದಿ
ಬದುಕುವ ಪಾಠವ
ಕಲಿಸುವ ಹಬ್ಬ
- ರೇಖಾ. ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

