ಉಜಿರೆ: ಇಲ್ಲಿನ ಎಸ್‌ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಚೇತನರ ನೆಲೆಯಾದ ಸಿಯೋನ್ ಆಶ್ರಮ, ಗಂಡಿಬಾಗಿಲಲ್ಲಿ Lab In Cab ಕಾರ್ಯಕ್ರಮವನ್ನು 27 ಆಗಸ್ಟ್ 2026 ರಂದು ಹಮ್ಮಿಕೊಳ್ಳಲಾಯಿತು.
ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಏಕದಳ ಹಾಗೂ ದ್ವಿದಳ ಸಸ್ಯಗಳ ಕಾಂಡದ ಒಳ ವಿನ್ಯಾಸ, ಸಸ್ಯ ಬಾಷ್ಪೀಕರಣ, ಎಲೆಗಳಲ್ಲಿ ಕಂಡುಬರುವ ವರ್ಣಗಳು ಹಾಗೂ ಸಸ್ಯಗಳಲ್ಲಿ ಆಮ್ಲಜನಕದ ಬಿಡುಗಡೆಯ ಕುರಿತು ಪ್ರಾಯೋಗಿಕವಾಗಿ ಮುಗ್ಧ ಮನಸ್ಸುಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ವಿಶೇಷ ಚೇತನರು ಬಹಳ ಆಸಕಿಯಿಂದ ವ್ಯವಹರಿಸಿದರು.
ಸಿಯೋನ್ ಆಶ್ರಮದ ಯು. ಸಿ. ಪೌಲೋಸ್ ಅವರ ಸಂಪೂರ್ಣ ಸಹಕಾರದೊಂದಿಗೆ, ಅಲ್ಲಿನ ಸಿಬ್ಬಂದಿಗಳಾದ ರಿತೇಶ್ ಹಾಗೂ ಶ್ರದ್ಧಾ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಭಿಲಾಷ್ ಕೆ. ಎಸ್. ಮತ್ತು ಸಹಾಯಕ ಪ್ರಾಧ್ಯಾಪಕಿಯಾದ ಮಂಜುಶ್ರೀ ಕೆ. ಕಾರ್ಯಕ್ರಮವನ್ನು ಆಯೋಜಿಸಿದರು. ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಅನ್ವಿಟಾ ಸೆರಾ, ಅರ್ಚನಾ, ಅಲಕ, ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


