ಸಿ.ಎಸ್. ಪ್ರೊಫೆಷನಲ್ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

Upayuktha
0

ಇಬ್ಬರೂ ಕಂಪನಿ ಸೆಕ್ರೆಟರಿ ವೃತ್ತಿಗೆ ಅಗತ್ಯವಾದ ವೃತ್ತಿಪರ ಅರ್ಹತೆ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜೂನ್‌ನಲ್ಲಿ ನಡೆದ ಕಂಪನಿ ಸೆಕ್ರೆಟರೀಸ್ (ಸಿ.ಎಸ್.) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.


ಕಂಪನಿ ಸೆಕ್ರೆಟರಿ ವೃತ್ತಿಪರ ಅರ್ಹತೆಯ ಅಂತಿಮ ಹಂತದ ಪರೀಕ್ಷೆಯಾದ ಸಿ.ಎಸ್. ಪ್ರೊಫೆಷನಲ್‌ನ ಗ್ರೂಪ್–1 ಮತ್ತು ಗ್ರೂಪ್–2 ಪರೀಕ್ಷೆಗಳಲ್ಲಿ ಆಳ್ವಾಸ್ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ. (382 ಅಂಕ) ಹಾಗೂ ನಾಗನಾಥ್ (353 ಅಂಕ) ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಇದರೊಂದಿಗೆ ಇಬ್ಬರೂ ಕಂಪನಿ ಸೆಕ್ರೆಟರಿ ವೃತ್ತಿಗೆ ಅಗತ್ಯವಾದ ವೃತ್ತಿಪರ ಅರ್ಹತೆಯನ್ನು ಗಳಿಸಿದ್ದಾರೆ.


ಸಿ.ಎಸ್. ಪ್ರೊಫೆಷನಲ್‌ನ – ಗ್ರೂಪ್–1 ಪರೀಕ್ಷೆಯಲ್ಲಿ ಬಿ. ಸುಹಾಸ್ ರಾವ್ (248), ಪ್ರತೀಕ್ಷಾ (223), ನಿಶಿತಾ ಸಿ. ಶೆಟ್ಟಿ (200) ಹಾಗೂ ತಸ್ಮಯ್ ಎಂ. ಬಪ್ಪಣವರ್ (200) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.


ಸಿ.ಎಸ್. ಎಕ್ಸಿಕ್ಯೂಟಿವ್‌ನಲ್ಲೂ ಸಾಧನೆ

ಕಂಪನಿ ಸೆಕ್ರೆಟರಿ ವೃತ್ತಿಪರ ಪಯಣದ ಎರಡನೇ ಹಂತವಾದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿಯೂ ಆಳ್ವಾಸ್ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಜೇನ್ ಡಿಸೋಜಾ (204) ಹಾಗೂ ವೀಣಾ ನಾಯಕ್ (202) ಮಾಡ್ಯೂಲ್–1ರಲ್ಲಿ, ದೀಕ್ಷಾ (166) ಮಾಡ್ಯೂಲ್–2ರಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.


ವಿಶೇಷ ಸಾಧನೆ ಮೆರೆದ ಅನನ್ಯ

ಅನನ್ಯ ಕೆ.ಎ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಉಚಿತವಾಗಿ ಪೂರ್ಣಗೊಳಿಸಿದ್ದಾರೆ. 2023ರಲ್ಲಿ ನಡೆದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿದ ಮೊದಲ ವಿದ್ಯಾರ್ಥಿನಿ ಎಂಬ ಅಪೂರ್ವ ಸಾಧನೆಗೆ ಪಾತ್ರರಾಗಿದ್ದರು. ಇದೀಗ ಸಿ.ಎಸ್. ಪ್ರೊಫೆಷನಲ್ ಪರೀಕ್ಷೆಯ ಗ್ರೂಪ್–1 ಮತ್ತು ಗ್ರೂಪ್–2 ಎರಡರಲ್ಲೂ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಕಂಪನಿ ಸೆಕ್ರೆಟರಿ ವೃತ್ತಿಪರ ಅರ್ಹತೆ ಗಳಿಸಿರುವುದು ಅವರ ಶೈಕ್ಷಣಿಕ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.


ಸಾಧನೆಗೈದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top