ಪರಸ್ಪರ ಸಹೋದರತೆಯ ಶುಭ ಸಂದೇಶದೊಂದಿಗೆ ರಕ್ಷಾಬಂಧನ ಉತ್ಸವ ಮತ್ತೆ ಬಂದಿದೆ . ಭಾಂದವ್ಯದ ಬೆಸುಗೆಯನ್ನು ಬಲಪಡಿಸುವ ನೆನಪು ಮಾಡಿಕೊಡುತ್ತಿದೆ . ಭವ್ಯ ಭಾರತದ ಭರವಸೆಯ ಬೆಳ್ಳಿ ಕಿರಣಗಳು ಮೂಡಿ ಬರುತ್ತಿರುವ ಪರ್ವ ಕಾಲವಿದು. ನೋವಿನ ನರಳಿಕೆಯನ್ನು ಕೊನೆಗಾಣಿಸುವ ಕಾಲ.ಈ ಹಬ್ಬವು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುತ್ತದೆ.
ರಕ್ಷಾ ಬಂಧನವು ಅಣ್ಣ ತಂಗಿಯರ ಹಬ್ಬವಾಗಿದ್ದು , ವರ್ಷಕ್ಕೆ ಒಮ್ಮೆ ಆಚರಿಸಲಾಗುತ್ತದೆ. ತಂಗಿಗೆ ಅಣ್ಣ ಮತ್ತು ಅಣ್ಣನಿಗೆ ತಂಗಿಯು ಕಟ್ಟುತ್ತಾರೆ. ಈ ಮೂಲಕ ತಮ್ಮ ಭಾಂದವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಅಣ್ಣನು ತಂಗಿಗೆ ರಕ್ಷಣೆಯ ಸಂಕೇತವಾಗಿ ಈ ರಕ್ಷೆಯನ್ನು ಶ್ರೀ ರಕ್ಷೆಯಾಗಿ ಕಟ್ಟುತ್ತಾನೆ.
ಸಹೋದರಿ ತನ್ನ ಸಹೋದರನ ಕೈಗೆ ರಕ್ಷೆಯನ್ನು ಕಟ್ಟಿ, ಆತನ ಶ್ರೇಯಸ್ಸನ್ನು ಬಯಸುತ್ತಾಳೆ. ಸಹೋದರನು ಅದಕ್ಕೆ ಪ್ರತಿಯಾಗಿ ಆಕೆಗೆ ಉಡುಗೊರೆ ಅಥವಾ ಸಿಹಿಯನ್ನುರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಹಬ್ಬವಲ್ಲ; ಇದು ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವಾಗಿದೆ. ಸಹೋದರ–ಸಹೋದರಿಯರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು ಸಂತೋಷದಿಂದ ಸಮಯ ಕಳೆಯುತ್ತಾರೆ. ಈ ದಿನ ಮನೆಯಲ್ಲಿ ಸಿಹಿತಿಂಡಿಗಳನ್ನು ತಯಾರಿಸಿ, ಎಲ್ಲರೂ ಒಟ್ಟಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ನೀಡುವುದರೊಂದಿಗೆ, ರಾಖಿ ಕಟ್ಟಿದ ಸಹೋದರಿಗೆ ಸದಾ ರಕ್ಷಣೆ ನೀಡುವ ಭರವಸೆಯನ್ನು ನೀಡುತ್ತಾನೆ. “ರಕ್ಷೆ” ಎಂದರೆ ಕಾಪಾಡುವುದು ಮತ್ತು “ಬಂಧನ” ಎಂದರೆ ಸಂಬಂಧದ ಬಂಧ. ಆದ್ದರಿಂದ ರಕ್ಷಾಬಂಧನವು ಪರಸ್ಪರ ಕಾಳಜಿ ಮತ್ತು ಸಹಾಯದ ಸಂಕೇತವಾಗಿದೆ.
ಹಾಗಾದರೆ ‘ರಾಖಿ ಹಬ್ಬ’ ಎಂದೇ ಕರೆಯಲ್ಪಡುವ ಈ ರಕ್ಷಾಬಂಧನದ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ನೋಡೋಣ.
ಇಂದ್ರ ಮತ್ತು ಸಚೀದೇವಿಯರ ಒಂದು ದೃಷ್ಟಾಂತವನ್ನು ತೆಗೆದುಕೊಳ್ಳಬಹುದು. ಇಂದ್ರ ಅಥವಾ ದೇವೇಂದ್ರನು ರಾಕ್ಷಸರ ವಿರುದ್ಧ ಯುದ್ಧಕ್ಕೆ ಹೊರಡುವಾಗ, ಆತನ ಪತ್ನಿ ಇಂದ್ರಾಣಿ ಅಥವಾ ಸಚೀದೇವಿಯು ರಕ್ಷಾಸೂತ್ರವನ್ನು ಆತನ ಕೈಗೆ ಕಟ್ಟಿ, ಜಯ ಸಿಗಲೆಂದು ಹರೈಸಿದ್ದಳು ಎಂಬ ಪ್ರತೀತಿ ಇದೆ.
ಮತ್ತೊಂದು ಉದಾಹರಣೆಯನ್ನು ಹೇಳಬೇಕೆಂದರೆ, ಮಹಾಭಾರತದ ಪ್ರಸಂಗದಲ್ಲಿ ಶ್ರೀಕೃಷ್ಣನ ಕೈಗೆ ಗಾಯವಾದಾಗ ದ್ರೌಪದಿಯು ತನ್ನ ಸೀರೆಯಂಚನ್ನು ಹರಿದು ಗಾಯವಾದ ಕೈಗೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ಶ್ರೀಕೃಷ್ಣನು ದ್ರೌಪದಿಯ ರಕ್ಷಣೆಯ ಅಭಯವನ್ನು ನೀಡುತ್ತಾನೆ.
ಭಗವಾನ್ ವಿಷ್ಣುವು ಬಲಿಚಕ್ರವರ್ತಿಯ ರಾಜಧಾನಿಯಲ್ಲಿಯೇ ಉಳಿಯಲು ನಿರ್ಧರಿಸಿದಾಗ, ಲಕ್ಷ್ಮೀದೇವಿಯು ಬಲಿಚಕ್ರವರ್ತಿಗೆ ರಾಖಿ ಕಟ್ಟುವ ಮೂಲಕ ವಿಷ್ಣುವಿನ ಮನವೊಲಿಸಿ ವೈಕುಂಠಕ್ಕೆ ಕರೆದುಕೊಂಡು ಹೋದಳು ಎಂಬ ಕಥೆಯೂ ಇದೆ.
ಭಾರತದಾದ್ಯಂತ ಆಚರಿಸುವ ರಕ್ಷಾಬಂಧನವು ನಮ್ಮ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ಹಿಂದೂ ಜೀವನ ಮೌಲ್ಯಗಳನ್ನು ರೂಡಿಸಿಕೊಂಡು ಬದುಕುವ ಹಿಂದುತ್ವಯುಕ್ತ , ಸಂಸ್ಕಾರಯುಕ್ತ, ರಾಷ್ಟ್ರಭಾವಯುಕ್ತ ವ್ಯಕ್ತಿಗಳ ನಿರ್ಮಾಣದ ಮೂಲಕ ಸುರಕ್ಷಿತ, ಸಕ್ರಿಯ, ಸ್ವಾಭಿಮಾನ, ಸಂಪನ್ನ ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಯ ರತರಾಗೋಣ.
ಸಮಾಜದ ಸಜ್ಜನ ಶಕ್ತಿಯನ್ನು ಸಹಕಾರಿಯಾಗಿ ಜೊತೆಗೂಡಿಸಿಕೊಂಡು ಮುನ್ನಡೆಸೋಣ . ನಾವೊಂದು ಸುಸಂಸ್ಕೃತ, ಸಂಘಟಿತ, ಸ್ವಾಭಿಮಾನಿ , ಸಮಾಜವಾಗಿ ಬದುಕಿ, ನಮ್ಮ ದೇಶ , ವಿಶ್ವಕ್ಕೆ ಮಾದರಿಯಾಗಬೇಕು. ನಮ್ಮ ಹಿರಿಯರ ವಿಶ್ವವೇ "ಒಂದು ಕುಟುಂಬ, "ಎಂಬ ಆಶಯ ಸಾಕಾರಗೊಳ್ಳಬೇಕು. ಒಡಕಿನ ಸ್ವರಗಳ ಧ್ವನಿ ಅಡಗಲಿ, ಬಂಧು, ಭಾವದ ಸುಸ್ವರನಿನಾದ ಮೊಳಗಲಿ ನಮ್ಮ ಈ ಸಂಕಲ್ಪದ ಸಂಕೇತವಾದ ರಕ್ಷೆಯನ್ನು ಕಟ್ಟಿ ಕೊಳ್ಳೋಣ.
- ತೃಪ್ತಿ ಮಯ್ಯಾಳ
ಸ್ನಾತಕೋತ್ತರ ವಿದ್ಯಾರ್ಥಿನಿ
ಮಂಗಳೂರು ವಿಶ್ವವಿದ್ಯಾಲಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

