ಸುರತ್ಕಲ್: 90 ವರ್ಷಗಳ ಸುದೀರ್ಘ ಹಾಗೂ ಸಮೃದ್ಧ ಇತಿಹಾಸ ಹೊಂದಿರುವ ಪ್ರತಿಷ್ಠಿತ ‘ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ’ದ 2026–2028ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಯಶಸ್ವಿಯಾಗಿ ನೆರವೇರಿತು. ದಿನಾಂಕ 16-08-2026ರ ಭಾನುವಾರದಂದು ಹೆಚ್. ವಿನಯ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಮಹಾಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ರಾಘವೇಂದ್ರ ಹೆಚ್.ವಿ. ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಎಸ್. ಕರ್ಕೇರ ಹಾಗೂ ಶ್ರೀಮತಿ ಸಾವಿತ್ರಿ ಹೆಚ್. ಭಟ್ ಅವರು ನೂತನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಶ್ರೀ ಶ್ರೀನಿವಾಸ ಕುಳಾಯಿ ಅವರು ನೇಮಕಗೊಂಡಿದ್ದರೆ, ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ್ ಸನಿಲ್ ಕುಳಾಯಿ ಮತ್ತು ಶ್ರೀಮತಿ ಶೋಭಾ ಆರ್. ರಾವ್ ಅವರು ಆಯ್ಕೆಯಾಗಿದ್ದಾರೆ.
ಅಂತೆಯೇ, ಕೋಶಾಧಿಕಾರಿಯಾಗಿ ದಿವಸ್ಪತಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಧರ ಹೆಚ್. ಅವರು ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸ್ಥಾನ ನಿಮಿತ್ತ ಸದಸ್ಯರುಗಳಾಗಿ ಶ್ರೀ ಗೋಪಾಲ ವಿ., ಡಾ. ಶಶಿಕುಮಾರ್ ಕೆ.ಸಿ., ಶ್ರೀಮತಿ ಶಾಂತಾ, ಶ್ರೀಮತಿ ಪಿ. ಲಕ್ಷ್ಮೀ ಹಾಗೂ ಶ್ರೀ ಹರೀಶ ಆಚಾರ್ ಅವರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರನ್ನೂ ನಿಯೋಜಿಸಲಾಯಿತು.
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ, ಶಾಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಹೊಸ ಮೆರುಗು ನೀಡಲು ನೂತನ ಆಡಳಿತ ಮಂಡಳಿಯು ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

