ಸ್ವಾತಂತ್ರ್ಯ ಪೂರ್ವದ ಏಕೈಕ ರಾತ್ರಿ ಪೌಢ ಶಾಲೆ ನವಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ

Upayuktha
0


ಮಂಗಳೂರು: 84 ವರ್ಷಗಳ ಇತಿಹಾಸವುಳ್ಳ ರಾತ್ರಿ ಪ್ರೌಢಶಾಲೆಯಲ್ಲಿ ಕ್ಷೇಮದ ವೈದ್ಯರಾದ ಡಾ.ಸತೀಶ್ ರಾವ್ ಧ್ವಜಾರೋಹಣಗೈದರು. "ಗಳಿಸಿದ ಸ್ವಾತಂತ್ರ್ಯ ವನ್ನು ಹೆಮ್ಮೆಯಿಂದ-ಗೌರವ ಯುತವಾಗಿ ಬಾಳಿ, ಸಮಾಜ ಕಟ್ಟುವ ಕೆಲಸ ಮಾಡುತ್ತಾ ವಿಶ್ವಗುರು ಭಾರತವನ್ನು ನಿರ್ಮಿಸೋಣ" ಎಂದು ನುಡಿದರು.


ಕಾರ್ಯದರ್ಶಿ ಮಧುಸೂದನ ಅಯಾರ್ ರವರು" ಸ್ವಾಂತಂತ್ರ್ಯಕ್ಕಾಗಿ ಸರ್ವ ಸಮರ್ಪಣೆ ಮಾಡಿದ ಮಹಾ ಕಲಿಗಳನ್ನು ನೆನಪಿಸುತ್ತಾ, ಅವರ ಆದರ್ಶದಲ್ಲಿ ಮುಂದುವರಿಯೋಣ" ಎಂಬ ಸಂದೇಶವನ್ನು ನೀಡಿದರು.


ಅಧ್ಯಕ್ಷರೂ, ನಗರದ ಖ್ಯಾತ ವೈದ್ಯರೂ ಆದ ಡಾ.ಪಿ.ವಾಮನ್ ಶೆಣೈಯವರು "ಸ್ವಾತಂತ್ರ್ಯವು ನಮಗೆ ನಮ್ಮನ್ನು ತಿದ್ದಿಕೊಂಡು ನಮ್ಮ ಕಾಲಮೇಲೆ ನಿಲ್ಲುವ ಗುಣವನ್ನು ಕಲಿಸಿತು. ಸಣ್ಣ ಪುಟ್ಟ ಸಮಾಜ ಸೇವೆಗಳೂ ಈ ರಾಷ್ಟ್ರವನ್ನು ಸಬಲಗೊಳಿಸಲು ಕಾರಣವಾಗುತ್ತದೆ. ಅಂದು ರಾಷ್ಟ್ರವನ್ನು ಒಗ್ಗೂಡಿಸಲು" ವಂದೇ ಮಾತರಂ" ಸಹಕರಿಸಿತು. ಇಂದು ಅದೇ ರಾಷ್ಟ್ರಗೀತೆಯ ಸ್ಥಾನಮಾನ ಪಡೆದು ಗತಿಸಿದವರ ಆದರ್ಶವನ್ನು ನೆನಪಿಸಿ ಕೊಳ್ಳಲು ದಾರಿ ಮಾಡಿಕೊಟ್ಟಿದೆ. ವಿದ್ಯಾರ್ಥಿ ದೆಸೆಯಲ್ಲಿ ರಾಷ್ಟ್ರಾಭಿಮಾನ ಬೆಳೆಸಿಕೊಂಡು ನಾಳಿನ ರಾಷ್ಟ್ರ ಕಟ್ಟುವ ರಾಷ್ಟ್ರ ಸೇವಕರಾಗೋಣ" ಎಂದು ಕರೆನೀಡಿದರು.


ಖಚಾಂಚಿ ಗಣೇಶ್ ರಾವ್, ಜಯಧರ್, ಆನಂದ್, ಶ್ರೀಮತಿ ಚೂಡಾಮಣಿ, ದಿನೇಶ್ ಕುಮಾರ್‌,ದೀಪಕ್ ಶರ್ಮಾ, ಸುಧಾಕರ ಶೆಣೈ, ಮಂಗಲಾ ನಾಯಕ್ ಉಪಸ್ಥಿತರಿದ್ದರು. ವರ್ಕಾಡಿ ಮಾಧವ ನಾವಡರು ರಾಷ್ಟ್ರ ಭಕ್ತಿಗೀತೆಗಳನ್ನುಹಾಡಿದರು. ವಿದ್ಯಾರ್ಥಿ ನಾಯಕ ಆಕಾಶ ಬಂಜಾರ ನಿರ್ವಹಿಸಿದರು. ಮುಖ್ಯೋಪಾಧ್ಯಾಯ ವರ್ಕಾಡಿ ರವಿ ಅಲೆವೂರಾಯ ಸ್ವಾಗತ ಮಾಡಿದರು. ಸಾವಿತ್ರಿ ಸೋಮಶೇಖರ್ ಪ್ರಾರ್ಥನೆ ನಡೆಸಿಕೊಟ್ಟರು. ರವೀಶ್ ಆಚಾರ್ಯ ಧನ್ಯವಾದವಿತ್ತರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top