ಬೆಂಗಳೂರು: ಮುಳಿಯ ಫೌಂಡೇಶನ್ ಹಾಗೂ ಮುಳಿಯ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಬೆಂಗಳೂರಿನ 81ಕ್ಕೂ ಹೆಚ್ಚು ಶಾಲೆಗಳಿಗಾಗಿ ಆಯೋಜಿಸಲಾಗಿರುವ ‘ಧನಾತ್ಮಕ ಪೋಷಕತ್ವ’ ವಿಚಾರಸಂಕಿರಣ ಸರಣಿಯ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 13ರ ಗುರುವಾರ ಆನ್‌ಲೈನ್ (Zoom) ಮೂಲಕ ನಡೆಯಲಿದೆ.
ಪೋಷಕರಲ್ಲಿ ಮಕ್ಕಳೊಂದಿಗೆ ಸಕಾರಾತ್ಮಕ ಸಂವಹನ ಹಾಗೂ ಅರ್ಥಪೂರ್ಣ ಸಂಬಂಧವನ್ನು ಬೆಳೆಸುವ ಉದ್ದೇಶದಿಂದ ಈ ಬೃಹತ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ:
ಖ್ಯಾತ ನಟ, ಚಿಂತಕ ಹಾಗೂ ಪ್ರೇರಣಾದಾಯಕ ವಾಗ್ಮಿ ರಮೇಶ್ ಅರವಿಂದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ಮಕ್ಕಳ ಪೂರ್ಣಪ್ರಮಾಣದ ಬೆಳವಣಿಗೆ, ಪೋಷಕರ ಜವಾಬ್ದಾರಿಗಳು ಹಾಗೂ ಮಕ್ಕಳೊಂದಿಗೆ ಸಕಾರಾತ್ಮಕ ಬಾಂಧವ್ಯ ವೃದ್ಧಿಸುವ ಕುರಿತು ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: ಗುರುವಾರ, 13 ಆಗಸ್ಟ್ 2026
ಲಾಗಿನ್ ಸಮಯ: ಸಂಜೆ 6:15
ಕಾರ್ಯಕ್ರಮದ ಅವಧಿ: ಸಂಜೆ 6:30 ರಿಂದ 7:30 ರವರೆಗೆ
ಮಾಧ್ಯಮ: Zoom (ಆನ್‌ಲೈನ್)
ಭಾಗವಹಿಸುವಿಕೆ ಮತ್ತು ನೋಂದಣಿ:
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಕೆಳಗಿನ ನೋಂದಣಿ ಲಿಂಕ್ ಬಳಸಬಹುದು:
Zoom ನೋಂದಣಿ ಲಿಂಕ್: https://us06web.zoom.us/meeting/register/9zA1g1FaT2mZ_JB1DzfCgg
ನೇರ ಪ್ರಸಾರ: ಈ ಕಾರ್ಯಕ್ರಮವನ್ನು ‘ಮುಳಿಯ ಜ್ಯುವೆಲ್ಸ್’ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.
YouTube Channel: https://www.youtube.com/@muliyajewels/streams
ಮಾಹಿತಿ ಮತ್ತು ಸಂಪರ್ಕ:
ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ, ನಿಮ್ಮ ಹೆಸರು ಮತ್ತು ವಿವರಗಳೊಂದಿಗೆ 8123643916 ಸಂಖ್ಯೆಗೆ WhatsApp ಮೂಲಕ ಸಂದೇಶ ಕಳುಹಿಸಬಹುದು ಎಂದು ಮುಳಿಯ ಫೌಂಡೇಶನ್‌ನ ಕೇಶವ ಪ್ರಸಾದ್ ಮುಳಿಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

