ಪೆರಂಪಳ್ಳಿ ಅಗ್ನಿ ಅವಘಡ: ಜೀವರಕ್ಷಕ ಯುವಕರಿಗೆ ಸೀನಿಯರ್‌ ಛೇಂಬರ್‌ ಸನ್ಮಾನ

Upayuktha
0


ಉಡುಪಿ: ಭಾನುವಾರ ಪೆರಂಪಳ್ಳಿಯಲ್ಲಿ ಎಲೆಕ್ಟ್ರಿಕ್‌ ರಿಕ್ಷಾ ಹೊತ್ತಿ ಉರಿದ ಪ್ರಕರಣದಲ್ಲಿ ಜೀವದ ಹಂಗು ತೊರೆದು ಮನೆಯವರನ್ನು ಮತ್ತು ಈಗಾಗಲೇ ಬೆಂಕಿ ಹತ್ತಿದ್ದ ಕಾರನ್ನು ರಕ್ಷಿಸಿ, ತಮ್ಮ ಜೀವದ ಹಂಗನ್ನೂ ತೊರೆದು ಬೆಂಕಿಯನ್ನು ನಿಯಂತ್ರಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಸಿವಿಲ್‌ ಇಂಜಿನಿಯರ್‌ ಮನೋಜ್‌ ಮತ್ತು ಹಿಮವರ್ಣಂ ಏಶಿಯನ್‌ ಪೈಂಟ್‌ ನ ಯುವ ಉದ್ಯಮಿ ಶರತ್‌ ಅವರನ್ನು ಸೀನಿಯರ್‌ ಛೇಂಬರ್‌ ಉಡುಪಿ-ಇಂದ್ರಾಳಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜೇಸಿಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷ, ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ಬಹುದೊಡ್ಡ ಅನಾಹುತವನ್ನು ತಪ್ಪಿಸಿದ ಈ ಧೈರ್ಯವಂತ ಯುವಕರು ಪ್ರತಿಯೊಬ್ಬ ಯುವಕರಿಗೂ ಸ್ಪೂರ್ತಿ ಎಂದರು.


ಇಂದು ಅನಾಹುತಗಳು ಸಂಭವಿಸುವಾಗ ಮೊಬೈಲ್‌ ನಲ್ಲಿ ವಿಡಿಯೋ ಮಾಡುವವರ ಸಂಖ್ಯೆಯೇ ಹೆಚ್ಚು. ಅಂತದ್ದರಲ್ಲಿ  ಈ ಯುವಕರು ತಾವೂ ಮೊಬೈಲ್‌ ಬಳಕೆದಾರರಾಗಿದ್ದರೂ, ಆ ಬಗ್ಗೆ ಕಲೆಕೆಡಿಸಿಕೊಳ್ಳದೆ  ಮಾನವೀಯತೆಗೆ ಒತ್ತುಕೊಟ್ಟದ್ದು ಅಭಿನಂದನಾಹ೯, ಮಾನವೀಯತೆಯ ಭಾವನೆಗಳು ಕುಂಠಿತವಾಗುತ್ತಿರುವ ಈ ಸಮಯದಲ್ಲಿ ಈ ಯುವಕರು ತೋರಿದ ಅಪೂವ೯ ಮಾನವೀಯತೆ ಎಲ್ಲಾ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದರು.


ಎಸ್‌ಸಿಐ ಉಡುಪಿ ಇಂದ್ರಾಳಿಯ ಅಧ್ಯಕ್ಷ ಮನೋಜ್‌ ಕಡಬ ಸ್ವಾಗತಿಸಿ, ಕಾರ್ಯದರ್ಶಿ ಸೆಲ್ವರಾಜ್‌ ವಂದಿಸಿದರು. ಪದಾಧಿಕಾರಿಗಳಾದ ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್‌ ಮತ್ತು ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top