ಹರ್ ಘರ್ ತಿರಂಗಾ ಅಂಗವಾಗಿ ಸೈಕಲ್ ರ‍್ಯಾಲಿ

Upayuktha
0

ಕಾರ್ಕಳ: ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು 6 ಕೆ.ಎ.ಆರ್ ನೌಕಾ ಉಪಘಟಕ, ಎನ್ಸಿಸಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವದ ಕೆಡೆಟ್ ಗಳು ಆಗಸ್ಟ್ 16 ರಂದು ಹರ್ ಘರ್ ತಿರಂಗಾದ ಸಂದರ್ಭದಲ್ಲಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಸಬ್ ಲೆಫ್ಟಿನೆಂಟ್ ಡಾ. ಶಿವಪ್ರಸಾದ್ ಶೆಟ್ಟಿ, ಎಎನ್ ಒ ಹಾಗೂ ಎನ್ ಸಿಸಿ ಉಪ ಘಟಕದ ಕೆಡೆಟ್ ಗಳು ಭಾಗವಹಿಸಿದ್ದರು. ಕಾರ್ಕಳದಲ್ಲಿ ನಡೆದ ರ‍್ಯಾಲಿಯು ಎನ್ಸಿಸಿ ಕೆಡೆಟ್ಗಳು ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಿಡಿದು ಆನೆಕೆರೆಯ ಯುದ್ಧ ಸ್ಮಾರಕದಲ್ಲಿ ಮುಕ್ತಾಯಗೊಂಡಿತು. 


ಈ ರ‍್ಯಾಲಿಯು ಹರ್ ಘರ್ ತಿರಂಗಾದ ಸ್ಫೂರ್ತಿಯ ಬಗ್ಗೆ ಜಾಗೃತಿ ಮೂಡಿಸಿತು ಮತ್ತು ರಾಷ್ಟ್ರದ ಬಗ್ಗೆ ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಲು ನಾಗರಿಕರನ್ನು ಪ್ರೋತ್ಸಾಹಿಸಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top