'ನನ್ನ ಹಾಡು ನನ್ನದು' ಸರಣಿ ಸಮಾರೋಪ

Upayuktha
0


ಉಡುಪಿ: ಭಕ್ತಿ ಗೀತೆಯಲ್ಲಿ ಭಕ್ತಿ ತುಂಬಿ ಭಾವ ಗೀತೆಯಲ್ಲಿ ಭಾವ ತುಂಬಿ ಹಾಡಿದರೆ ಕೇಳುಗರ ಮನ ಮುಟ್ಟುತ್ತದೆ. ಸಂಗೀತವನ್ನು ಎಲ್ಲಾ ರೀತಿಯ ಜೀವರಾಶಿಗಳು ಆಲಿಸುತ್ತವೆ ಎಂದು ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದರು. ಅವರು ರಾಗವಾಹಿನಿ ರಿ ಉಡುಪಿ ಮತ್ತು ಕಲಾನಿಧಿ ರಿ ಉಡುಪಿ  ಸಂಸ್ಥೆಗಳು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ನನ್ನ ಹಾಡು ನನ್ನದು 8ನೇ ಆವೃತ್ತಿಯ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ನಾಗರಾಜ್, ಸುಜಾತಾ ಬಾಲಸುಬ್ರಹ್ಮಣ್ಯ ರಾವ್, ರತ್ನ ಉರಾಳ, ಗಣೇಶ್ ನೆರ್ಗಿ, ರಾಜೇಶ್ ಭಟ್ ಪಣಿಯಾಡಿ, ಹರ್ಷವರ್ಧನ್, ಶುಭಕರ, ಲಿಂಗಪ್ಪ ಕುಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ನಟರಾಜ ಹಾಗೂ ಮಾಲಿನಿ ಮಂಗಳೂರು ಸಹಕರಿಸಿದರು.


ಮಾಸ್ಟರ್ ಡ್ರಾಮಾ ಆರ್ಟ್ಸ್ ಸಂಸ್ಥೆಯ ಲೋಕೇಶ್ ಮಾಸ್ಟರ್ ಅವರಿಗೆ ಲಲಿತಕಲಾ ಆರಾಧಕ ಹಾಗೂ ಸುರೇಶ್ ಜಿ ಕಲ್ಮಾಡಿ ಅವರಿಗೆ ಛಾಯಾ ಸೃಷ್ಟಿ ಪ್ರವೀಣ ಎನ್ನುವ ಬಿರುದನ್ನು ನೀಡಿ ಗೌರವಿಸಲಾಯಿತು. ಸನ್ಮಾನ ಪತ್ರವನ್ನು ವೈ. ಪ್ರಣಮ್ಯ ರಾವ್ ವಾಚಿಸಿದರು. ದಯಾನಂದ ಡಿ ನಿರೂಪಿಸಿ ವಂದಿಸಿದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಉಪ್ಪೂರು ಭಾಗ್ಯಲಕ್ಷ್ಮಿ ಸ್ವಾಗತಿಸಿ ಬಹುಮಾನಿತರ ಹೆಸರನ್ನು ವಾಚಿಸಿದರು. ರೋಹಿತ್ ಮಲ್ಪೆ ಸಾರಥ್ಯದಲ್ಲಿ ಸ್ಪರ್ಧೆ ನಡೆಯಿತು.


ನನ್ನ ಹಾಡು ನನ್ನದು ಸ್ಪರ್ಧೆಯ ವಿಜೇತರು ಪ್ರಥಮ ಜಗದೀಶ್ ಬೆಳಗಾವಿ, ದ್ವಿತೀಯ ಹನಿವೇನ್ಯಾ ಕಾರ್ಕಳ, ತೃತೀಯ ಅಚಿಂತ್ಯಾರಾವ್ ಉಡುಪಿ ಪಡೆದುಕೊಂಡರು. ಮನದ ಚಿತ್ತಾರ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸಾನಿಧ್ಯ ಆಚಾರ್ಯ, ದ್ವಿತೀಯ ಅದಿತಿ ಎಂ, ತೃತೀಯ ಪ್ರಾಪ್ತಿ ಗಳಿಸಿದರು. ಕಿರಿಯರ ವಿಭಾಗದ ವೀಡಿಯೋ ಮೂಲಕ ನಡೆಸಿದ ನನ್ನ ಹಾಡು ನನ್ನದು ಸ್ಪರ್ಧೆಯಲ್ಲಿ ಪ್ರಥಮ ಯುಕ್ತಿ, ದ್ವಿತೀಯ ಪ್ರಣತಿ ನಾವಡ, ತೃತೀಯ ಹೃಷಿಕೇಶ್ ಹಾಗೂ ಸಮಾಧಾನಕರ ಬಹುಮಾನ ವೈಭವಿ, ಪ್ರಜೀತ್, ಕ್ಷಮ್ಯ ಗಳಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top