ಮಂಗಳೂರಿನಲ್ಲಿ ನಾರಿ ನಿವೇಶ್ ಯಾತ್ರಾ ಅಭಿಯಾನ

Upayuktha
0

 


ಮಂಗಳೂರು: ಎಚ್‍ಡಿಎಫ್‍ಸಿ ಮ್ಯೂಚುವಲ್ ಫಂಡ್ ಆರಂಭಿಸಿದ್ದ 'ನಾರಿ ನಿವೇಶ್ ಯಾತ್ರಾ' ಅಭಿಯಾನ ಮಂಗಳೂರಿನಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.


'ನಾರಿ ನಿವೇಶ್ ಯಾತ್ರಾ' ಕಾವೂರು, ಕಾವೂರು ಮಾರುಕಟ್ಟೆ, ಲಾಲ್‍ಬಾಗ್, ಮಂಗಳಾದೇವಿ ಮಾರುಕಟ್ಟೆ, ಹಂಪನಕಟ್ಟೆ ಮಾರುಕಟ್ಟೆ, ಉರ್ವ ಮಾರುಕಟ್ಟೆ ಮತ್ತು ಸುರತ್ಕಲ್ ಮಾರುಕಟ್ಟೆಯಲ್ಲಿ ಸ್ಥಳೀಯರ ಜೊತೆ ಸಂವಾದ ನಡೆಸಿತು. ಜತೆಗೆ ಬೀದಿ ನಾಟಕದ ಮೂಲಕ ಹಣಕಾಸಿನ ಯೋಜನೆಗಳ ಕುರಿತಾಗಿ, ಶಿಸ್ತುಬದ್ಧವಾದ ಹೂಡಿಕೆಯ ಕುರಿತಾಗಿ ಮತ್ತು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವುದರ ಕುರಿತಾಗಿ ನಗರದ ಮಹಿಳೆಯರ ಜೊತೆ ನೇರವಾಗಿ ಮಾತುಕತೆ ನಡೆಸಲಾಯಿತು ಎಂದು ಎಚ್‍ಡಿಎಫ್‍ಸಿ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವನೀತ್ ಮುನೋತ್ ಹೇಳಿದ್ದಾರೆ.


ಅಭಿಯಾನದ ಉದ್ದಕ್ಕೂ ಎಚ್‍ಡಿಎಫ್‍ಸಿ ಮ್ಯೂಚುವಲ್ ಫಂಡ್ ಮಹಿಳಾ ಸ್ವಸಹಾಯ ಸಂಘಗಳ ಜೊತೆ ದೇಶದಾದ್ಯಂತ ಒಟ್ಟು 60 ಕಾರ್ಯಕ್ರಮಗಳನ್ನು ನಡೆಸಲಿದೆ. ಹಣಕಾಸಿನ ಯೋಜನೆಗಳು, ಗುರಿ ಆಧಾರಿತ ಹೂಡಿಕೆ, ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಮತ್ತು ಶಿಸ್ತುಬದ್ಧವಾದ ಹೂಡಿಕೆ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಸುತ್ತ ಚರ್ಚೆಗೆ ವೇದಿಕೆಯೊಂದನ್ನು ಸೃಷ್ಟಿಸಲಿದೆ.


ಕುಟುಂಬಗಳ ಮಟ್ಟದಲ್ಲಿ ಹಣಕಾಸಿನ ತೀರ್ಮಾನಗಳಲ್ಲಿ ಹಾಗೂ ಸಂಪತ್ತು ಸೃಷ್ಟಿಯ ಕಾರ್ಯಗಳಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ 'ನಾರಿ ನಿವೇಶ್ ಯಾತ್ರಾ' ಅಭಿಯಾನವು ಹೂಡಿಕೆದಾರರ ಶಿಕ್ಷಣವನ್ನು ದೇಶದಾದ್ಯಂತ ನೇರವಾಗಿ ಸಮುದಾಯಗಳ ಬಳಿ ಕೊಂಡೊಯ್ಯುವ ಉದ್ದೇಶ ಹೊಂದಿದೆ ಎಂದು ವಿವರಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top