"ಮೊಬೈಲ್ ಒಂದು ಮಾಯೆ."

Upayuktha
0

ಗಿನ ದಿನವೇ ವಿಚಿತ್ರ. ಹಾಗೆಯೇ ದಿನಗಳೆಲ್ಲ ಅಪರಿಚಿತ. ಈಗಿನ ಕಾಲವೆಂದರೇನೇ ಮೊಬೈಲ್.. ಮೊಬೈಲ್ ಎಂದರೇನೇ ಜೀವ.. ನಮ್ಮ ಜೀವನ. ಸತ್ತಯ ಅಲ್ವಾ.. ಬೇಸರವಾದ್ರೂ ಮೊಬೈಲ್.. ಖುಷಿಯಾದ್ರೂ ಮೊಬೈಲ್.. ಕುಂತರು ಮೊಬೈಲ್.. ನಿಂತರೂ ಮೊಬೈಲ್.. ಮೊಬೈಲ್... ಮೊಬೈಲ್.

ಆಹಾ!ಮೊಬೈಲ್ ಒಂದು ಮಾಯೆ. ಈಗಿನ ದಿನಗಳ ಮಕ್ಕಳೇ gen-zi ಕೈಯಲೆಲ್ಲ ಮೊಬೈಲ್. ಹಾಗಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ಆ... ಮೊಬೈಲ್ನಯೊಂದು ಮಾಯೆ. ಈ ಹಿಂದೆಎಲ್ಲಾ ನಮ್ಮ ಅಮ್ಮನ ಮೊಬೈಲ್ ಒತ್ತಲು ಅಮ್ಮ ಮಲಗಲು ಕಾಯ್ತಾ ಇದ್ವಿ. ಇಲ್ಲವೋ ಅಮ್ಮ ರೂಮ್ ಹೊರಗಡೆ ಹೋಗಲು ಕಾತುರದಿಂದ ಕಾಯ್ತಾ ಇದ್ವಿ. ಅದು ಬೇರೆ ಯಾವುದೇ ರೀಲ್ಸ್, ಪೋಸ್ಟ್, ಮಾಡಲು ಅಂತೂ ಅಲ್ವೇ ಅಲ್ಲ. ಬರಿ ಒಂದು ಹಾವು ಏಣಿ ಆಟ ಆಡಲು ಕಾಯ್ತಾ ಇದ್ವಿ. ನಮಗೆ ಅಂದಿನ ದಿನವೇ ಒಂಥರ ಮಾಯಬಜಾರ್ ಇದ್ದ ಹಾಗೆ ಇತ್ತು. ಆದರೆ ಈಗ ಹೇಳುವವರಿಲ್ಲ, ಕೇಳುವವರಿಲ್ಲ ಈಗ gen-zi ಈಗಿನ ಮಕ್ಕಳ ಕೈಯಲ್ಲಿ ಮೊಬೈಲ್ ಒಂದು ಮಾಯೆ. ಊಟ ಬೇಕಾದರೂ ಬಿಟ್ಟರು.. ಆದರೆ ಮೊಬೈಲ್ ಮಾತ್ರ ಅಸಾಧ್ಯ.


ಅಂಫೈನ ದಿನಗಳಲ್ಲಿ ಅರಿಯದೆ ಇದ್ದ ದಿನ, ಅರಿಯದೆ ಮಾಡಿದ ತಪ್ಪು ಎಲ್ಲವನ್ನು ನಮ್ಮ ತಂದೆ ತಾಯಿ ಕ್ಷಮಿಸಿ, ಪ್ರೀತಿಸಿ ಬುದ್ದಿ ಹೇಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅರಿತು ಮಾಡುವ ತಪ್ಪುಗಳೇ ಹೆಚ್ಚು. ಅದರಲ್ಲೂ ಮಾಡುವ ತಪ್ಪಿನಲ್ಲಿ ತಂದೆ ತಾಯಿ ತಲೆತಗ್ಗಿಸುವ ರೀತಿ ಮಾಡುವ ಟ್ರೆಂಡ್ ಈಗ ಹೆಚ್ಚಾಗಿ ಹೋಗಿದೆ. ಈ ವಿಷಯ ಕೇಳಲು, ಹೇಳಲು ಬೇಸರವಾದರೂ ಹಾಗೆಯೇ ಕಹಿಯಾದರೂ ಇದು ಮಾತ್ರ ಸತ್ಯ. ಅದಕ್ಕಾಗಿಯೇ ಮೊಬೈಲ್ ಒಂದು ಮಾಯೆ.


"ಮೊಬೈಲ್ ಗೆ ನಾವು ಜೀವ ಕೊಟ್ಟದೆ ಹೊರತು, ಮೊಬೈಲ್ ನಮಗೆ ಜೀವ ಕೊಟ್ಟಿಲ್ಲ " ಹಾಗಾಗಿ ಈ ಎಲ್ಲಾ ವಿಷ್ಯವನ್ನು ನಾವು ತಲೆಯಲ್ಲಿ ಇಟ್ಟುಕೊಂಡು ನಮ್ಮ ದಾರಿನ್ನಾ ನಾವೇ ನೋಡಿಕೊಳ್ಳಬೇಕು ಬೇಕು. ಹಾಗಾಗಿ ಈ ಮೊಬೈಲ್ ಒಂದು ಮಾಯೆ ಎಂಬ ಲೋಕದಿಂದ ಹೊರ ಬಂದು ನಮ್ಮದೆ ಲೋಕಕ್ಕೆ ನಮ್ಮನ್ನು ಪರಿಚಯಿಸೋಣ.


ಮೊಬೈಲ್ ಒಂದು ಮಾಯೆ....ಉಷಾರ್..

 - ಸಹನಾ 
   ಪತ್ರಿಕೋದ್ಯಮ ವಿದ್ಯಾರ್ಥಿನಿ 
   ಎಸ್. ಡಿ. ಎಮ್. ಕಾಲೇಜು ಉಜಿರೆ 




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top