ಬಯಸಿದವರಿಗೆ ತನ್ನ ಬಾಗಿಲನ್ನು ತೆರೆದು, ಅತ್ಯಂತ ವಿಜ್ರಂಭಣೆಯಿಂದ ಸ್ವಾಗತಿಸಿ, ತನ್ನ ನೆರವಿನಲ್ಲೇ ಆಶ್ರಯವನ್ನು ಕೊಟ್ಟು, ಬದುಕಿಗೆ ಸಿಕ್ಕ ಅತ್ಯಂತ ನೆಮ್ಮದಿಯ ತಾಣದಂತೆ ಅನಿಸುವ ಹಾಗೆ ಮಾಡುವುದೇ ಈ ನೇತ್ರಾವತಿ ಪರ್ವತ ಅಥವಾ ಕುದುರೆಮುಖ ಪರ್ವತ. ಆಹಾ! ಎಷ್ಟು ಸುಂದರವಾಗಿ ಕಾಣುತ್ತಿದೆ ಆ ಪರ್ವತ ಅಲ್ಲವೇ?, ಎಂದು ಅನೇಕರು ಮಾತನಾಡಿ ಅದರ ಸೊಬಗನ್ನು ಇನ್ನಷ್ಟು ಹೆಚ್ಚಿಸಿ ಹೆಚ್ಚಿನ ರೀತಿಯಲ್ಲಿ ಅದನ್ನು ಹೊಗಳುವುದು ಉಂಟು. ಆದರೆ ಆ ಪರ್ವತವನ್ನು ಹೊಗಳುವುದಷ್ಟೇ ಜನರ ಕೆಲಸ, ಅದರ ಹತ್ತಿರ ಹೋಗಿ ಅದರ ಸೌಂದರ್ಯತೆಯನ್ನು ಅನುಭವಿಸುವಂತಹ ಮನಸ್ಸು ಇನ್ನು ಯಾರಿಗೂ ಕೂಡ ಬಂದಿಲ್ಲ. ದೂರದಲ್ಲಿ ಇಷ್ಟು ಸುಂದರವಾಗಿ ಕಾಣುವ ಈ ಪರ್ವತವು,ಇನ್ನು ಇದರ ಹತ್ತಿರ ಹೋದಾಗ ಎಷ್ಟು ಸುಂದರವಾಗಿ ಕಾಣುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.
ಮುಂಜಾನೆಯ ಸೊಬಗಿನಲ್ಲಿ ಆ ಪರ್ವತವನ್ನು ನೋಡಲು ಎರಡು ಕಣ್ಣುಗಳು ಸಾಲದು. ಏಕೆಂದರೆ ಅಷ್ಟು ಕಣ್ಣಿಗೆ ಹೊಳಪನ್ನು ನೀಡುವಂತಹ ಸೌಂದರ್ಯ ಅದರದ್ದು. ಕೇವಲ ಅದು ಪರ್ವತ ಅಷ್ಟೇ. ಅದರಲ್ಲಿ ಅಂತಹ ವಿಶೇಷತೆ ಏನಿದೆ? ಎಂದು ಇನ್ನು ಅನೇಕರ ಪ್ರಶ್ನೆ.ಆದ್ರೆ,ಈ ಪರ್ವತದ ವಿಶೇಷತೆ ಏನೆಂದರೆ, ಇದರ ನಡುವೆ ತನ್ನ ಬೊಗಸೆಯಲ್ಲಿ ಹಾಲಿನಂತಹ ಬಿಳಿಪನ್ನು ಹೊಂದಿ, ನೀರನ್ನು ಅತ್ಯಂತ ರಭಸದಿಂದ ಸುರಿಯುವ ಹಾಗೆ ಕಾಣುವ ಜಲಪಾತಯೇ ಈ ನೇತ್ರವಾತಿ ಜಲಪಾತ.
ಈ ಜಲಪಾತವನ್ನು ನೋಡಿದಾಗ ಜೀವನದಲ್ಲಿ ಒಂದು ಬಾರಿ ಆದರೂ ಈ ಜಲಪಾತವನ್ನು ಕಣ್ತುಂಬ್ಬಿ ಬರಬೇಕು ಮತ್ತು ಆ ನೀರಿನಲ್ಲಿ ಮಿಂದು ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ತೊಳೆದು ಬರಬೇಕು ಎಂಬ ಅಸೆ. ಆದರೆ ಆ ಆಸೆಗೆ ಕಾಲವು ಸಹಿ ಹಾಕಬೇಕು ಅಷ್ಟೇ. ಕೆಲವೊಮ್ಮೆ ಒಬ್ಬಂಟಿ ಎಂದಿಸಿದಾಗ ಕಣ್ಣಲ್ಲಿ ಕಣ್ಣೀರು ಉಕ್ಕಿ ಹರಿದಾಗ, ಜಲಪಾತವನ್ನು ಕಂಡ ಕೂಡಲೇ ಈ ಜಲಪಾತಕ್ಕೆ ಮತ್ತು ನನ್ನ ಕಣ್ಣೀರಿಗೆ ವ್ಯತ್ಯಾಸ ಏನಿದೆ? ಎಂದು ಅನಿಸುತ್ತದೆ. ಅದಲ್ಲದೇ ಕೆಲವೋಮ್ಮೆ ಈ ಜಲಪಾತವುನನನ್ನು ಹಿಂಬಾಲಿಸಿಕೊಂಡು ಬರುತ್ತೀದೆವೋ ಎಂದೇನಿಸುತ್ತದೆ.
ಬದುಕೆಂಬ ಸಾಗರದ ಪಯಣದಲ್ಲಿ ಮುಂದೆ ಸಾಗಿದಾಗ ಬಯಸುವಂತಹ ದಾರಿ ದೊರಕಿದಾಗ ಆಗುವ ಸಂತೋಷ ಎಷ್ಟು ಕೋಟಿಗೂ ಸರಿ ಸಮಾವೇ ಅಲ್ಲಾ.ಅದರಂತೆಯೇ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಬಗಳನ್ನು ಒಂದು ಬಾರಿ ಬದಿಗಿಟ್ಟು, ನನ್ನ ಸಂತೋಷದ ಸಂಭ್ರಮದ ದಿನಗಳು ಏಲ್ಲಿವೆ? ಎಂದು ಹುಡುಕಿದರೇ ನನ್ನ ದೃಷ್ಟಿ ಮೊದಲು ಸೆಳೆಯುವುದೇ ಈ ಪರ್ವತಕ್ಕೆ.
ಕೆಲವೊಮ್ಮೆ ಮುಂಜಾನೆಯ ಮಂಜಿನ ಒಳಕಡೆ ಅವಿತು ಕುಳಿತು ಸೂರ್ಯನ ಆಗಮನಕ್ಕಾಗಿ ಕಾದು ನಂತರ ಪ್ರಕಾಶಮಾನವಾಗಿ ಬೃಹತ್ ಆಕಾರದಲ್ಲಿ ಕಾಣ ಸಿಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರು ಆ ಪರ್ವತವು ನನ್ನನ್ನು ಆಹ್ವಾನ ಮಾಡಿಕೊಂಡರೆ ಅದಕ್ಕೆ ನೂರಾರು ಕೃತಜ್ಞತೆಯನ್ನು ಸಲ್ಲಿಸಿ, ಜೀವನದಲ್ಲಿ ನನ್ನದೇ ಆದ ಸುಂದರವಾದ ಸಂಭ್ರಮದ ದಿನಗಳನ್ನು ಅಲ್ಲೇ ಕಳೆದುಕೊಂಡು ಬರುವೆ.ನನ್ನ ಮನಸಿಗೆ ಏನಾದರೂ ದುಃಖವೆನಿಸಿದಾಗ ನಿನನ್ನು (ಪರ್ವತ ) ಕಂಡಕೂಡಲೇ ಗಾಳಿಯ ಸನ್ನೆಯ ಮೂಲಕ ಸಮಾಧಾನ ಪಡಿಸಿದ ನಿನಗೆ ಧನ್ಯವಾದ.
ಸಂತೋಷದ ವಿಚಾರಗಳನ್ನು ನಿನ್ನಲ್ಲಿ ಹಂಚಿಕೊಂಡಾಗ ಮಳೆಯ ಹನಿಗಳ ರೂಪದಲ್ಲಿ ನನ್ನನ್ನು ಮತ್ತೇ ನಲಿವಿನಂತೆ ಮಾಡಿದ ನಿನಗೆ ಧನ್ಯವಾದ. ಮೌನಿಯಾದರು ನನ್ನ ಮನಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ ನಿನಗೆ ಧನ್ಯವಾದ. ನನಗೆಂದು ಇಷ್ಟೆಲ್ಲಾ ಸುಂದರವಾದ ಕ್ಷಣಗಳನ್ನು ನಿನಗೆ, ನಾನು ಮಾತ್ರ ಪ್ರೀತಿಯನ್ನು ಹೊರತು ಪಡಿಸಿ ಒಂದಲ್ಲ ಒಂದು ದಿನ ನಿನ್ನ ಸಮೀಪವೇ ಬಂದು ನಿನ್ನೊಂದಿಗೆ ಸೆಲ್ಫಿಯನ್ನು ದಿಟ್ಟಿಸಿ ಎಲ್ಲರೊಂದಿಗೆ ಹಂಚಿಕೊಳ್ಳಲು ಮಾತ್ರ ಸಾಧ್ಯ.
- ಶಿಲ್ಪಾ
ದಿಡುಪೆ.

