ಶೈಕ್ಷಣಿಕ ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭ
ಬಾಗಲಕೋಟೆ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ (LIAFI) ಬಾಗಲಕೋಟೆ ಹಾಗೂ ಬೀಳಗಿ ಸಂಪರ್ಕ ಶಾಖೆಯ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ಶೈಕ್ಷಣಿಕ ಕಾರ್ಯಾಗಾರವು ಆಗಸ್ಟ್ 30 (ರವಿವಾರ) ರಂದು ಬೆಳಿಗ್ಗೆ 9:00 ಗಂಟೆಗೆ ನವನಗರ ಬಸ್ ಸ್ಟ್ಯಾಂಡ್ ಹತ್ತಿರದ, ಫೈರ್ ಆಫೀಸ್ ಹಿಂಭಾಗದಲ್ಲಿರುವ ಹೋಟೆಲ್ ಶ್ರೀ ಪಂಜುರ್ಲಿಯಲ್ಲಿ ಜರುಗಲಿದೆ.
ಬಾಗಲಕೋಟೆ ಶಾಖೆಯ ಸಂಘದ ಅಧ್ಯಕ್ಷ ಎಂ. ವೈ. ಹುಲ್ಲಿಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಲಿಯಾಪಿ (LIAFI) ಬೆಳಗಾವಿ ವಿಭಾಗೀಯ ಅಧ್ಯಕ್ಷ ಪದ್ಮರಾಜ ತಡಸದ, ಬಾಗಲಕೋಟೆ ಶಾಖಾಧಿಕಾರಿ ಎಂ.ಡಿ. ರಕ್ಷಿತ್, ಬೀಳಗಿ ಸಂಪರ್ಕ ಶಾಖೆಯ ಶಾಖಾಧಿಕಾರಿ ಬಲರಾಮ ಪಾಡಿ, ಬಾಗಲಕೋಟೆ ಉಪಶಾಖಾಧಿಕಾರಿ ಉಮೇಶ ಬಡಿಗೇರ ಹಾಗೂ ಲಿಯಾಪಿ ವಿಭಾಗದ ಸಹ ಕಾರ್ಯದರ್ಶಿ ಎಂ. ಜಿ. ಕಂಬಾರ ಭಾಗವಹಿಸಲಿದ್ದಾರೆ.
ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ಸಭೆಯ ಸುಸಂದರ್ಭದಲ್ಲಿ 2025-26ರ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್‌ಐಸಿ ಪ್ರತಿನಿಧಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜೊತೆಗೆ ಎಂ.ಡಿ.ಆರ್.ಟಿ (MDRT) ಅರ್ಹತೆ ಪಡೆದ ಪ್ರತಿನಿಧಿಗಳು, ಅತಿ ಹೆಚ್ಚು ವಿಮಾ ವ್ಯವಹಾರ ನಡೆಸಿದವರು ಹಾಗೂ ವಿಮಾ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಪ್ರತಿನಿಧಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು.
ಬಾಗಲಕೋಟೆ ನವನಗರ ಹಾಗೂ ಬೀಳಗಿ ಶಾಖೆಯ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಚರ್ಚೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷ ಎಂ. ವೈ. ಹುಲ್ಲಿಕೇರಿ, ಉಪಾಧ್ಯಕ್ಷ ಎಸ್. ಎಂ. ಮದರಖಂಡಿ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಹೋಟಿ ಹಾಗೂ ಕಾರ್ಯದರ್ಶಿ ಹೆಚ್. ವಾಯ್. ಮೊಕಾಶಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


