ಅವರು ನಗರ ಕೇಂದ್ರ ಗ್ರಂಥಾಲಯ ಹೊಸಬೆಟ್ಟು ಇವರ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಗ್ರಂಥಪಾಲರ ದಿನಾಚರಣೆ’ ಹಾಗೂ ‘ಪುಸ್ತಕ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
"ಕಿರಿಯರನ್ನು ಗ್ರಂಥಾಲಯದತ್ತ ಆಕರ್ಷಿಸುವ ಕಾರ್ಯವಾಗಲಿ"
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೆಚ್.ಪಿ.ಸಿ.ಎಲ್. (HPCL) ಸಂಸ್ಥೆಯ ನಿವೃತ್ತ ಹಿರಿಯ ಪ್ರಬಂಧಕ ಹಾಗೂ ನಿರೂಪಕ ಪ್ರಕಾಶ್ ಪುತ್ತೂರು ಮಾತನಾಡಿ, "ಇಂದಿನ ಡಿಜಿಟಲ್ ಯುಗದಲ್ಲಿ ಕಿರಿಯ ತಲೆಮಾರಿನವರನ್ನು ಗ್ರಂಥಾಲಯಗಳತ್ತ ಆಕರ್ಷಿಸುವ ಮತ್ತು ಓದಿನ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳು ನಡೆಯಬೇಕಿದೆ," ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಓದುಗರಾದ ಜಗದೀಶ್ ಪಣಂಬೂರು ಅವರು ಗ್ರಂಥಾಲಯವು ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ಮುಕ್ತಕಂಠದಿಂದ ಸ್ಮರಿಸಿಕೊಂಡರು.
ವೈವಿಧ್ಯಮಯ ಸ್ಪರ್ಧೆಗಳು: ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಮಕ್ಕಳಿಗಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೋಮ ರೆಡ್ಡಿ ರೀಜೆಂಟ್ ಪಾರ್ಕ್, ರಮೇಶ್ ರಾವ್ ತಾವರೆ ಕೊಳ, ಚಾಂದಿನೀ ಶೆಟ್ಟಿ, ಜಯಂತಿ ದೇವಾಡಿಗ ಹಾಗೂ ಸರಿತ ಉಪಸ್ಥಿತರಿದ್ದರು. ನಾಗಶ್ರೀ ನಾಗೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಗ್ರಂಥಾಲಯ ಸಹಾಯಕಿ ಚಂದ್ರಕಲಾ ಅವರು ಸಮಗ್ರ ಕಾರ್ಯಕ್ರಮವನ್ನು ನಿರೂಪಿಸಿ, ಸಂಯೋಜಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

