ಪುತ್ತೂರು: ಭಾರತೀಯಜ್ಞಾನ ಪರಂಪರೆ ಎನ್ನುವುದು ಸಂಕೀರ್ಣ ವಿಷಯದೊಂದಿಗೆ, ಕಷ್ಟದ ವಿಷಯವೂ ಹೌದು. ಈ ಜ್ಞಾನವನ್ನುತಮ್ಮಲ್ಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಪ್ರಾಚೀನ ಸಂಗತಿಯನ್ನಿಟ್ಟುಕೊಂಡುಅಭ್ಯಾಸದೊಂದಿಗೆ ಹಳೆಯ ಜ್ಞಾನದ ಶಕ್ತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾದರೆ, ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಾಗಿದೆಎಂದರ್ಥ. ಕಾರಣ, ಸರಿ ತಪ್ಪುಗಳನ್ನು ತಿಳಿದುಕೊಳ್ಳುವ ಜ್ಞಾನವನ್ನು ಶಿಕ್ಷಣ ನೀಡುತ್ತದೆ. ನಮ್ಮ ಜ್ಞಾನ ಪರಂಪರೆಯುಓದು, ಶಿಕ್ಷಣ ಮತ್ತುಕೃಷಿಯನ್ನುಒಂದು ಕಲೆ ಎಂದು ತಿಳಿಸಿದೆ. ಒಂದು ವಿಷಯದಕುರಿತು ಆಳವಾದ ಅಧ್ಯಯನ ಮಾಡಿಜ್ಞಾನವನ್ನು ಸರಿದೂಗಿಸಬೇಕು. ಜ್ಞಾನವನ್ನು ಹುಡುಕುವುದು ಮಾತ್ರವಲ್ಲದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯಎಂದು ವಿವೇಕಾನಂದಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ವಿಶೇಷಅಧಿಕಾರಿ(ಆಡಳಿತ ವಿಭಾಗ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂದು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾಕೇಂದ್ರ, ಸ್ನಾತಕೋತ್ತರ ವಿಭಾಗಗಳು ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ನಡೆದ ಭಾರತೀಯಜ್ಞಾನ ಪರಂಪರೆಯ ಜೀವನೋಪಯೋಗಿತ್ವ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡುತ್ತಾ, ಮುಖ್ಯವಾಗಿ ಪ್ರತಿ ವಿದ್ಯಾರ್ಥಿಗಳಿಗೂ ಅಗತ್ಯವಾಗಿರುವ ವಿಷಯ ಎಂದರೆ ಅದು ಭಾರತೀಯಜ್ಞಾನ ಪರಂಪರೆ. ಇವುಗಳ ಅಗತ್ಯತೆಯ ಕುರಿತಾದ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಯುವುದರಿಂದ ಮುಂದೆ ಓದಿನಲ್ಲಿ ಜ್ಞಾನವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ, ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ಸ್ವರ್ಣ ಹಾಗೂ ಪ್ರಥಮ ಎಂ.ಕಾಂ ವಿದ್ಯಾರ್ಥಿ ಶಿವಾನ್ ರಾಜ್‍ಆರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಪ್ರತೀಕ್ಷಾಯು. ಕೆ ಸ್ವಾಗತಿಸಿ, ಡಿ. ಮನ್ವಿತ ವಂದಿಸಿ, ಸ್ವಾತಿಎನ್. ಡಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
