ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 'ಶ್ರೀಕೃಷ್ಣಮಯ 2026' ಕೃಷ್ಣ ವೇಷ ಸ್ಪರ್ಧೆಗೆ ಚಾಲನೆ

Upayuktha
0


ಮಂಗಳೂರು: ಶಕ್ತಿ ವಿದ್ಯಾ ಸಂಸ್ಥೆ ಮತ್ತು ಶ್ರೀ ಗೋಪಾಲಕೃಷ್ಣದೇವಸ್ಥಾನ ಮಂಗಳೂರು ಇದರ ಸಹಯೋಗದಲ್ಲಿ  ನಡೆದಜಿಲ್ಲಾ ಮಟ್ಟದಕೃಷ್ಣ ವೇಷ ಸ್ಪರ್ಧೆ ಶ್ರೀಕೃಷ್ಣ ಮಯ 2026 ರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಡೋ ಲೈಟ್‍ಸ್ಪೆಷಾಲಿಟಿ ಕೆಮಿಕಲ್ಸ್‍ ಇಂಡಿಯ ಇದರ ಮುಖ್ಯ ವ್ಯವಸ್ಥಾಪಕರಾದ  ದಿವಾಕರ್‍ ಕದ್ರಿಯವರು ದೀಪವನ್ನು ಬೆಳಗಿಸಿ ನಂತರ ಪುಟ್ಟಶ್ರೀ ಕೃಷ್ಣನನ್ನುತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲನ್ನುತೂಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ನಂತರ ಮಾತನಾಡಿದ ಅವರು "ಇವತ್ತು ನಮ್ಮದೇಶಕ್ಕೆ ಬೇಕಾದದ್ದು ಸಂಸ್ಕಾರಯುತ ಮಕ್ಕಳು. ಅಂತಹ ಶಿಕ್ಷಣ ಇಂದು ಶಕ್ತಿ ಶಾಲೆಯಲ್ಲಿ ಸಿಗ್ತಾ ಇದೆ. ಡಾ ಕೆ ಸಿ ನಾಯ್ಕ್ ಅವರು ದೇವಸ್ಥಾನ,  ಶಾಲೆ ಕಟ್ಟಿದೇಶಕ್ಕೆ ಸಮಾಜಕ್ಕೆ ಕೊಡುಗೆಯನ್ನು ಕೊಡುತ್ತಾ ಇರೋದು ಶ್ಲಾಘನಿಯ. ಕೃಷ್ಣಎಲ್ಲಾ ಒಳ್ಳೆಯತನದ ಪ್ರತೀತಿ. ನಮ್ಮೆಲ್ಲರ ಮಕ್ಕಳಿಗೆ ಆ ಕೃಷ್ಣನ ಕೃಪೆ ಅಗತ್ಯವಾಗಿ ಬೇಕಾಗಿದೆ. ನಾರಾಯಣನ ನಾಮ ಮಾತ್ರದಿಂದ ಪುಣ್ಯವನ್ನು ಪಡೆಯಬಹುದು. ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರ ಕೂಡ ದೊಡ್ಡದಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟುದೇಶದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಿ ನಮ್ಮದೇಶದ ಹಿರಿಮೆಯನ್ನುಎತ್ತಿ ಹಿಡಿಯುವಂತೆ ಮಾಡಬೇಕಾಗಿದೆ. ಈ ಮಣ್ಣಿನಲ್ಲಿ ಜನ್ಮ ತಳೆದ ನಾವೆಲ್ಲರೂ ಧನ್ಯರು. ನಮ್ಮ ದೇಶದ ಹಿರಿಮೆ ಏನಂದರೆ ನಾವು ಯಾರ ಮೇಲೆಯೂ ದೌರ್ಜನ್ಯವನ್ನು ಮಾಡೋದಿಲ್ಲ, ವಸುಧೈವ ಕುಟುಂಬಕಂ ಎಂಬ ಮನೋಭಾವದಿಂದ ಎಲ್ಲರನ್ನೂ ನಮ್ಮವರೆಂದು ಕಾಣುವವರು ನಾವು. ಪ್ರಪಂಚದಲ್ಲಿ ಈ ವಸುದೈವಕುಟುಂಬಕಮ್ ಎಂಬ ನಲ್ನುಡಿ ಪ್ರಪಂಚದಾದ್ಯಂತ ಹರಡಲಿ ಮಕ್ಕಳಿಗೆ ಶ್ರೀ ಕೃಷ್ಣ ಆಶೀರ್ವದಿಸಲಿ ಎಂದು ಶುಭ ಹಾರೈಸಿದರು".


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಕೆ ಸಿ ನಾೈಕ್‍ ಅವರು ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆ ಆ ಶ್ರೀ ಕೃಷ್ಣನ ಪ್ರೇರಣೆ ಇಂದ ನಿರ್ಮಾಣವಾಗಿದೆ. ಇಂದು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.


ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ಸುರೇಖಾ ಆರ್ ಭಟ್‍ ಸ್ವಾಗತಿಸಿ. ಶಿಕ್ಷಕಿ ಹರಿಣಿ ಮತ್ತು ಮಧುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top