ನಟಿ ಕೃತಿ ಶೆಟ್ಟಿ 'ಇಂದ್ರಿಯಾ' ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

Upayuktha
0

ಮಂಗಳೂರು, ಆಗಸ್ಟ್ 12, 2026: ಆದಿತ್ಯ ಬಿರ್ಲಾ ಗ್ರೂಪ್‌ನ ಪ್ರಸಿದ್ಧ ಆಭರಣ ಸಂಸ್ಥೆ 'ಇಂದ್ರಿಯಾ' ಹಬ್ಬದ ಋತುವಿನ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಮಾರುಕಟ್ಟೆಗೆ ಖ್ಯಾತ ನಟಿ ಕೃತಿ ಶೆಟ್ಟಿ ಅವರನ್ನು ತನ್ನ ನೂತನ ಬ್ರ್ಯಾಂಡ್ ರಾಯಭಾರಿಯನ್ನಾಗಿ ಘೋಷಿಸಿದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕೃತಿ, ಇಂದ್ರಿಯಾದ 'ವರಮಹಾಲಕ್ಷ್ಮಿ ಅಭಿಯಾನ'ದ ಪ್ರಮುಖ ಆಕರ್ಷಣೆಯಾಗಿದ್ದಾರೆ.


ಈ ಅಭಿಯಾನದ ಭಾಗವಾಗಿ ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸ ಸಮ್ಮಿಳಿತಗೊಂಡ ವಿಶೇಷ ಟೆಂಪಲ್ ಜ್ಯುವೆಲ್ಲರಿ ಸಂಗ್ರಹವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಕ್ಕಾಶಿ ಕೆತ್ತನೆ, ಲಕ್ಷ್ಮಿ ದೇವಿಯ ಚಿತ್ರಣ, ಕಮಲ, ನವಿಲು ಹಾಗೂ ಕಾಸಿನ ಮಾದರಿಯ ವಿನ್ಯಾಸ ಹೊಂದಿರುವ ಆಂಟಿಕ್ ಗೋಲ್ಡ್ ಆಭರಣಗಳು ಲಭ್ಯವಿವೆ.


ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆಯಲ್ಲಿ ನಿರ್ಮಿಸಲಾದ ಜಾಹೀರಾತು ಚಿತ್ರದಲ್ಲಿ ಕೃತಿ ನಟಿಸಿದ್ದು, ಅತ್ತೆಗೆ ಚಿನ್ನದ ಹಾರ ನೀಡುವ ಮೂಲಕ "ಬಂಗಾರದಂತ ಮನಸ್ಸಿನ ವ್ಯಕ್ತಿಗೆ ಚಿನ್ನದ ಉಡುಗೊರೆ" ಎಂಬ ಸುಂದರ ಸಂದೇಶವನ್ನು ನೀಡಲಾಗಿದೆ.


ಈ ಕುರಿತು ಮಾತನಾಡಿದ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ಶಾಂತಿ ಸ್ವರೂಪ್ ಪಾಂಡ, "ದಕ್ಷಿಣ ಭಾರತದ ಆಚರಣೆ ಮತ್ತು ಭಕ್ತಿಯ ಭಾವನೆಯನ್ನು ಈ ಕ್ಯಾಂಪೇನ್ ಪ್ರತಿಬಿಂಬಿಸುತ್ತದೆ," ಎಂದರು. ನಟಿ ಕೃತಿ ಶೆಟ್ಟಿ ಮಾತನಾಡಿ, "ಪಾರಂಪರಿಕ ಕಲೆ ಹಾಗೂ ಇಂದಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ಮೂಡಿಬಂದಿರುವ ಈ ಆಭರಣ ಸಂಗ್ರಹದ ಭಾಗವಾಗಿರುವುದು ಸಂತಸ ತಂದಿದೆ," ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top