ಕೇಶವ ಮತ್ತು ಮಧುಮತಿಯ ಯಶೋಗಾಥೆ

Upayuktha
0


ಇದು ಒಬ್ಬ ಬಡ ರೈತನಾದ ಕೇಶವ ಮತ್ತು ಅವನ ಪತ್ನಿ ಮಧುಮತಿ ಅವರ ಕಥೆ


ಕೇಶವನಿಗೆ ಒಂದು ಚಿಕ್ಕ ತೋಟವಿತ್ತು. ಆ ತೋಟದಲ್ಲಿ ಮಾವಿನ ಮರ, ನಿಂಬೆ ಮರ ಮತ್ತು ಹುಣಸೆ ಮರಗಳಿದ್ದವು. ಆದರೆ ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆದ್ದರಿಂದ ಅವರು ತುಂಬಾ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು.


ಒಂದು ದಿನ ಸರ್ಕಾರದಿಂದ ಒಂದು ಘೋಷಣೆ ಕೇಳಿಸಿತು. “ನಾಳೆಯಿಂದ ಹದಿನೈದು ದಿನಗಳ ಕಾಲ ಮಹಿಳೆಯರಿಗಾಗಿ ಉಚಿತ ತರಬೇತಿ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಉಪ್ಪಿನಕಾಯಿ, ಸಿಹಿತಿಂಡಿಗಳು ಹಾಗೂ ಮನೆಯ ಉಪಯೋಗಕ್ಕೆ ಬೇಕಾದ ವಿವಿಧ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಕಲಿಸಲಾಗುತ್ತದೆ. ಆಸಕ್ತರು ತಮ್ಮ ಹೆಸರನ್ನು ಗ್ರಾಮ ಪಂಚಾಯಿತಿಯಲ್ಲಿ ನೋಂದಾಯಿಸಿಕೊಳ್ಳಬೇಕು” ಎಂದು ತಿಳಿಸಲಾಯಿತು.


ಈ ವಿಷಯವನ್ನು ಕೇಳಿದ ಮಧುಮತಿ ಕೇಶವನಿಗೆ, “ನಾನು ಈ ತರಬೇತಿಗೆ ಹೋಗಿ ಉಪ್ಪಿನಕಾಯಿ ಮತ್ತು ಸಿಹಿತಿಂಡಿ ತಯಾರಿಸುವುದನ್ನು ಕಲಿಯುತ್ತೇನೆ” ಎಂದಳು. ಕೇಶವ ಕೂಡ ಅವಳನ್ನು ಪ್ರೋತ್ಸಾಹಿಸಿದ.


ಮಧುಮತಿ ತರಬೇತಿ ಶಿಬಿರಕ್ಕೆ ಹೋಗಿ ತನ್ನ ಗೆಳತಿಯರೊಂದಿಗೆ ಸೇರಿ ಉಪ್ಪಿನಕಾಯಿ ತಯಾರಿಸುವುದನ್ನು ಕಲಿತುಕೊಂಡಳು. ಮನೆಗೆ ಬಂದ ನಂತರ ಕೇಶವನ ತೋಟದಲ್ಲಿ ಬೆಳೆದ ಮಾವು, ನಿಂಬೆ ಮತ್ತು ಹುಣಸೆಯನ್ನು ಬಳಸಿಕೊಂಡು ಉಪ್ಪಿನಕಾಯಿ ತಯಾರಿಸಲು ಆರಂಭಿಸಿದಳು.


ಅವರ ಉಪ್ಪಿನಕಾಯಿಗೆ ಉತ್ತಮ ಬೇಡಿಕೆ ಬಂದಿತು. ದಿನದಿಂದ ದಿನಕ್ಕೆ ಅವರ ಉದ್ಯಮ ಬೆಳೆಯತೊಡಗಿತು. ನಂತರ ಅವರು ಒಂದು ದೊಡ್ಡ ಉಪ್ಪಿನಕಾಯಿ ಕಾರ್ಖಾನೆಯನ್ನು ಸ್ಥಾಪಿಸಿದರು. ಕೇಶವ ಕಾರ್ಖಾನೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದನು. ಇಬ್ಬರೂ ಪರಿಶ್ರಮದಿಂದ ಕೆಲಸ ಮಾಡಿ ಸಂತೋಷದಿಂದ ಜೀವನ ನಡೆಸಿದರು.


ನೀತಿ:

ಪರಿಶ್ರಮ, ಕಲಿಯುವ ಆಸಕ್ತಿ ಮತ್ತು ಆತ್ಮವಿಶ್ವಾಸ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ.

✍️ - ಕವನ

7 ನೇ ತರಗತಿ

ಅನೇಕಾಮ್ ಶಾಲೆ 

ಬೆಂಗಳೂರು




ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top