ಕಲಬುರಗಿ: ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ಸ್ ನೀರು ಇರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶವು ಅವೈಜ್ಞಾನಿಕವಾಗಿದ್ದು ಈ ಬಗ್ಗೆ ಬಿಜೆಪಿ ಪಕ್ಷವು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ ಹಾಗೂ ರಾಜ್ಯ ಸರ್ಕಾರವು ಕೂಡಲೇ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನೆ ಸಲ್ಲಿಸಬೇಕು ಎಂದು ಡಾ.ಉಮೇಶ್ ಜಾಧವ್ ಆಗ್ರಹಿಸಿದ್ದಾರೆ.
ಕಲಬುರಗಿಯ ಜಿಲ್ಲಾ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಶನಿವಾರ (ಆಗಸ್ಟ್ 1ರಂದು) ಮಾಧ್ಯಮದವರ ಜೊತೆ ಮಾತನಾಡಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಬೇಧ ಮರೆತು ಪ್ರಯತ್ನ ಅಗತ್ಯವಾಗಿದೆ ಈ ವಿಷಯದಲ್ಲಿ ಬಿಜೆಪಿ ಪಕ್ಷದ ಸಂಸದರು ಮತ್ತು ನಾಯಕರು ಬಿಕ್ಕಟಿನ ಕುರಿತಾಗಿ ಈಗಾಗಲೇ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕೂಡ ಒತ್ತಾಯಿಸಲಾಗಿದೆ. ಆಗಸ್ಟ್ 13ರ ಕರ್ನಾಟಕ ಬಂದ್ ಕುರಿತು ಪಕ್ಷದ ವೇದಿಕೆಯಲ್ಲಿ ನಾಯಕರು ತೀರ್ಮಾನಿಸಲಿದ್ದು ಅದಕ್ಕೆ ಬದ್ಧರಾಗಿರುತ್ತೇವೆ.
ಕಾವೇರಿ ನೀರು ಬಿಡುವ ಆದೇಶದಿಂದ ಈಗ ಬಿಕ್ಕಟ್ಟು ನಿರ್ಮಾಣವಾಗಿದೆ ನಿರ್ವಹಣಾ ಪ್ರಾಧಿಕಾರದ ಆದೇಶ ಪೂರ್ಣ ಅವೈಜ್ಞಾನಿಕವಾಗಿದ್ದು ಇದು ಕರ್ನಾಟಕ ತಮಿಳುನಾಡಿನ ಜಗಳವಲ್ಲ ಕಾಂಗ್ರೆಸ್ ಹಾಗೂ ಬಿಜೆಪಿಯ ಜಗಳವು ಕೂಡ ಅಲ್ಲ ಇದು ಕಾವೇರಿ ನೀರನ್ನು ಅವಲಂಬಿತ ಶೇಕಡ 25% ರಷ್ಟು ಜನರ ಬದುಕಿನ ಪ್ರಶ್ನೆಯಾಗಿದೆ ಕುಡಿಯುವ ನೀರಿಗೆ ತತ್ವಾರ ಬಿದ್ದಾಗ ತಮಿಳುನಾಡಿನ ಬೆಳೆಗೆ ನೀರು ಹರಿಸುವುದು ಹೇಗೆ ಸಾಧ್ಯ? ವಾಸ್ತವಾಂಶ ತಿಳಿಯದೆ ನೀಡಿದ ಈ ಆದೇಶವನ್ನು ಮರುಪರಿಶೀಲಿಸಬೇಕು.
ಕಾವೇರಿ ಯಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೆ ನೀರು ಬಿಡುವುದು ತಪ್ಪಲ್ಲ. ಕಾವೇರಿv ಸಮಸ್ಯೆ ಉಡುಪನಗೊಂಡಿರುವುದರಿಂದ ತಮಿಳುನಾಡಿನ ಮುಖ್ಯಮಂತ್ರಿಗಳ ಕರ್ನಾಟಕ ಭೇಟಿಯನ್ನು ರದ್ದುಪಡಿಸಿರುವುದು ಸ್ವಾಗತರ್ಹ ಎಂದರು.
ಕಾವೇರಿ ನೀರಿನ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ಚಲನಚಿತ್ರ ಮಂಡಳಿ ವಿವಿಧ ಸಂಘ-ಸಂಸ್ಥೆಗಳು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದು ಸರಕಾರವು ಕೂಡಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕು ವಿವಾದವನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಬೇಕು ಎಂದು ಡಾ. ಜಾಧವ್ ಹೇಳಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

