ಕನ್ನಡ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ದಿವಂಗತ ಚನ್ನಬಸಪ್ಪ ಲೆಕ್ಕಿಹಾಳಗೆ ಭಾವಪೂರ್ಣ ಶ್ರದ್ಧಾಂಜಲಿ

Upayuktha
0


ಇಳಕಲ್ಲ: ಇಲ್ಲಿನ ಶ್ರೀ ವಿಜಯ ಮಹಾಂತೇಶ ಮಠದ ದಾಸೋಹ ಭವನದಲ್ಲಿ ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ಪರಿಷತ್ತಿನ ಗೌರವಾನ್ವಿತ ಅಧ್ಯಕ್ಷರಾಗಿದ್ದ ದಿವಂಗತ ಚನ್ನಬಸಪ್ಪ ಲೆಕ್ಕಿಹಾಳ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ಜರುಗಿತು.


ಎಂ. ಆರ್. ಪಾಟೀಲ್ ಮಾತನಾಡಿ "ನಮ್ಮ ಕನ್ನಡ ಜಾನಪದ ಪರಿಷತ್ತನ್ನು ಮುನ್ನಡೆಸುತ್ತಿದ್ದ ಅಧ್ಯಕ್ಷರಾದ ಚನ್ನಬಸಪ್ಪ ಲೆಕ್ಕಿಹಾಳ ಅವರ ಅಗಲಿಕೆ ಸಂಸ್ಥೆಗೆ ಹಾಗೂ ಇಡೀ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ಪರಿಷತ್ತಿನ ಏಳಿಗೆಗಾಗಿ ಅವರು ನೀಡಿದ ಕೊಡುಗೆ, ಅವರ ಸರಳತೆ ಹಾಗೂ ಅಭಿಮಾನ ಸದಾ ಸ್ಮರಣೀಯ," ಎಂದು ಅವರ ಸೇವೆಯನ್ನು ನೆನಪಿಸಿಕೊಂಡರು. 


ಸಭೆಯಲ್ಲಿ ಉಪಸ್ಥಿತರಿದ್ದ ಪರಿಷತ್ತಿನ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ದಿವಂಗತ ಚನ್ನಬಸಪ್ಪ ಲೆಕ್ಕಿಹಾಳ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ತಮ್ಮ ಆಳವಾದ ಸಂತಾಪ ಸೂಚಿಸಿದರು.ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪರಿಷತ್ತಿನ ಸರ್ವಸದಸ್ಯರು ಪ್ರಾರ್ಥಿಸಿ, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. 

 

ಸಭೆಯಲ್ಲಿ ಶಶಿಕಾಂತ ಬಂಡರಗಲ್, ಶ್ರೀ ಮಹಾಂತೇಶ ಗೊರಜನಾಳ, ಶ್ರೀ ಬಸವರಾಜ ಬಾದವಾಡಗಿ, ಇಳಕಲ್ ನಗರಸಭೆ ಮಾಜಿ ಅಧ್ಯಕ್ಷೆ ವೈಶಾಲಿ ಘಂಟಿ, ಸವಿತಾ ಹಿರೇಮಠ, ವಿಜಯಲಕ್ಷ್ಮೀ ಗರಡಿಮನಿ, ಬಸಮ್ಮ ಕರ್ಲಿ ಹಾಗೂ ಕಸ್ತೂರಿಬಾಯಿ ಮೆರವಾಡಿ ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top