ಓಣಂ ಹಬ್ಬವು ಜಾತಿ-ಮತ ಭೇದವಿಲ್ಲದ ಸೌಹಾರ್ದತೆಯ ಸಂಕೇತ: ಡಾ. ಸುರೇಶ್ ನೆಗಳಗುಳಿ
ಮಂಗಳೂರು: ಕೇರಳದ ಪ್ರಮುಖ ಹಬ್ಬವಾದ ಓಣಂ ಅನ್ನು ಕಣಚೂರ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಕಾಲೇಜಿನ ಮುಖ್ಯ ಹಾಲ್‌ನಲ್ಲಿ ಬಣ್ಣ-ಬಣ್ಣದ ಹೂಗಳಿಂದ ಸುಂದರ ಪೂಕ್ಕಳಂ ರಚಿಸಲಾಗಿತ್ತು. "HAPPY ONAM" ಎಂದು ಹೂಗಳಿಂದ ಬರೆಯಲಾಗಿತ್ತು. ಮಧ್ಯದಲ್ಲಿ ನಿಲವಿಲಕ್ಕು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಪ್ರಭಾ, ವೈದ್ಯಕೀಯ ಸಲಹೆಗಾರರಾದ ಡಾ. ಸುರೇಶ್ ನೆಗಳಗುಳಿ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಕಾರ್ತಿಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೋಧಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುರೇಶ್ ನೆಗಳಗುಳಿ ಅವರು, "ಓಣಂ ಹಬ್ಬವು ಜಾತಿ-ಮತ ಭೇದವಿಲ್ಲದೇ ಎಲ್ಲರೂ ಒಟ್ಟಾಗಿ ಆಚರಿಸುವ ಸೌಹಾರ್ದತೆಯ ಹಬ್ಬ. ಇದು ಒಗ್ಗಟ್ಟು, ಸಮಾನತೆ ಮತ್ತು ಸಂತೋಷದ ಸಂಕೇತ. ಇಂತಹ ಕಾರ್ಯಕ್ರಮಗಳು ನಮ್ಮೆಲ್ಲರನ್ನು ಒಂದಾಗಿಸುತ್ತದೆ" ಎಂದು ಅಭಿಪ್ರಾಯಪಟ್ಟರು.
ಡಾ. ವಿದ್ಯಾಪ್ರಭಾ ಅವರು ಓಣಂ ಶುಭಾಶಯಗಳನ್ನು ಕೋರುತ್ತಾ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳ ಉತ್ಸಾಹವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಗುಂಪು ಫೋಟೋ ತೆಗೆಸಿಕೊಂಡರು. ಬಳಿಕ ಸಾಂಪ್ರದಾಯಿಕ ಖಾದ್ಯಗಳೊಂದಿಗೆ *ಓಣಂ ಸದ್ಯ*ವನ್ನು ಏರ್ಪಡಿಸಲಾಗಿತ್ತು.
ಒಟ್ಟಾರೆ ಕಣಚೂರ್ ಆಯುರ್ವೇದ ಕಾಲೇಜಿನ ಆವರಣದಲ್ಲಿ ದಿನವಿಡೀ ಓಣಂ ಸಂಭ್ರಮ ಮನೆಮಾಡಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

