ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣ: ಡಾ ಸುರೇಶ ನೆಗಳಗುಳಿ

Upayuktha
0

ಕಣಚೂರು ಆಯುರ್ವೇದದಿಂದ "ಆಯುಗ್ರಾಮ 3.0" ಉದ್ಘಾಟನೆ ಮತ್ತು ಉಚಿತ ವೈದ್ಯಕೀಯ ಶಿಬಿರ




ಮಂಗಳೂರು: ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ "ಆಯುಗ್ರಾಮ 3.0" ಉದ್ಘಾಟನಾ ಸಮಾರಂಭ ಹಾಗೂ ಉಚಿತ ವೈದ್ಯಕೀಯ ಶಿಬಿರವನ್ನು 02 ಆಗಸ್ಟ್ 2026, ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಅಸ್ಸೆಗೋಳೆಯ ಶ್ರೀ ಆಯ್ಯಪ್ಪ ಸ್ವಾಮಿ ಮಂದಿರದ (ವಿಶ್ವರೂಪಧಾಮ ಸಭಾಂಗಣ) ಆವರಣದಲ್ಲಿ ನಡೆಸಲಾಯಿತು.


ಪರಂಜ್ಯೋತಿ ಮಾತೃಮಂಡಳಿ, ಆಯ್ಯಪ್ಪ ಸ್ವಾಮಿ ದೇವಸ್ಥಾನ, ಅಸ್ಸೆಗೋಳಿ ಇದರ ಅಧ್ಯಕ್ಷೆ ಶ್ರೀಮತಿ ನಾಗವೇಣಿ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಆಯ್ಯಪ್ಪ ಸ್ವಾಮಿ ಮಂದಿರ, ಅಸ್ಸೆಗೋಳಿ ಇದರ ಟ್ರಸ್ಟಿ ಚೇತನ್ ಅವರು ಭಾಗವಹಿಸಿದ್ದರು.


ಹಾಗೆಯೇ ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮುಖ್ಯ ಸಲಹೆಗಾರ ಡಾ. ಸುರೇಶ್ ನೆಗಳಗುಳಿ ಇವರು ಅಧ್ಯಕ್ಷತೆ ವಹಿಸಿದ್ದರು. ಅವರು ಗೊತ್ತಿದ್ದೂ ಮಾಡುವ ತಪ್ಪುಗಳು ಹಾಗೂ ಇಂದ್ರಿಯಗಳ ದುರ್ಬಳಕೆ ರೋಗ ಉತ್ಪಾದನೆಯ ಪ್ರಧಾನ ಅಂಶಗಳು ಮತ್ತು ಅವುಗಳ ಸದ್ಭಳಕೆ ಬಗ್ಗೆ ತಿಳಿಸುತ್ತಾ ಕಣಚೂರು ಹಾಜಿ ಮೋನು ಮತ್ತು ನಿರ್ದೇಶಕ ಅಬ್ದುಲ್ ರಹಿಮಾನ್ ಅವರ ಪರಿಶ್ರಮ ಹಾಗೂ ನುರಿತ ವೈದ್ಯರು ಇರುವ ಕಣಚೂರು ಆಯುರ್ವೇದ ಆಸ್ಪತ್ರೆಯ ಬಗ್ಗೆ ವಿವರಿಸಿದರು.


ಇನ್ನೋರ್ವ ಮುಖ್ಯ ಆತಿಥಿ ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕಿ ಹಾಗೂ ನೇತ್ರ ಕಿವಿ ಮೂಗು ಗಂಟಲು ತಜ್ಞೆ ಡಾ ದೀನಮಂಜು ಶೆಟ್ಟಿ ಅವರು ಮಾತನಾಡುತ್ತಾ ಆಯುರ್ವೇದದ ಮೂಲ ಸಿದ್ದಾoತ ಹಾಗೂ ಚಿಕಿತ್ಸೆಯ ಮಹತ್ವ ವನ್ನು ತಿಳಿಸಿದರು.


ಶಿಬಿರ ಸಾರಥಿ  ವೈದ್ಯಾಧಿಕಾರಿ ಡಾ ಚರಣ್ ಎಲಿಯಾಣ ಅವರು ಶಿಬಿರದ ಉದ್ದೇಶಗಳನ್ನು ಹೇಳುತ್ತಾ ಆಯುರ್ವೇದ ಮೂಲಕ ಸಮಾಜದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ತಲುಪಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ಸಮಾಲೋಚನೆ ಮತ್ತು ಆಯುರ್ವೇದ ಚಿಕಿತ್ಸೆಯ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದು ವಿವರಿಸಿ ಧನ್ಯವಾದ ಸಮರ್ಪಿಸಿದರು.


ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು ವಿಶ್ವವಿದ್ಯಾಲಯ ರಸ್ತೆ, ನಾಟೆಕಲ್, ದೇರಳಕಟ್ಟೆ, ಮಂಗಳೂರು- 575018 ರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆಯಲು ಕೋರಿದರು.


ಡಾ ಐಶ್ವರ್ಯ ವೇದಿಕೆಯಲ್ಲಿದ್ದರು. ನುರಿತ ವೈದ್ಯರೂ ಸಿಸ್ಟರ್ ಎಮ್ಮಿ ಮತ್ತಿತರರು ಶಿಬಿರದಲ್ಲಿ ಸಹಕರಿಸಿದರು. ವಿದ್ಯಾರ್ಥಿ ನಾಯಕಿ ಕೀರ್ತನಾ ನಿರೂಪಿಸಿದರು. ವ್ಯೆಷ್ಣವಿ ಜಿ ಆಚಾರ್ಯ ಸ್ವಾಗತಿಸಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top