ಮುಜುಂಗಾವು: ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವಿನಲ್ಲಿ ದಿನಾಂಕ 15/08/2026 ನೇ ಶನಿವಾರದಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಭಕ್ತಿ ಮತ್ತು ದೇಶಭಕ್ತಿಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮವು ರಾಷ್ಟ್ರಧ್ವಜಾರೋಹಣದೊಂದಿಗೆ ಆರಂಭವಾಯಿತು. ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್, ಬೆಜಪ್ಪೆ ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. 'ಇಂದಿನ ಮಕ್ಕಳೇ ಮುಂದಿನ ಜನಾಂಗ' ಇಂದಿನ ಯುವ ಪೀಳಿಗೆಗಳಾದ ನೀವು ಮುಂದಿನ ವಿಕಸಿತ ಭಾರತಕ್ಕೆ ನಾಂದಿಯಾಗಬೇಕು ಎಂದು ಕರೆ ನೀಡಿದರು. ನಂತರ ರಾಷ್ಟ್ರಗೀತೆ, ಧ್ವಜಗೀತೆ ಹಾಗೂ ಪ್ರತಿಜ್ಞೆಯೊಂದಿಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಕ್ತಾಯಗೊಂಡಿತು.
ಇದರ ಜೊತೆಗೆ ರಾಮಾಯಣ ಮಾಸಾಚರಣೆಯ ಸಮಾರೋಪದ ಅಂಗವಾಗಿ ಶ್ರೀ ಪುಂಡರಿಕಾಕ್ಷ ಆಚಾರ್ಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ರಾಮಾಯಣದ ಮೌಲ್ಯಗಳು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಮೂಲಕ ದೇಶಭಕ್ತಿ, ಏಕತೆ ಮತ್ತು ರಾಷ್ಟ್ರದ ಗೌರವವನ್ನು ಬೆಳೆಸುವ ಸಂದೇಶ ನೀಡಲಾಯಿತು. ರಾಮಾಯಣ ಮಾಸಾಚರಣೆಯ ಮೂಲಕ ಸತ್ಯ, ಧರ್ಮ, ಕರ್ತವ್ಯ ಮತ್ತು ಉತ್ತಮ ಜೀವನಮೌಲ್ಯಗಳನ್ನು ಪಾಲಿಸುವ ಪ್ರೇರಣೆ ದೊರೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶ್ಯಾಮ್ ಭಟ್ ದರ್ಬೆ ಮಾರ್ಗ, ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ, ಅಧ್ಯಾಪಕ ವೃಂದ ಹಾಗೂ ರಕ್ಷಕರು ಉಪಸ್ಥಿತರಿದ್ದರು.ಕಾರ್ಯಕ್ರಮವು ಎಲ್ಲರ ಸಹಭಾಗಿತ್ವದಿಂದ ಯಶಸ್ವಿಯಾಗಿ ನೆರವೇರಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

