ಇಳಕಲ್: ಡಾ. ಶೋಭಾ ನಾಡಗೌಡಗೆ ಡಾಕ್ಟರೇಟ್ ಪದವಿ

Upayuktha
0

ಇಳಕಲ್‌: ನಗರದ ಶಿವಾನಿ ಆಸ್ಪತ್ರೆಯ ವೈದ್ಯರು ಹಾಗೂ ಎಸ್ ವಿ ಎಂ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಡಾ. ಶೋಭಾ ನಾಡಗೌಡ ಅವರಿಗೆ ಆಯುರ್ವೇದದಲ್ಲಿ ಪಿಎಚ್.ಡಿ ಪದವಿಯಲ್ಲಿ ಒಡಿಶಾದ ಪ್ರಸಿದ್ಧ ಉತ್ಕಲ್ ವಿಶ್ವವಿದ್ಯಾಲಯದಿಂದ ಆಯುರ್ವೇದ ವಿಷಯದಲ್ಲಿ ಗೌರವಾನ್ವಿತ ಡಾಕ್ಟರ್ ಆಫ್ ಫಿಲಾಸಫಿ (Ph.D.) ಪದವಿಗೆ ಭಾಜನರಾಗಿದ್ದಾರೆ.


ವಿಶ್ವವಿದ್ಯಾಲಯದ ಇತ್ತೀಚಿನ ಅಧಿಕೃತ ಪ್ರಕಟಣೆಯ ಘೋಷಣೆಯ ಸಂದರ್ಭದಲ್ಲಿ, ಡಾ. ಶೋಭಾ ನಾಡಗೌಡ ಅವರು ಆಯುರ್ವೇದದ ಪ್ರಸೂತಿ ತಂತ್ರ (Prasutitantra) ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧ ವಿಭಿನ್ನವಾಗಿದ್ದು ವಿಶೇಷವಾಗಿ ಮಹಿಳೆಯರ ಪಿಸಿಓಎಸ್ (PCOS) ಸಂದರ್ಭದಲ್ಲಿ ಆಗುವ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಅಧ್ಯಯನ ಆಧಾರವಾಗಿಟ್ಟುಕೊಂಡು ಮಂಡಿಸಿದ ವಿಷಯಕ್ಕಾಗಿ ಈ ಉನ್ನತ ಪದವಿಯನ್ನು ನೀಡಲಾಗಿದೆ.


ವೈದ್ಯಕೀಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಇಳಕಲ್ ಮತ್ತು ಬಾಗಲಕೋಟೆ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಡಾ. ಶೋಭಾ ಬಿ. ನಾಡಗೌಡ ಅವರ ಮಹಿಳೆಯರ ಸಲುವಾಗಿ ಇಂತ ವಿಭಿನ್ನ ವಿಷಯವನ್ನು ಆಯ್ದುಕೊಂಡು ಪ್ರಸೂತಿ ಪಿ ಸಿ ಓ ಎಸ್ ವಿಷಯವನ್ನು ಆಧಾರವಾಗಿಟ್ಟುಕೊಂಡು ಬಹಳ ನಿರಂತರ ಶ್ರಮ ಆವಿರತ ಪರಿಣಿತಿಯೊಂದಿಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


ಈ ಸಾಧನೆಗೆ ಸ್ಥಳೀಯರು, ವೈದ್ಯಕೀಯ ವಲಯ ಹಾಗೂ ಪ್ರಾಧ್ಯಾಪಕ ಬಳಗದವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಕುರಿತು ಅಧ್ಯಯನ ಮಾಡಿ ಅದರಿಂದಾಗುವ ಸಮಸ್ಯೆಗಳಿಂದ ಹೊರಬರಲು ಪರಿಹಾರ ಕಂಡುಕೊಂಡ ಡಾ. ಶೋಭಾ ನಾಡಗೌಡ ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗೆ ಶುಭಾಶಯ ತಿಳಿಸಿದ್ದಾರೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top