ಹೊಸಬೆಟ್ಟು: ಯುವ ಚೇತನ ಹೊಸಬೆಟ್ಟು ಕುಳಾಯಿ ನೂತನ ಪದಾಧಿಕಾರಿಗಳ ಆಯ್ಕೆ

Upayuktha
0

ಸುರತ್ಕಲ್/ಹೊಸಬೆಟ್ಟು: ನವಗಿರಿ ಸೇವಾ ಟ್ರಸ್ಟ್ (ರಿ.) ಹೊಸಬೆಟ್ಟು ಇದರ ಬ್ರಾಹ್ಮಣ ಯುವ ಸಂಘಟನೆಯಾದ 'ಯುವ ಚೇತನ ಹೊಸಬೆಟ್ಟು ಕುಳಾಯಿ' ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷರಾದ ಶ್ರೀ ಪ್ರಶಾಂತ್ ರಾವ್ ಹೆಚ್. ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.


ಸಭೆಯಲ್ಲಿ 2026-2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು. ನೂತನ ಸಾಲಿನ ಗೌರವಾಧ್ಯಕ್ಷರಾಗಿ ಅಗರಿ ರಾಘವೇಂದ್ರ ರಾವ್, ಗೌರವ ಕಾರ್ಯದರ್ಶಿಯಾಗಿ ಪಿ. ವಿ. ಗಿರೀಶ್ ಹಾಗೂ ಅಧ್ಯಕ್ಷರಾಗಿ ಅರುಣ್ ಕೆ. ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.


ಅಂತೆಯೇ ಉಪಾಧ್ಯಕ್ಷರಾಗಿ ಪ್ರಶಾಂತ್ ರಾವ್ ಹೆಚ್., ಕಾರ್ಯದರ್ಶಿಯಾಗಿ ವಿಕ್ರಮ್ ಮೈರ್ಪಾಡಿ, ಜಂಟಿ ಕಾರ್ಯದರ್ಶಿಯಾಗಿ ರಾಜೇಂದ್ರ ಹೆಚ್. ಯು., ಖಜಾಂಚಿಯಾಗಿ ಅಮಿತ್ ಹತ್ವಾರ್ ಮತ್ತು ಜಂಟಿ ಖಜಾಂಚಿಯಾಗಿ ದೀಪಕ್ ರಾವ್ ಅವರು ಆಯ್ಕೆಯಾಗಿದ್ದಾರೆ. 


ಸಂಘಟನೆಯ ಕ್ರೀಡಾ ಕಾರ್ಯದರ್ಶಿಗಳಾಗಿ ಅನುದೀಪ್ ಕಾರಂತ್ ಹಾಗೂ ಸಾತ್ವಿಕ್ ಹೆಚ್. ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ನೂತನವಾಗಿ ಆಯ್ಕೆಯಾದ ಸರ್ವ ಪದಾಧಿಕಾರಿಗಳಿಗೆ ಸಂಘಟನೆಯ ಹಿರಿಯರು, ಸಲಹೆಗಾರರು ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top