ಮನುಷ್ಯರು ಸಾಮಾನ್ಯವಾಗಿ ತಮ್ಮ ಕಷ್ಟಗಳನ್ನು ಅಥವಾ ದುಃಖವನ್ನು ಬೇರೆಯವರ ಮುಂದೆ ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಒಬ್ಬ ವ್ಯಕ್ತಿ ಹೊರಗಡೆ ನಗುನಗುತ್ತಾ, ಬಹಳ ಸಂತೋಷವಾಗಿರುವಂತೆ ಕಂಡರೂ, ಆತನ ಒಳಮನಸ್ಸಿನಲ್ಲಿ ಯಾರಿಗೂ ಹೇಳಿಕೊಳ್ಳಲಾಗದ ಸಾಕಷ್ಟು ನೋವುಗಳು, ಒಂಟಿತನ ಅಥವಾ ಸಂಕಟಗಳು ಅಡಗಿರುತ್ತವೆ. ಈ ದಿನಮಾನದಲ್ಲಿ ಕೆಲಸ ಸಂಪಾದನೆ ನಾಮೇಲು ನೀ ಮೇಲು ಎನ್ನುತ್ತಾ ಸಂತೋಷ ಸಂಬಂಧ ಮರೆಮಾಚುತ್ತಿದ್ದೆ.
ನಾವು ಜಗತ್ತಿಗೆ ತೋರಿಸುವುದು ನಮ್ಮ ಜೀವನದ ಕೇವಲ ಒಂದು ಸಣ್ಣ, ಸುಂದರವಾದ ಭಾಗವನ್ನು ಮಾತ್ರ. ನಮ್ಮ ನಿಜವಾದ ಹೋರಾಟಗಳು, ನಿರಾಸೆಗಳು ಮತ್ತು ಕಣ್ಣೀರು ನಮ್ಮ ಮನಸ್ಸಿನ ಆಳದಲ್ಲೇ ಭದ್ರವಾಗಿ ಉಳಿದುಬಿಡುತ್ತವೆ.
ಅಪ್ಪನ ಆದಾಯ ಮಕ್ಕಳ ಶಾಲೆಗೆ ಸಾಕಾದ್ರೆ ಅಮ್ಮನ ಕೆಲಸ ಮನೆಗೆ ಮೀಸಲಾಗಿದೆ ಇನ್ನೂ ಸಂಬಂಧಗಳು ಆಪಾದನೆಯ ಸವಾಲುಗಳಿಗೆ ಕಾರಣ ವಾಗುತ್ತವೆ ಹೊರತು ಆಸರೆ ಯಾಗುತಿಲ್ಲ.
ಕೆಲವು ನೋವುಗಳನ್ನು ನಮ್ಮ ಆಪ್ತರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರು ನಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲವೇನೋ ಎಂಬ ಭಯ, ಅಥವಾ ಇತರರಿಗೆ ನಮ್ಮಿಂದ ಹೊರೆಯಾಗಬಾರದು ಎಂಬ ಕಾಳಜಿ ನಮ್ಮನ್ನು ಮೌನಿಯನ್ನಾಗಿಸುತ್ತದೆ.
ಅಪ್ಪನ ಆರೋಗ್ಯ ಬಗ್ಗೆ ಯೋಚಿಸಬೇಕು ಅಮ್ಮನ ಆಶ್ರಯದ ಮಾತುಗಳ ಕೇಳಬೇಕು ಅಥವಾ ಹೆಂಡತಿಯ ಬೇರೆಯಾಗಬೇಕು ಅನ್ನುವ ಆಶಯ ಇರೆಡಿಸಬೇಕು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದು ತಿಳಿವುವಲ್ಲಿ ತಿಂಗಳ ಸಂಬಳ ಸಾಕಾಗದಂತಾಗುತ್ತದೆ.
ಪ್ರೀತಿಸಿದ ಹುಡುಗಿ ಬಗ್ಗೆ ಯೋಚಿಸಲು ಬಿಡದ ಈ ನಮ್ಮ ಜೀವನ ಶೈಲಿ ಹೇಗೆ ಎಂಬುದನ್ನು ನಾವು ಒಮ್ಮೆ ತಿರುಗಿ ನೋಡುವ ಅಷ್ಟರಲ್ಲಿ ಖುಷಿಪಡುವ ಸಮಯ ಕಳೆದು ಹೋಗಿ ನಮ್ಮ ಜೀವನದ ಕೊನೆಯ ಮಹಡಿಯ ತಲುಪುವ ಸಮಯ ಬಂದಾಯಿತು ಎಂದು ಅರಿವಾಗುವುದು ಮುಚ್ಚಿಟ್ಟ ನೋವುಗಳಿಗೆ ಮೌನವೇ ದೊಡ್ಡ ಅಭಿವ್ಯಕ್ತಿ. ಅದು ಹೊರಗಡೆ ಎಷ್ಟೇ ಶಾಂತವಾಗಿ ಕಂಡರೂ, ಒಳಗಡೆ ದೊಡ್ಡ ಬಿರುಗಾಳಿಯೇ ಬೀಸುತ್ತಿರುತ್ತದೆ.
ನಿಜಾ ಅಲ್ಲವೇ ಗೆಳೆಯರೆ ?
ಈ ನೋವುಗಳು ನಮಗೆ ಒಮ್ಮೊಮ್ಮೆ ವಿಪರೀತ ಭಾರವೆನಿಸಿದರೂ, ಇವೇ ನಮ್ಮನ್ನು ಹೆಚ್ಚು ಪ್ರಬುದ್ಧರನ್ನಾಗಿ, ಬಲಿಷ್ಠರನ್ನಾಗಿ ಮತ್ತು ಇತರರ ಕಷ್ಟಗಳನ್ನು ಅರ್ಥಮಾಡಿಕೊಳ್ಳುವಷ್ಟು ಸಹಾನುಭೂತಿಯುಳ್ಳವರನ್ನಾಗಿ ರೂಪಿಸುತ್ತವೆ. ಜಗತ್ತಿನಲ್ಲಿ ಪ್ರತಿಯೊಬ್ಬರ ನಗುವಿನ ಹಿಂದೆಯೂ ಯಾರಿಗೂ ತಿಳಿಯದ ಒಂದು ಕಥೆಯಿರುತ್ತದೆ.
ಬಿಚ್ಚಿಟ್ಟ ಖುಷಿಗಿಂತ ಮುಚ್ಚಿಟ್ಟ ನೋವುಗಳೇ ಹೆಚ್ಚು ಅನ್ನುವ ನನ್ನ ಭಾವನೆ ಸರಿ ಎಂದೆನಿಸುತ್ತದೆ ........
- ಶ್ರೀ ಬಸವರಾಜ ರಾಮತೀರ್ಥ
ಕೆರೂರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

