ಗುರು ಎಂದರೆ ಜೀವನದ ಮಾರ್ಗದರ್ಶಕ: ಮಮತಾ ಶೆಟ್ಟಿ

Upayuktha
0


ಮಂಗಳೂರು: ಗುರು ಎಂದರೆ ಕೇವಲ ಪಾಠಕಲಿಸಿದವರು ಮಾತ್ರ ಅಲ್ಲ ಜೀವನದಲ್ಲಿ ಮಾಡುವ ತಪ್ಪುಗಳನ್ನು ತಿದ್ದಿ ನಮ್ಮನ್ನು ಸರಿದಾರಿಗೆ ಕಳುಹಿಸುವ ಜೀವನದ ಮಾರ್ಗದರ್ಶಕ ಎಂದು ಮಿಲಾಗ್ರೇಸ್‌ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮತಾ ಎಂ ಹೇಳಿದರು. 


ಅಖಿಲ ಬಾರತೀಯ ಸಾಹಿತ್ಯ ಪರಿಷದ್‌ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಕುದ್ರೋಳಿಯ ಶ್ರೀ ನಾರಾಯಣ ಗುರು ಕಾಲೇಜಿನಲ್ಲಿ ನಡೆದ ವ್ಯಾಸ ಜಯಂತಿ ಮತ್ತು ಗುರು ಪೂರ್ಣಿಮೆಯ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಭಾಗವಹಿಸಿದ್ದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಶೆಟ್ಟಿ ಅವರು ಮಾತನಾಡಿ ಆಖಿಲ ಭಾರತೀಯ ಸಾಹಿತ್ಯ ಪರಿಷದ್‌ ಸಾಹಿತ್ಯಕ್ಕಾಗಿ ಬಹಳಷ್ಟು ಕಾರ್ಯ ಮಾಡುತ್ತಿದೆ. ನಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮದ ಆಯೋಜನೆ ,ಆಡಿ ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಉತ್ತಮ ಮಾರ್ಗದರ್ಶನ ನೀಡಿ ನಮ್ಮ ವಿದ್ಯಾರ್ಥಿಗಳಲ್ಲಿ ಗುರು ಭಕ್ತಿಯನ್ನು ಹೆಚ್ಚಿಸಿದ್ದೀರಿ ಎಂದು ಅಭಿನಂದನೆಯ ಮಾತುಗಳನ್ನಾಡಿದರು. 


ವೇದಿಕೆಯಲ್ಲಿ ಅಭಾಸಾಪ ಜಿಲ್ಲಾ ಸಮಿತಿಯ ಅಧ್ಯಕ್ಷೆ ವೀಣಾ ಟಿ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಲತೇಶ್‌ ಬಾಕ್ರಬೈಲು ಸ್ವಾಗತಿಸಿರು ಮತ್ತು ಕಾಲೇಜಿನ ವಿದ್ಯಾರ್ಥೀ ಕ್ಷೇಮಪಾಲನಾ ಅಧಿಕಾರಿ ಕಿಶೋರ್‌ ಎಸ್‌ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಸಹ ಕಾರ್ಯದರ್ಶಿ ಗೀತಾ ಲಕ್ಷ್ಮೀಶ್‌ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top