ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭಾಭವನದ ಕಾಮಗಾರಿ ಪ್ರಗತಿ ಪರಿಶೀಲನೆ

Upayuktha
0


ಮುಲ್ಕಿ: ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ  ನಿರ್ಮಾಣ ಹಂತದಲ್ಲಿ ಇರುವ ಹವಾ ನಿಯoತ್ರಿತ  ಸಭಾ ಭವನದ ಕಾಮಗಾರಿಯ ಪ್ರಗತಿಯ ಬಗ್ಗೆ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಸಭೆ ಜರಗಿ ಕಾಮಗಾರಿಯ ವೀಕ್ಷಣೆಯನ್ನು ಮಾಡಲಾಯಿತು.



ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಸಭಾಭವನದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಲ್ಲರ ಸಹಕಾರ ಬೇಕು ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.


ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಜೊತೆ ಕಾರ್ಯದರ್ಶಿ  ಚಂದ್ರಹಾಸ ಶೆಟ್ಟಿ ರಂಗೋಲಿ, ಯುವ ವಿಭಾಗದ ಕಾರ್ಯಾಧ್ಯಕ್ಷ  ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ, ಆರ್ಕಿಟೆಕ್ಟ್ ಗೋಪಾಲ್ ಭಟ್ ಎ ಜಿ ಅಸೋಸಿಯೇಟ್ ಉಡುಪಿ ತಾರಾನಾಥ್ ಶೆಟ್ಟಿ ಮುಂಬೈ, ಸಹಾಯಕ ಇಂಜಿನಿಯರ್ ಧೀರಜ್ ಉಡುಪಿ,  ನಿರ್ಮಾಣ ಕಾಮಗಾರಿಯ ಕಂಟ್ರಾಕ್ಟರ್ ಶಿವಪ್ರಸಾದ್ ರೈ, ರವಿ ರಾಜ್ ಶೆಟ್ಟಿ ಜತ್ತಬೆಟ್ಟು, ಹಾಗೂ ಹವಾ ನಿಯಂತ್ರಣ ಸರಬರಾಜುದಾರ ಎಲೆಕ್ಟ್ರಿಕಲ್ ಕಾಮಗಾರಿಯ ಮುಖ್ಯಸ್ಥರು ಹಾಗೂ ಕನ್ಸಲ್ಟೆಂಟ್ ಫಾಲ್ಸ್ ಸೀಲಿಂಗ್, ಸೌಂಡ್ ಸಿಸ್ಟಮ್, ಅಕೋಸ್ಟಿಕ್ ಅಳವಡಿಕೆದಾರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top