ಮಂಗಳೂರು: ದೈವಜ್ಞ ಸಮಾಜದ ಹೊಸ ತಲೆಮಾರಿನ ಯುವಕ–ಯುವತಿಯರನ್ನು ಒಂದೇ ವೇದಿಕೆಯಡಿ ಸಂಘಟಿಸಿ, ಅವರ ಪ್ರತಿಭೆ, ನಾಯಕತ್ವ, ವೃತ್ತಿಪರ ಸಂಪರ್ಕ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದೈವಜ್ಞ ವಿದ್ವತ್ ಪರಿಷತ್ (Daivajna Vidwath Parishad – DVP) ವತಿಯಿಂದ ನೂತನವಾಗಿ ರೂಪಿಸಲಾಗಿರುವ ‘Gen Z DVP’ ಯುವ ವೇದಿಕೆಗೆ ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ಚಾಲನೆ ನೀಡಲಾಗುತ್ತಿದೆ.
ಶಿಕ್ಷಣ, ಉದ್ಯೋಗ, ಉದ್ಯಮ, ತಂತ್ರಜ್ಞಾನ, ಕಾನೂನು, ಕಲೆ–ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ದೈವಜ್ಞ ಯುವಜನರನ್ನು ಪರಸ್ಪರ ಸಂಪರ್ಕಿಸಿ, ಅವರಲ್ಲಿರುವ ಪ್ರತಿಭೆ ಮತ್ತು ಹೊಸ ಆಲೋಚನೆಗಳನ್ನು ಸಮಾಜದ ಪ್ರಗತಿಗೆ ಬಳಸಿಕೊಳ್ಳುವುದು Gen Z DVPಯ ಪ್ರಮುಖ ಉದ್ದೇಶವಾಗಿದೆ.
ಯುವಜನರಲ್ಲಿ ಸಮಾಜದ ಪರಂಪರೆ, ಸಂಸ್ಕಾರ ಮತ್ತು ಮೌಲ್ಯಗಳ ಬಗ್ಗೆ ಅಭಿಮಾನ ಬೆಳೆಸುವುದರ ಜೊತೆಗೆ ಆಧುನಿಕ ಚಿಂತನೆ, ನಾಯಕತ್ವ, ವೃತ್ತಿಪರ ನೆಟ್‌ವರ್ಕಿಂಗ್ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ಆಶಯವನ್ನು ಈ ವೇದಿಕೆ ಹೊಂದಿದೆ.
ಯುವಕರಿಂದಲೇ ಮುನ್ನಡೆಯಲಿರುವ Gen Z DVP
ವಿಶೇಷವಾಗಿ ಯುವಕರಿಂದಲೇ ಯುವಕರಿಗಾಗಿ ಈ ವೇದಿಕೆಯನ್ನು ಮುನ್ನಡೆಸುವ ಉದ್ದೇಶದಿಂದ Gen Z DVP Admin Team ರಚಿಸಲಾಗಿದೆ.
Gen Z DVP Admin Teamನಲ್ಲಿ ಬೆಂಗಳೂರಿನ ಪಾರ್ವತಿ ಜಿ. ವೆರ್ಣೇಕರ್ (ಸರಕಾರಿ ಉದ್ಯೋಗಿ), ಹುಬ್ಬಳ್ಳಿಯ B.A. LL.B. (Hons) ಕಾನೂನು ವಿದ್ಯಾರ್ಥಿನಿ ಪ್ರಾಚಿ ರೇವಣ್ಕರ್, ಮಂಗಳೂರಿನ ಎಲೆಕ್ಟ್ರಾನಿಕ್ಸ್ B.Sc. ಪದವೀಧರ ಹಾಗೂ ಸ್ವರ್ಣಕಾರ ಯು. ವಿನಾಯಕ ಶೇಟ್, M.Tech ಪದವೀಧರೆ ಮುರುಡೇಶ್ವರದ ಸಹನಾ ಶಾಂತೇಶ್ ರೇವಣ್ಕರ್ ಸೇರಿದಂತೆ ಯುವ ಪ್ರತಿನಿಧಿಗಳು ಆಡ್ಮಿನ್ಸ್ ಕಾರ್ಯನಿರ್ವಹಿಸಲಿದ್ದಾರೆ.
ವಿವಿಧ ನಗರಗಳು ಹಾಗೂ ವಿಭಿನ್ನ ಶೈಕ್ಷಣಿಕ–ವೃತ್ತಿಪರ ಹಿನ್ನೆಲೆಯಿಂದ ಯುವಜನರನ್ನು Admin Teamಗೆ ಸೇರಿಸಿರುವುದು Gen Z DVPಯ ವಿಶೇಷತೆಯಾಗಿದೆ.
Learn • Lead • Serve • Inspire
ಯುವಜನರಿಗಾಗಿ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ, ಉದ್ಯೋಗ ಹಾಗೂ ಉದ್ಯಮಾವಕಾಶಗಳ ಮಾಹಿತಿ ವಿನಿಮಯ, ವೃತ್ತಿಪರ ನೆಟ್‌ವರ್ಕಿಂಗ್, ಯುವ ಸಾಧಕರ ಪರಿಚಯ, ಪ್ರತಿಭಾ ಪ್ರೋತ್ಸಾಹ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು Gen Z DVP ಹೊಂದಿದೆ.
“Learn • Lead • Serve • Inspire” ಎಂಬ ಧ್ಯೇಯದೊಂದಿಗೆ ಯುವಕರ ಹೊಸ ಆಲೋಚನೆ ಮತ್ತು ಹಿರಿಯರ ಅನುಭವ–ಮಾರ್ಗದರ್ಶನವನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸುವ ಪ್ರಯತ್ನ ಇದಾಗಿದೆ.
ಪರಂಪರೆಯ ಬೇರು – ಭವಿಷ್ಯದ ದೃಷ್ಟಿ
ದೈವಜ್ಞ ಸಮಾಜದ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯ ಬೇರುಗಳನ್ನು ಉಳಿಸಿಕೊಂಡು, ಹೊಸ ಪೀಳಿಗೆಯನ್ನು ಆಧುನಿಕ ಜಗತ್ತಿನ ಅವಕಾಶಗಳಿಗೆ ಸಜ್ಜುಗೊಳಿಸುವುದು ಈ ಯುವ ವೇದಿಕೆಯ ಆಶಯವಾಗಿದೆ.
“Young Minds • Strong Values • Brighter Tomorrow” ಎಂಬ ಪರಿಕಲ್ಪನೆಯೊಂದಿಗೆ ರೂಪುಗೊಂಡಿರುವ Gen Z DVP, ದೈವಜ್ಞ ಯುವಶಕ್ತಿಯ ಸಂಪರ್ಕ, ಪ್ರತಿಭೆ ಮತ್ತು ನಾಯಕತ್ವಕ್ಕೆ ಹೊಸ ವೇದಿಕೆಯಾಗುವ ನಿರೀಕ್ಷೆಯಿದೆ.
ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ಆರಂಭಗೊಳ್ಳುತ್ತಿರುವ Gen Z DVP, ದೈವಜ್ಞ ಸಮಾಜದ Gen Z ಪೀಳಿಗೆಯನ್ನು ಒಂದೆಡೆ ಸೇರಿಸಿ, ಅವರ ಶಕ್ತಿ, ಪ್ರತಿಭೆ ಮತ್ತು ಹೊಸ ಚಿಂತನೆಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವ ಹೊಸ ಅಧ್ಯಾಯಕ್ಕೆ ಚಾಲನೆ ನೀಡಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

