ಉದ್ಯಮಿ ಮಾಲಾ ಕಣ್ಣಿಗೆ ಜನ್ಮದಿನದ ಅಭಿನಂದನಾ ಸಮಾರಂಭ

Upayuktha
0

* ಸೇವೆ ಜೀವನ ತತ್ವವಾದಾಗ ಬದುಕು ಸಾರ್ಥಕ

* ಉದ್ಯಮಿ ಮಾಲಾ ಕಣ್ಣಿಗೆ ಜನ್ಮ ದಿನದ ಸನ್ಮಾನದಲ್ಲಿ ಸುರೇಶ್ ಬಡಿಗೇರ್




ಕಲಬುರಗಿ: ಸೇವೆಯೇ ಜೀವನ ತತ್ವ ಮಾಡಿ ಜನಮುಖಿಯಾದಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸುರೇಶ ಬಡಿಗೇರ ಅಭಿಪ್ರಾಯಪಟ್ಟರು.


ಕಲಬುರಗಿಯ ಹೋಟೆಲ್, ವಸತಿ ಮತ್ತು ಬೇಕರಿ ಮಾಲೀಕರ ಸಂಘದ ಆಶ್ರಯದಲ್ಲಿ ಆಗಸ್ಟ್ 18ರಂದು ಮಂಗಳವಾರ ನಗರದ ಸಾರ್ವಜನಿಕ ಉದ್ಯಾನವನದ ಶ್ರೀ ಯಾತ್ರಿಕ ನಿವಾಸ ಸಭಾಂಗಣದಲ್ಲಿ 4 ಚಕ್ರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಹಾಗೂ ಉದ್ಯಮಿ ಮಾಲಾ ಕಣ್ಣಿ ಅವರಿಗೆ ಹುಟ್ಟುಹಬ್ಬದ ನಿಮಿತ್ತ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಬಡತನದಲ್ಲಿ ಹುಟ್ಟಿ ಛಲದಿಂದ ಬದುಕು ಮಾಡಿ ಸಮಾಜದ ನೋವಿಗೆ ಧ್ವನಿಯಾಗಿ ತಾಯಿಯ ಮಮತೆ ತೋರಿ ಸೇವೆಯ ಬಾಳಿನಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ ಎಂದು ಬಡಿಗೇರ ಹೇಳಿದರು.


ಬೇಕರಿ ಉದ್ಯಮದ ಜೊತೆಗೆ ಸಮಾಜ ಸೇವೆಗೆ ತೊಡಗಿದ ಮಾಲಾ ಅವರ ವ್ಯಕ್ತಿತ್ವ ಯುವಕರಿಗೆ ಮಾದರಿ.ಸಮಾಜದ ಋಣ ತೀರಿಸಲು ಅವರ ಸೇವೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಪ್ರದೇಶ ಹೋಟೆಲ್ ಅಸೋಸಿಯೇಷನ್ ಸದಸ್ಯ ಡಾ ಸದಾನಂದ ಪೆರ್ಲ ಹೇಳಿದರು. ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಮಾತನಾಡಿ, ಸಂಘಕ್ಕೆ ಮಾಲಾ ಅವರು ದೊಡ್ಡ ಶಕ್ತಿ ಹಾಗೂ ಅವರ ಸಮಾಜ ಸೇವೆಯಿಂದ ಎಲ್ಲ ಉದ್ಯಮಿಗಳಿಗೆ ಕೀರ್ತಿ ಬಂದಿದೆ ಎಂದರು. ಸಮಾಜ ಸೇವಾ ಕಾರ್ಯದಲ್ಲಿ ಯಶಸ್ಸು ಗಳಿಸುವಲ್ಲಿ ಉದ್ಯಮಿ ಬಂಧುಗಳ ಮತ್ತು ಸಾರ್ವಜನಿಕರ ಪೂರ್ಣ ಸಹಕಾರ ಬೆನ್ನ ಹಿಂದಿನ ಶಕ್ತಿಯಾಗಿದೆ ಎಂದು ಮಾಲಾ ಕಣ್ಣಿ ಹೇಳಿದರು.


ಸಂಘದ ಗೌರವಾಧ್ಯಕ್ಷ ರಾಜಶೇಖರ ಶೆಳ್ಳಗಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ  ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ, ಶಿವರಾಜ್ ಕೋಟ್ಯಾನ್, ಗಿರಿಧರ ಭಟ್, ಪ್ರಶಾಂತ  ಶೆಟ್ಟಿ, ಅಂಬುಜಾ ಎಂ ಡಿ, ದೀಪಕ್ ರಾಯ್ಕರ್, ಮೊಯಿನುದ್ದೀನ್, ಅನಿಲ್ ಸಿಂದಗಿ, ರಿತೇಶ್ ಅಶೋಕ್ ಭರತ್, ಶರಣು ಪಾಟೀಲ್ ರಾಜಶೇಖರ ಪಾಟೀಲ್ ವಿಜಯಲಕ್ಷ್ಮಿ, ಪೂರ್ಣಿಮಾ, ಸುನಿಲ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮತ್ತಿತರರಿದ್ದರು. ಮಹಾಕೀರ್ತಿ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top