ಆಕಾಶವಾಣಿಯ ಜಿ.ಬಿ ಮಂಗಳಗಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ
ಕಲಬುರಗಿ: ಆಕಾಶವಾಣಿಯು ಶಾಸ್ತ್ರೀಯ ಜಾನಪದ ಹಾಗೂ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದೆ. ಸಂಗೀತ ಪರಂಪರೆಯನ್ನು ಉಳಿಸಿ ಕಲಾವಿದರನ್ನು ಬೆಳೆಸಲು ಕಾರಣವಾಗಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಹೇಳಿದರು.
ಕಲಬುರಗಿಯ ಬಿದ್ದಾಪುರ ಶ್ರೀ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಗಸ್ಟ್ 2ರಂದು ನಡೆದ ಪೂಜ್ಯ ಪಂಚಾಕ್ಷರಿ ಗವಾಯಿಗಳವರ 82ನೇ ಮತ್ತು ಪಂಡಿತ ಪುಟ್ಟರಾಜ ಗವಾಯಿಗಳವರ ಹದಿನಾರನೇ ಪುಣ್ಯ ಸ್ಮರಣೋತ್ಸವ ಸಂಗೀತ ಸಂಜೆ ಹಾಗೂ ಆಕಾಶವಾಣಿಯ ಜಿ.ಬಿ ಮಂಗಳಗಟ್ಟಿ ಸ್ಮರಣಾರ್ಥ ಐವರು ಸಂಗೀತ ಸಾಧಕರಿಗೆ "ಗಾನಲೋಕದ ಗಂಧರ್ವ ಸಿರಿ" ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಸಂಗೀತ ಪರಂಪರೆ ಬೆಳೆಯಲು ಆಕಾಶವಾಣಿ ಧ್ವನಿ ಪರೀಕ್ಷೆಗಳನ್ನು ನಡೆಸಿ ಮಾನ್ಯತೆ ನೀಡಿದ ಪರಿಣಾಮವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಭಾಗದ ಕಲಾವಿದರು ಹೆಸರು ಪಡೆಯಲು ಸಾಧ್ಯವಾಗಿದೆ ಹಿಂದುಸ್ತಾನಿ, ಜಾನಪದ, ಸುಗಮ ಸಂಗೀತ ರಂಗದಲ್ಲಿ ನೂರಾರು ಕಲಾವಿದರನ್ನು ಹೊಂದಿದ್ದು ಎಲ್ಲ ಕಲಾವಿದರು ಕೀಳರಿಮೆಯನ್ನು ಬಿಟ್ಟು ಅವಕಾಶಗಳನ್ನು ಬಳಸಿ ಖ್ಯಾತಿ ಹೊಂದಲು ಪರಿಶ್ರಮ ಪಡಬೇಕು. ಜಿ.ಬಿ ಮಂಗಳಗಟ್ಟಿಯವರು ಆಕಾಶವಾಣಿಯಲ್ಲಿ ಅಧಿಕಾರಿಯಾಗಿ 40 ವರ್ಷಗಳ ಸೇವೆ ಸಲ್ಲಿಸಿ ಸಂಗೀತ ಕಲಾವಿದರು ಹಾಗೂ ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆಳಸಿ ಸ್ಮರಣೀರಾಗಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಪ್ರತಿವರ್ಷ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಹೂಗಾರ ಸಮಾಜದ ಮಾಜಿ ಅಧ್ಯಕ್ಷರಾದ ಸೂರ್ಯಕಾಂತ ಫುಲಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕಲ್ಮೇಶ್ವರ ಸಂಗೀತ ಸಾಹಿತ್ಯ ಸಂಘದ ಅಧ್ಯಕ್ಷರಾದ ಅಂಬರೀಶ ಹೂಗಾರ, ಪತ್ರಕರ್ತ ಡಿ.ಎಂ ಪಾಟೀಲ್, ಪ್ರಶಸ್ತಿ ಪ್ರಾಯೋಜಕರಾದ ರುದ್ರಪ್ಪ ನರಗುಂದ, ಬಸಯ್ಯ ನಂದಿಕೋಲು, ಚಂದ್ರಕಾಂತ ಹೂಗಾರ ಘತ್ತರಗಿ, ಜಯಧೃತ ಶೃಂಗೇರಿ, ಅಶೋಕ ರಾಜಪ್ಪ ಹೂಗಾರ್, ಭೀಮಾಶಂಕರ ಮುಗಳಿ, ರೇವಣಸಿದ್ದಪ್ಪ ಹೂಗಾರ್ ಬಂದರವಾಡ,ಇಂದಿರಾ ರುದ್ರಪ್ಪ ಲಕ್ಷ್ಮಿ ಪುತ್ರ ಪದಕಿ,ವಿಜಯಕುಮಾರ್ ಸಾಲಿಮಠ ಇತರರು ಇದ್ದರು.
ಶಿವಕುಮಾರ ಶಾಸ್ತ್ರಿ, ವಿಶ್ವನಾಥಮಠ ಧುತ್ತರಗಾಂವ, ನಿರೂಪಣೆ ಮಾಡಿದರು. ಪ್ರೇರಣ ರುದ್ರಪ್ಪ ನರಗುಂದ ಪ್ರಾರ್ಥನೆ ಗೀತೆ ಹಾಡಿದರು ಆಕಾಶವಾಣಿಯ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು.
"ಗಾನ ಲೋಕದ ಗಂಧರ್ವ ಸಿರಿ" ಮಂಗಳಗಟ್ಟಿ ಸ್ಮರಣಾರ್ಥ ಪ್ರಶಸ್ತಿ ಪುರಸ್ಕೃತರು
ಹಿಂದುಸ್ತಾನಿ ಕಲಾವಿದರಾದ ರೇವಯ್ಯ ಸ್ವಾಮಿ ವಸ್ತ್ರದಮಠ, ರಮೇಶ್ ಕುಲಕರ್ಣಿ, ಶಿವಲಿಂಗಯ್ಯ ಸ್ವಾಮಿ, ಚಿಣಮಗೇರಿ, ಜಾನಪದ ಕಲಾವಿದರಾದ ಬಾಬು ರಾವ್ ಕೋಬಾಳ, ತಬಲ ಕಲಾವಿದರಾದ ಹನುಮಂತ ಚಿಕ್ಕಟ್ನೇಕಲ್ ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


