ಬಟ್ಟೆಯ ಸ್ಯಾನಿಟರಿ ಪ್ಯಾಡ್ ಬಳಕೆಯಿಂದ ಪರಿಸರ ಸಂರಕ್ಷಣೆ: ಪರಿಮಳಾ ರಾಘವೇಂದ್ರ

Upayuktha
0

" ಇನ್ನರ್ ವೀಲ್ ವತಿಯಿಂದ ಪರಿಸರ ಸ್ನೇಹಿ ಋತುಸ್ರಾವ ಆರೋಗ್ಯ ಜಾಗೃತಿ ಕಾರ್ಯಕ್ರಮ " 



ಮೂಡುಬಿದಿರೆ: ಋುತುಸ್ರಾವದ ಅವಧಿಯಲ್ಲಿ ಹೆಣ್ಣು ಮಕ್ಕಳು ಬಳಸುವ ಪ್ಲಾಸ್ಟಿಕ್ ಮಿಶ್ರಿತ ಸ್ಯಾನಿಟರಿ ಪ್ಯಾಡ್ ಗಳಿಂದ ವಾರ್ಷಿಕ ಅಂದಾಜು 35 ಬಿಲಿಯನ್ ಟನ್ ಪ್ಯಾಡ್ ತ್ಯಾಜ್ಯ ಭೂಮಿಗೆ ಬೆರೆಯುತ್ತಿವೆ. ಇವುಗಳ ವಿಲೇವಾರಿ ಸವಾಲಾಗಿದ್ದು ಇದೀಗ ಲಭ್ಯವಿರುವ ಪರಿಸರ ಸ್ನೇಹಿ ಬಟ್ಟೆಯ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ಪರಿಸರಕ್ಕೆ ಮಾತ್ರವಲ್ಲ ಹೆಣ್ಣಿನ ಆರೋಗ್ಯಕ್ಕೂ ಸಹಕಾರಿಯಾಗಿವೆ. ಆರ್ಥಿಕ ಹೊರೆ ಇಳಿಸುವ ನೈಸರ್ಗಿಕ ಬಟ್ಟೆಯ ಪ್ಯಾಡ್ ಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿದಂತೆ ಸಮಾಜದಲ್ಲಿ ಮಹತ್ವದ ಬದಲಾವಣೆ ಕಾಣಲು ಸಾಧ್ಯ ಎಂದು ಎಂದು ಪರಿಸರ ಸಂರಕ್ಷಣೆಯ ಕುರಿತಾದ ಮಂಗಳೂರಿನ ಮಹಿಳಾ ಸಂಘಟನೆ "ಇಕೋ ಸಖಿ" ಬಳಗದ  ಶ್ರೀಮತಿ ಪರಿಮಳಾ ರಾಘವೇಂದ್ರ ಹೇಳಿದರು.


ಅವರು ರೋಟರಿ ಸೆಂಟ್ರಲ್ ಶಾಲೆಯ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಜರಗಿದ ಹದಿಹರೆಯ ಮತ್ತು ಪರಿಸರ ಸ್ನೇಹಿ ಋತುಸ್ರಾವ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.


ಹದಿಹರೆಯದಲ್ಲಿ ಬೆಳವಣಿಗೆಯ ಕುರಿತು ಡಾ. ಸೀಮಾ ಸುದೀಪ್ ಮಾತನಾಡಿ, ದೇಹವು ಹದಿಹರೆಯದ ಸಂದರ್ಭ ನಿರ್ಮಾಣ ಹಂತದಲ್ಲಿರುವ ಕಟ್ಟಡದಂತಿರುತ್ತದೆ ಎಂದು ವಿವರಿಸಿದರು.


ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಮಾತನಾಡಿ  ಕಳೆದ ಎಪ್ರಿಲ್ ನಿಂದ ವಿಶೇಷ ಕಾಳಜಿಯ ತ್ಯಾಜ್ಯ ಎನ್ನುವ ನಾಲ್ಕನೇ ರೀತಿಯ ತ್ಯಾಜ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ನಮಗೆ ಪರಿಸರ ಬೇಕು ಎನ್ನುವ ವಾಸ್ತವ ಅರಿತುಕೊಂಡು ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ ಎಂದರು.


ಇನ್ನರ್ ವೀಲ್ ಅಧ್ಯಕ್ಷೆ ನಿಶ್ಮಿತಾ ಶೀನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೇಷ್ಮಾ ಮಹೇಂದ್ರವರ್ಮ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಲಕ್ಷ್ಮೀ ಪಿ. ಮರಾಠೆ ಸ್ವಾಗತಿಸಿದರು.


ವಿದ್ಯಾರ್ಥಿನಿಯರಾದ ಸುಝಾನ್, ಸ್ವಸ್ತಿಕಾ ನಾಗರಾಜ್, ಇಶಾ ಪ್ರದೀಪ್ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ಫಿಯೋನಾ ಲೋಬೋ ಕಾರ್ಯಕ್ರಮ ನಿರೂಪಿಸಿ ವೆಲಿಶಾ ಮೊಂತೇರೋ ವಂದಿಸಿದರು. ಬಟ್ಟೆಯ ಸ್ಯಾನಿಟರಿ ಪ್ಯಾಡ್ ಬಳಕೆ ಯ ಮಹತ್ವದ ಕುರಿತು ವಿವರಣೆ, 33 ವಿದ್ಯಾರ್ಥಿನಿಯರಿಗೆ ಇನ್ನರ್ ವೀಲ್ ಕ್ಲಬ್ ಪ್ರಾಯೋಜಕತ್ವದಲ್ಲಿ 4 ರಿಯೂಸೆಬಲ್ ಫ್ಯಾಬ್ರಿಕ್ ಪ್ಯಾಡ್ ಗಳ ಕಿಟ್ ನ್ನು ಇಕೋ ಸಖಿ ತಂಡದ ವತಿಯಿಂದ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top