ಚೇತನಾ ಶಾಲೆಯಲ್ಲಿ ಎಂ.ಎಸ್.ಡಿ. ವಯೋಮಿತ್ರ ಕಾರ್ಯಕ್ರಮ

Upayuktha
0

ಮಂಗಳೂರು: ಆಯುಷ್‌ ಇಲಾಖೆ ದಕ್ಷಿಣ ಕನ್ನಡ, ಸೇವಾ ಭಾರತಿ-ಅನಂತಸೌಖ್ಯ, ಮಂಗಳೂರು ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿ ಸಂಘ ಇವರ ಸಹಯೋಗದೊಂದಿಗೆ ಭಾನುವಾರ (ಆ.16) ರಾಷ್ಟ್ರೀಯ ಆಯಷ್‌ ಅಭಿಯಾನದ 2026-27ರ ಐ.ಇ.ಸಿ ಕಾರ್ಯಕ್ರಮದ ಅಡಿಯಲ್ಲಿ ಚೇತನಾ ಶಾಲೆ ವಿ.ಟಿ.ರಸ್ತೆ ಮಂಗಳೂರು ಇಲ್ಲಿ ಎಂ.ಎಸ್.ಡಿ. ವಯೋಮಿತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಈ ಉಚಿತ ಆಯುಷ್‌ ಚಿಕಿತ್ಸಾ ಶಿಬಿರದಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ,ಅಯುರ್ವೇದ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುವ ಬಗ್ಗೆ ಉಪನ್ಯಾಸ ನೀಡಲಾಯಿತು. ಸುಮಾರು 70ಕ್ಕೂ ಹೆಚ್ಚು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡರು.ಅರ್ಹರಿಗೆ ಸೂಕ್ತ ಯೋಗಾಭ್ಯಾಸ ಪ್ರಾಣಾಯಾಮ ಮತ್ತು ಯೋಗಮುದ್ರೆಗಳ ತರಬೇತಿ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಮುರಳೀಧರ.ಎ ಇವರು ವಹಿಸಿದ್ದರು.


ಸೇವಾ ಭಾರತಿ-ಅನಂತಸೌಖ್ಯ ಪ್ರತಿಷ್ಠಾನದ ಸಂಚಾಲಕರಾದ ಉಮೇಶ್‌ ಶೆಣೈ, ಸೇವಾಭಾರತಿಯ ಕಾರ್ಯದರ್ಶಿ ನಾಗರಾಜ ಭಟ್‌, ಹಿರಿಯ ನಾಗರಿಕರ ಶ್ರೇ. ಸಂಘದ ಉಪಾಧ್ಯಕ್ಷ ದೇವದಾಸ್‌ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ಹೇಮವಾಣಿ.ಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಯುಷ್‌ ತಜ್ಞರಾದ ಡಾ.ಪ್ರಕಾಶ್, ಡಾ.ಬಸವರಾಜ್‌, ಡಾ.ಯಷ್ವಿತಾ, ಡಾ.ಶ್ರೀವರ್ಷ ಮತ್ತು ಆಯುಷ್‌ ಇಲಾಖೆಯ ಸಿಬ್ಬಂದಿ ವರ್ಗದವರು ಚಿಕಿತ್ಸಾ ಶಿಬಿರವನ್ನು ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top