ಆ.3ರಿಂದ ಮೂಳೆ ಮತ್ತು ಕೀಲುಗಳ ಆರೋಗ್ಯ ಜಾಗೃತಿ ಸಪ್ತಾಹ-ಕೆಒಎ ಅಧ್ಯಕ್ಷ ಡಾ.ಬಿ. ಸಚ್ಚಿದಾನಂದ ರೈ ಮಾಹಿತಿ

Upayuktha
0


ಮಂಗಳೂರು: ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ (ಕೆಒಎ) ವತಿಯಿಂದ ಸಾರ್ವಜನಿಕರಲ್ಲಿ ಮೂಳೆ ಮತ್ತು ಕೀಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆ.3ರಿಂದ 8ರವರೆಗೆ ರಾಜ್ಯಾದ್ಯಂತ ಬೋನ್ ಮತ್ತು ಜಾಯಿಂಟ್ ವೀಕ್- 2026 ಆಚರಣೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.


ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಶನ್‌ಗಳು, ಶಾಲೆಗಳು, ವೈದ್ಯಕೀಯ ಕಾಲೇಜುಗಳು ಮತ್ತು  ಆಸ್ಪತ್ರೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕೆಒಎ ಅಧ್ಯಕ್ಷ ಡಾ.ಬಿ. ಸಚ್ಚಿದಾನಂದ ರೈ ತಿಳಿಸಿದ್ದಾರೆ.


ಆ.3ರಂದು ಶಾಲಾಮಕ್ಕಳಲ್ಲಿ ಬೆನ್ನುಮೂಳೆ ಮತ್ತು ದೇಹದ ಭಂಗಿ ತಪಾಸಣೆ, ಆ.4ರಂದು ಆಸ್ಟಿಯೋಪೊರೋಸಿಸ್ ತಡೆ ಹಾಗೂ ಹಾರ್ಮೋನ್ ಆರೋಗ್ಯದ ಅರಿವು, ಆ.5ರಂದು ಸರಿಯಾದ ಕುಳಿತುಕೊಳ್ಳುವಿಕೆ, ನಿಲ್ಲುವಿಕೆ ಹಾಗೂ ಕೆಲಸದ ಭಂಗಿಯ ಕುರಿತು ಜಾಗೃತಿ, ಆ.6ರಂದು ಅಪಘಾತ ಮತ್ತು ಗಾಯಗಳ ತಡೆ ಕುರಿತು ಸಾರ್ವಜನಿಕ ಶಿಕ್ಷಣ, ಆ.7ರಂದು ಹಿರಿಯ ನಾಗರಿಕರಲ್ಲಿ ಬೀಳುವಿಕೆ ತಡೆ ಹಾಗೂ ಸುರಕ್ಷಿತ ಜೀವನ ಶೈಲಿ ಜಾಗೃತಿ ಹಾಗೂ ಆ.8ರಂದು ಅಸ್ಥಿ ಚಿಕಿತ್ಸಕರ ಆರೋಗ್ಯ, ಸುರಕ್ಷತೆ ಹಾಗೂ ವೃತ್ತಿಪರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಮೂಳೆ ಮತ್ತು ಕೀಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಜಿಲ್ಲಾ ಆರ್ಥೋಪೆಡಿಕ್ ಅಸೋಸಿಯೇಶನ್‌ಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳು ಸಪ್ತಾಹದ ಅಂಗವಾಗಿ  ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ  ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೆಒಎ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ವಿನಂತಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top