ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರಕ್ಕೆ ಡಾ. ಪಿ.ಜಿ.ಆರ್ ಸಿಂಧ್ಯಾ ಭೇಟಿ

Upayuktha
0

ಡಾ. ತುಕಾರಾಮ ಪೂಜಾರಿಯವರ ಸಾಧನೆಗೆ ಅಭಿನಂದನೆ



ಬಂಟ್ವಾಳ: ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಮಾಡಲು ಶಿಕ್ಷಣ ಇಲಾಖೆ ಆದೇಶದಲ್ಲಿರುವ ತೊಡಕನ್ನು ಸರಿಪಡಿಸಲಾಗುವುದು. ಸ್ಥಳೀಯ ಸಂಸ್ಥೆಗಳಿಗೆ ಕಳೆದ 2 ವರ್ಷಗಳಿಂದ ಬಿಡುಗಡೆಯಾಗದಿರುವ ಅನುದಾನವನ್ನು ಶೀಘ್ರವಾಗಿ ಬಿಡುಗಡೆಮಾಡಲು ಕಾರ್ಯಪ್ರವೃತ್ತರಾಗುವುದಾಗಿ ಮಾಜಿ ಗೃಹಸಚಿವ , ರಾಜ್ಯದ ಸ್ಕೌಟ್ಸ್ ಗೈಡ್ಸ್ ಸಂಸ್ಥೆಗಳ ಮುಖ್ಯ ಆಯುಕ್ತ ಡಾ. ಪಿ.ಜಿ.ಆರ್ ಸಿಂಧ್ಯಾ ಭರವಸೆ ನೀಡಿದರು. 


ಅವರು ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳನ್ನು ಭೇಟಿಯಾಗಿ ಕಾರ್ಯವಿಸ್ತಾರ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಸರಕಾರಿ , ಖಾಸಗಿ, ಅನುದಾನ ರಹಿತ ಶಾಲೆಗಳಲ್ಲಿ ಇರುವ ಸಮಸ್ಯೆಗಳನ್ನು ಆಲಿಸಿ ಕುಂದುಕೊರತೆಗಳನ್ನು ಸರಿಪಡಿಸುವುದಾಗಿ ತಿಳಿಸಿದರು. ಸ್ಕೌಟ್ಸ್ ಗೈಡ್ಸ್ ನಡೆಸುವ ಶಿಕ್ಷಕರಿಗೆ ಸೂಕ್ತ ಸಂಭಾವನೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. 


ರಾಜ್ಯ ಸಂಘಟನಾಆಯುಕ್ತ ಪ್ರಭಾಕರ ಭಟ್ ಎಮ್ , ಜಿಲ್ಲಾಆಯುಕ್ತ ಬಿ. ಮೊಹಮ್ಮದ್ ತುಂಬೆ , ರಾಜ್ಯ ಸಹಸಂಘಟನಾ ಆಯುಕ್ತ ಕೆ.ಭರತ್ ರಾಜ್, ಜಿಲ್ಲಾ ತರಬೇತಿ ಆಯುಕ್ತರಾದ ಜಯಶ್ರೀಯವರು ಸ್ಥಳೀಯ ಸಂಸ್ಥೆಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಿ.ಜಿ.ಆರ್. ಸಿಂಧ್ಯಾ ಅವರನ್ನು ತಾಲೂಕು ಸಂಸ್ಥೆಗಳ ವತಿಯಿಂದ ಬಿ.ಮಹಮ್ಮದ್ ತುಂಬೆ ಸನ್ಮಾನಿಸಿದರು. 


ಡಾ. ತುಕಾರಾಮ ಪೂಜಾರಿಯವರು ರಾಣಿ ಅಬ್ಬಕ್ಕನ ಚೌಟ ಹಾಗೂ ಬಂಗ ಮನೆತನಗಳ ಇತಿಹಾಸದ ಘಟನೆಗಳ ಬಗ್ಗೆ ತಿಳಿಸಿದರು. ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಪರಿಕರಗಳ ಉಪಯೋಗಗಳನ್ನು ವಿವರಿಸಿದರು. ಡಾ. ಸಿಂಧ್ಯಾ ರವರು ಬಳಿಕ ಮಾತನಾಡಿ ಅಪೂರ್ವವಾದ ವಸ್ತುಗಳ ಸಂಗ್ರಹಣೆಗೆ ಡಾ. ತುಕಾರಾಮ ಪೂಜಾರಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. 


ತಾಲೂಕು ಕಾರ್ಯದರ್ಶಿಗಳಾದ ಐತ್ತಪ್ಪ ಪೂಜಾರಿ ಬಂಟ್ವಾಳ , ಸದಾನಂದ ಮಾಣಿ , ಪ್ರತೀಪ್ ವಿಟ್ಲ, ಸುಕೇಶ್ ವಾಮದಪದವು, ಸಂಗೀತ ಪಾಣೆಮಂಗಳೂರು, ಮಹಮ್ಮದ್ ಮುಡಿಪು ಚರ್ಚಿಸಿದರು. ಪ್ರಮುಖರಾದ ಇಬ್ರಾಹಿಂ ಮಾಣಿ, ವೀಣಾ ಬಂಟ್ವಾಳ ಜಯಾನಂದ ಪೆರಾಜೆ , ಡಾ. ಅಶಾ ತುಕಾರಾಮ ಪೂಜಾರಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top