ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಿಜೆಪಿ ಉಪಾಧ್ಯಕ್ಷ ಪ್ರೊ. ಎಂ ನಾಗರಾಜ್

Upayuktha
0


ನವದೆಹಲಿ: ಇತ್ತೀಗೆಷ್ಟೇ ರಾಜ್ಯಸಭೆ ಸದಸ್ಯರಾಗಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡ ಕರ್ನಾಟಕದ ಪ್ರಭಾವೀ ನೇತಾರ ಪ್ರೊ ಎಂ ನಾಗರಾಜ್ ಅವರು ಸೋಮವಾರದಂದು ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿ ಶ್ರೀ ರಾಮವಿಠಲದೇವರ ದರ್ಶನ ಪಡೆದು ಶ್ರೀಗಳನ್ನು ಭೇಟಿ ಮಾಡಿ ಭಕ್ತಿ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು.


ವೇದವ್ಯಾಸ ಗುರುಕುಲದ ನವೀಕೃತ ಕಟ್ಟಡ, ಹಾಗೂ ಗುರುಕುಲದ ಚಟುವಟಿಕೆಗಳು ಹಾಗೂ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮಗಳ ಬಗ್ಗೆ ಕುತೂಹಲದಿಂದ ವಿಷಯಗಳನ್ನು ಕಂಡು ಕೇಳಿ ತಿಳಿದು ಬಹಳ ಆನಂದಾಶ್ಚರ್ಯವನ್ನು ವ್ಯಕ್ತಪಡಿಸಿದರು. ಶ್ರೀಗಳೊಂದಿಗೆ ವರ್ತಮಾನದ ವಿದ್ಯಮಾನಗಳ ನೆಲೆಯಲ್ಲಿ ಆಪ್ತ ಸಮಾಲೋಚನೆ ನಡೆಸಿದರು.‌ ಪುತ್ರ ಚಂದನ್ ಉಪಸ್ಥಿತರಿದ್ದರು. ‌


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top