ಮಂಗಳೂರು: ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುತ್ತಾ 31 ವರ್ಷಗಳನ್ನು ಪೂರೈಸಿರುವ ಕೊಟ್ಟಾರ ಮಂಗಳೂರಿನ 'ಭರತಾಂಜಲಿ (ರಿ.)' ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ 'ಗುರುನಮನ' ಹಾಗೂ 'ಮಾತಾ ಪಿತರ ಚರಣ ಪೂಜನ' ಕಾರ್ಯಕ್ರಮವನ್ನು ನಾಳೆ (ಆ.2) ಸಂಜೆ 4 ಗಂಟೆಗೆ ಕಾಟಿಪಳ್ಳದ ಗಣೇಶಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ನಾಗೇಶ್ ಬಪ್ಪನಾಡು ಅವರಿಗೆ ಗುರುನಮನ ಗೌರವ ಸನ್ಮಾನವನ್ನು ನೆರವೇರಿಸಲಾಗುವುದು. ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ ಧರ್ಮೇಂದ್ರ ಗಣೇಶಪುರ ಹಾಗೂ ಧಾರ್ಮಿಕ ಪ್ರವಚನಕಾರರಾದ ಶ್ರೀ ವಿಶ್ವೇಶ್ವರ ಬದವಿದೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ವಿದುಷಿ ಅದಿತಿ ಪೂಜಾರಿ, ವಿದುಷಿ ಧ್ರುವಿ ಜೆ. ಮಡಿವಾಳ ಹಾಗೂ ವಿದುಷಿ ಅನನ್ಯ ಕೆ. ಅವರಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಲಿದೆ.
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಹಾಗೂ ನಿರ್ದೇಶಕಿ ಗುರು ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ, ನಿರ್ದೇಶಕರಾದ ಶ್ರೀಧರ ಹೊಳ್ಳ ಮತ್ತು ಹಿರಿಯ ನೃತ್ಯ ಶಿಕ್ಷಕಿ ವಿದುಷಿ ಪ್ರಕ್ಷಿಲಾ ಜೈನ್ ಅವರು ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

