ಬಸವನಗುಡಿ ವ್ಯಾಸರಾಯರ ಮಠದಲ್ಲಿ ಹೆಳವನಕಟ್ಟೆ ಗಿರಿಯಮ್ಮನವರ ಆರಾಧನೆ

Upayuktha
0


ಬೆಂಗಳೂರು: ನಾಗರ ಪಂಚಮಿಯಂದು (ಆ.17) ಬೆಂಗಳೂರಿನ ವ್ಯಾಸರಾಯರಮಠ, ಬಸವನಗುಡಿಯಲ್ಲಿ ದಾಸಾಗ್ರಣಿ ಹೆಳವನಕಟ್ಟೆ ಗಿರಿಯಮ್ಮನವರ ಭಕ್ತವೃಂದ ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಷ್ಟ ವತಿಯಿಂದ ಹೆಳವನಕಟ್ಟೆ ಗಿರಿಯಮ್ಮನವರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶಾಂತಾರ ಘೋತ್ತಮಾಚಾರ ವಹಿಸಿದ್ದರು. ಅವರುಎಲ್ಲರನ್ನು ಸ್ವಾಗತಿಸಿ ಸಂಸ್ಥೆ ನಡೆದುಬಂದ ದಾರಿಯ ಕುರಿತು ವಿವರಿಸಿದರು. ಮುಖ್ಯ ಅತಿಥಿ ಯಾಗಿ ಶ್ರೀ ಐನೂರ ಮಧುಸೂದನರಾವ ಆಗಮಿಸಿದ್ದರು. ಅವರು ಸಂಘ ಸಂಸ್ಥೆಗಳು ಅನುಸರಿಸಬೇಕಾದ ರೀತಿ ನಿಯಮಗಳ ಕುರಿತು ವಿವರಿಸಿದರು. ಈಸಂದರ್ಭದಲ್ಲಿ ಡಾ.ಶಾಂತಾರಘೋತ್ತಮಾಚಾರ ಅವರು ಸಂಗ್ರಹಿಸಿದ ಪಟದ ಸಂಧಿ ಮತ್ತು ಲವ ಕುಶರ ಕಾಳಗ ಹಾಗೂ ಐ ನೂರ ಮಧು ಸೂ ದ ನ ರಾವ ರಚಿಸಿದ "ಹರಿದಾಸಿ ಹೆಳವನಕಟ್ಟಿ ಗಿರಿಯಮ್ಮ" ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಹಾಗೆಯೇ ಇದೇ ಸಂದರ್ಭದಲ್ಲಿ ಡಾ. ವಿದ್ಯಾಕಸಬೆ, ಡಾ.ಶೀಲಾದಾಸ ಇವರಿಗೆ "ದಾಸಾಗ್ರಣಿ ಹೆಳವನಕಟ್ಟಿ ಗಿರಿಯಮ್ಮ ಅನುಗ್ರಹ ಪ್ರಶಸ್ತಿ" ನೀಡಿ ಗೌರವಿಸಲಾಯಿತು.


ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಗಿರಿಯಮ್ಮ ಭಕ್ತವೃಂದದ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ಗಿರಿಯಮ್ಮನ ಭಕ್ತ ವೃಂದದ ಸೋದರಿಯರು ಗಿರಿಯಮ್ಮನ ಉಗಾಭೋಗಾ ಮತ್ತು ಕೀರ್ತನೆಯನ್ನು ವಿಶ್ಲೇಷಣೆ ಮಾಡಿದರು. ಗಿರಿಯಮ್ಮನವರ ಲವಕುಶಕಾಳಗದ ಪ್ರಸಂಗವನ್ನು ಸುಂದರವಾಗಿ ಹಾಡಿದರು.


ಶ್ರೀಮತಿ ಲತಾ ಉಟಗಿ ಜಯಗೀತೆ ಹಾಡಿದರು. ಕಾರ್ಯಕ್ರಮವು ಗಿರಿಯಮ್ಮನವರ ಭಕ್ತವೃಂದದ ಸಹೋದರಿಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವೃಂದಾ ಸಂಗಮ್ಮ ನಡೆಯಿಸಿಕೊಟ್ಟರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನ ವಾಯಿತು. ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು. ಗಿರಿಯಮ್ಮನವರ ಭಕ್ತವೃಂದದ ಸದಸ್ಯರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು, ಕಾರ್ಯಕ್ರಮವು ವೈಭವದಿಂದ ಜರುಗಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top