ಹಿರಿಯರ ನಂಬಿಕೆಯ ಬಗೆಗೆ ತಿಳಿದುಕೊಳ್ಳಬೇಕು : ತೇಜಸ್ ನಾಯ್ಕ್
ಪುತ್ತೂರು: ತುಳುನಾಡಿನ ಜನರು ಆಷಾಢ ಮಾಸದಲ್ಲಿ ಸೇರುವ 'ಆಟಿಯ ಕೂಟ'ವು ಆಟಿ ತಿಂಗಳಲ್ಲಿ ಮಾಡುವ ತಿಂಡಿ - ತಿನಿಸುಗಳು, ಪದಾರ್ಥಗಳನ್ನು ಸವಿಯುವ ವಿಶೇಷತೆಯನ್ನು ಹೊಂದಿದೆ. ಹಿಂದೆ ಆಟಿಯ ತಿಂಗಳು ಎಂದರೆ ಕಷ್ಟದ ತಿಂಗಳು ಎಂದು ಅರ್ಥ. ಆ ಸಮಯದಲ್ಲಿ ನಮ್ಮ ಹಿರಿಯರು ತಮ್ಮ ಸುತ್ತಮುತ್ತಲಿರುವ ಸೊಪ್ಪು ಹಾಗೂ ಔಷಧೀಯ ಗುಣಗಳುಳ್ಳ ಆಹಾರ ಪದಾರ್ಥಗಳನ್ನು ಮನೆ ಮಂದಿಗೆಲ್ಲ ಕೊಡುತ್ತಿದ್ದರು. ಈ ಮೂಲಕ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಂಡು ಜೀವನವನ್ನು ಕಳೆಯುತ್ತಿದ್ದರು ಎಂದು ನ್ಯಾಯವಾದಿ ಹಾಗೂ ದೈವಾರಾಧನೆಯ ಮಧ್ಯಸ್ಥ ತೇಜಸ್ ನಾಯ್ಕ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾದ 'ಆಟಿದ ಕೂಟ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ತೆಂಗಿನ ಕೊಂಬನ್ನು ಅರಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಟಿ ಅಮಾವಾಸ್ಯೆಯ ದಿನ ನಮ್ಮ ಹಿರಿಯರು ಮುಂಜಾನೆ ಎದ್ದು ಹಾಲೆಮರದ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿ, ಹಾಲೆಮರದ ಕೆತ್ತೆಯನ್ನು ತಂದು ಅದಕ್ಕೆ ಬೇರೆ ವಸ್ತುಗಳನ್ನು ಸೇರಿಸಿ ಕಷಾಯವನ್ನು ಮಾಡಿ ಕುಡಿದು, ದೇಹವನ್ನು ಸದೃಢವಾಗಿಡುತ್ತಿದ್ದರು. ಆಟಿ ಕಳಂಜ ತಮ್ಮನ್ನು ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಇಟ್ಟುಕೊಂಡಿರುವ ತುಳುನಾಡ ಜನ ಆಟಿ ಕಳಂಜ ಮನೆಗೆ ಬಂದಾಗ ಬೆಲ್ಲ, ಅಕ್ಕಿಯಂತಹ ಪದಾರ್ಥಗಳನ್ನು ನೀಡುತ್ತಿದ್ದರು. ಅದನ್ನು ಆಟಿ ಕಳಂಜ ದೇವರಿಗೆ ಅರ್ಪಿಸುತ್ತಾನೆ ಎನ್ನುವುದು ನಮ್ಮ ಹಿರಿಯರ ನಂಬಿಕೆ ಎಂದರು.
ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ನಮ್ಮ ಹಿರಿಯರು ಸೂಕ್ಷ್ಮತೆಯನ್ನು ಹೊಂದಿದ್ದರು. ನಮಗಿಂತ ಮಿಗಿಲಾದ ಒಂದು ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಅಂತಹ ಸೂಕ್ಷ್ಮತೆಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ರತುಲ್ ಅದ್ವೈತ ಕೆ ಪ್ರಾರ್ಥಿಸಿ, ವಂಶಿಕಾ ಬಿ. ರೈ ಸ್ವಾಗತಿಸಿದರು. ಕೀರ್ತಿಕಾ ಎಸ್ ಆಚಾರ್ಯ ವಂದಿಸಿದರು. ಹೃಣ್ಮಯಿ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮವು ಆಟಿ ಕಳಂಜನ ಪ್ರವೇಶದ ಮೂಲಕ ಆರಮಭಗೊಂಡು, ತುಳುನಾಡಿನ ಸಂಸ್ಕøತಿ, ಆಚಾರ-ವಿಚಾರವನ್ನು ಬಿಂಬಿಸುವ ಕಂಗೀಲು ನೃತ್ಯ ಹಾಗೂ ತುಳು ನೃತ್ಯದ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು. 8ನೇ ತರಗತಿಯ ವಿದ್ಯಾರ್ಥಿ ತರುಣ್ ಡಿ ಯವರು ತುಳುನಾಡ ದೈವ ಕೊರಗಜ್ಜನ ಚಿತ್ರವನ್ನು ಸ್ಥಳದಲ್ಲಿಯೇ ಚಿತ್ರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


