ವಿಶ್ವ ಸ್ನೇಹ ದಿನ- ವಿಶೇಷ ಲೇಖನ

Upayuktha
0



ಮ್ಮ ಜೀವನದಲ್ಲಿ ರಕ್ತ ಸಂಬಂಧಗಳು ಹೇಗೆ ಮಹತ್ವ ಪಡೆದುಕೊಳ್ಳುತ್ತವೆಯೋ ಹಾಗೆ ಸ್ನೇಹ ಸಂಬಂಧಗಳು ಕೂಡ ಅಷ್ಟೇ ಪ್ರಾಮುಖ್ಯ  ಪಡೆದು ಕೊಳ್ಳುತ್ತವೆ. 


ಕೃಷ್ಣ, ಸುಧಾಮನ ಸ್ನೇಹ,  ಕರ್ಣ ಮತ್ತು ದುರ್ಯೋಧನರ ಸ್ನೇಹ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಕೃಷ್ಣ ಒಬ್ಬ ರಾಜನಾದರೂ, ತನ್ನ ಬಾಲ್ಯದ ಸ್ನೇಹಿತ ಸುಧಾಮನನ್ನು ಎಂದೂ ಮರೆಯಲಿಲ್ಲ. ಅವರಿಬ್ಬರ ನಡುವೆ  ಬಡತನ ಗೋಡೆಯಾಗಿ ಉಳಿಯಲಿಲ್ಲ.


ಕರ್ಣನಿಗೆ ದುರ್ಯೋಧನ  ಸೋಲುತ್ತಾನೆಂದು ಗೊತ್ತಿದ್ದರೂ ಅವನನ್ನು ಕಡೆಗೂ ಬಿಟ್ಟು ಕೊಡಲಿಲ್ಲ. ಜನರ ಕಣ್ಣಿಗೆ  ಅವನು ಮೂರ್ಖನಾದರೂ  ತನ್ನ ಗೆಳೆತನವನ್ನು ಉಳಿಸಿ ಕೊಂಡ.


ನಮ್ಮ ಜೀವನದಲ್ಲಿ ಕೂಡ ಅನೇಕ ಜನ ಸ್ನೇಹಿತರು ಬಂದು ಹೋಗುತ್ತಾರೆ. ನಮ್ಮ ಕ್ಲಾಸ್ಮೇಟ್, ರೂಂಮೇಟ್,  ಬ್ಯಾಚ್ ಮೇಟ್, ಕಲೀಗ್ಸ್ ಎಲ್ಲರೂ ಸ್ನೇಹದ ಹೆಸರಿನಲ್ಲಿ ಜೊತೆಯಾದವರೆ.


ಚಿಕ್ಕಂದಿನಲ್ಲಿ, ಏನೇ ದ್ವೇಷ,  ಅಸೂಯೆ ಇದ್ದರೂ ನಮ್ಮ ವೃದ್ಧಾಪ್ಯದಲ್ಲಿ ನಮ್ಮ ಸ್ನೇಹ ಸಂಬಂಧಗಳು ಅಪರೂಪ ಅನಿಸುತ್ತವೆ. ನಮ್ಮ ಸುಖ ದುಃಖ ಹೇಳಿಕೊಳ್ಳಲು, ಸಿಹಿ ನೆನಪುಗಳನ್ನು ಹಂಚಿ ಕೊಳ್ಳಲು ಅವರೊಂದು ವೇದಿಕೆ ಅಷ್ಟೇ. ಈಗಲೂ ದೇವಸ್ಥಾನ, ಮರಗಳ ಕಟ್ಟೆಯ ಹತ್ತಿರ ವೃದ್ಧರು ಗುಂಪಾಗಿ ಕುಳಿತು ಕೊಂಡು ತಮ್ಮ ಭಾವನೆಗಳನ್ನು ಹಂಚಿ ಕೊಳ್ಳುವುದನ್ನು ಕಾಣುತ್ತೇವೆ.


ಯಾರೇ ಸ್ನೇಹಿತ ತೀರಿಕೊಂಡರೆ, ದೂರದಿಂದ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಮೌನದ ಮುಖ ಹೊತ್ತು ಮನೆಯ ಕಡೆಗೆ ಹೋಗುವುದನ್ನು  ನೋಡಿದರೆ ಸ್ನೇಹ ಸಂಬಂಧದ ಗಾಢತೆ ಅರಿವಾಗುತ್ತದೆ.


ಬನ್ನಿ, ಉತ್ತಮ ಸ್ನೇಹ ಸಂಬಂಧಗಳನ್ನು ಉಳಿಸಿ ಕೊಂಡು  ಸಂಭ್ರಮ ಪಡೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top