ಮಂಗಳೂರು: ಆಗಸ್ಟ್ 2 ರಂದು ಪುತ್ತೂರಿನ ಶಿವಸದನ, ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಮಂಗಳೂರು ಕೊಡಿಯಾಲ್ ಬೈಲ್‌ನ ವಿಪ್ರ ಸಮಾಗಮ ವೇದಿಕೆ ವತಿಯಿಂದ ಸೇವಾ ಕಾರ್ಯಕ್ರಮ ಜರುಗಿತು. ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು, ಸ್ನೇಹಕೂಟ ಭೋಜನದೊಂದಿಗೆ ಆಶ್ರಮವಾಸಿಗಳಿಗೆ ಸಂತೋಷ, ಪ್ರೇರಣಾದಾಯಕ ಕಾರ್ಯಕ್ರಮಗಳೊಂದಿಗೆ ದೇಣಿಗೆ ನೀಡಲಾಯಿತು.
ಶಿವಸದನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷೆ ಸುಮಂಗಲಾ ಪ್ರಭಾಕರ, ಕಾರ್ಯದರ್ಶಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಕರುಣಾಕರ ಬೆಳ್ಳೆ, ಗೌರವಾಧ್ಯಕ್ಷ ರಘುನಾಥ ರಾವ್, ಟ್ರಸ್ಟಿ ಶ್ರೀಕಾಂತ್ ರಾವ್, ಕೋಶಾಧಿಕಾರಿ ದಿನಕರ ರಾವ್, ಚೇತನ್ ಶರ್ಮಾ, ಸಂತೋಷ ರಾವ್, ಸುಮತಿ ಉಪಸ್ಥಿತರಿದ್ದರು.
ವೇದಿಕೆಯ ಗೌರವ ಸಲಹೆಗಾರ, ಶಾರದಾ ವಿದ್ಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ ಮಾತನಾಡಿ ಮಾನವೀಯತೆಯಿಂದ ಮನುಕುಲದ ಹಿರಿಯರ ಸೇವೆಯೇ ಭಗವಂತನ ಪೂಜೆಗೆ ಸಮಾನವಾದುದು ಎಂದು ಸಂಸ್ಥೆಗೆ ಶುಭ ಹಾರೈಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸಾಂದರ್ಭಿಕವಾಗಿ ನುಡಿದರು. ವೇದಿಕೆಯ ಸದಸ್ಯರಿಂದ ಗಾಯನ, ನೃತ್ಯ, ಯಕ್ಷ ನೃತ್ಯ, ಭಾರತ ನಾಟ್ಯ, ಕೊಳಲು ವಾದನ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ಪ್ರಮುಖರಾದ ಪ್ರಭಾಕರ ರಾವ್ ಪೇಜಾವರ, ಪಿ. ರಾಮಕೃಷ್ಣ ರಾವ್, ಪ್ರಕಾಶ್ ರಾವ್, ಶ್ರೀಪತಿ ಪಿ. ಆರ್, ವಿನೋದಾ. ಎ. ರಾವ್, ಕಾತ್ಯಾಯಿನಿ ರಾವ್, ಸುನಂದಾ ಪುರಾಣಿಕ, ಶುಭಾ ಜಯರಾಮ್ ಭಟ್, ಸುಲೋಚನಾ ಭಟ್, ಶಶಿಪ್ರಭಾ ಐತಾಳ್, ಶೀಲಾ ಜಯಪ್ರಕಾಶ್, ವಂದನಾ ಸುರೇಶ್, ಶುಭಾ ಶೇಷಾದ್ರಿ, ಅರುಣಾ ಸೋಮಶೇಖರ್, ಶೈಲಜಾ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ವಿಪ್ರ ಸಮಾಗಮ ವೇದಿಕೆಯ ಅಧ್ಯಕ್ಷ ಶೇಷಾದ್ರಿ ಭಟ್ ವಂದಿಸಿದರು. ಕೋಶಾಧಿಕಾರಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


