ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವತಿಯಿಂದ, ಗುರುವಾಯನಕೆರೆ ಬಂಟರ ಭವನದಲ್ಲಿ ಆ.2 ರಂದು ಇನ್ಪೈರ್ ವಿದ್ವತ್ ಕಾರ್ಯಕ್ರಮದಡಿ ಹಮ್ಮಿಕೊಂಡ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾವು ನಿರೀಕ್ಷಿಸಿದಂತೆ ಜೀವನದಲ್ಲಿ ಯಾವುದೂ ಸಂಭವಿಸಲು ಸಾಧ್ಯವಿಲ್ಲ. ಆದರೆ ಹೆತ್ತವರ ಆಶೀರ್ವಾದ, ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಯ ವಯಕ್ತಿಕ ಶ್ರಮ ಇವೆಲ್ಲವನ್ನು ಸಾಕಾರಗೊಳಿಸಲು ಸಾಧ್ಯವಿದೆ. ಅಂಕ ಗಳಿಸುವಿಕೆ ವಿದ್ಯಾಭ್ಯಾಸದ ಒಂದು ಭಾಗವಷ್ಟೆ, ಸೋಲು ಎಂದೆಂದಿಗೂ ಜೀವನದ ಅಂತ್ಯವಲ್ಲ. ಸಾಮಾನ್ಯ ಪ್ರಯತ್ನಕ್ಕಿಂತ ಮೀರಿ ಯಾರು ಪ್ರಯತ್ನಪಡುತ್ತಾರೋ ಅಂದು ಸಾಮಾನ್ಯ ಅಸಾಮಾನ್ಯನಾಗಬಲ್ಲ. ನಮಗೆಲ್ಲ ಆ ಶಕ್ತಿಯಿದೆ, ಆದರೆ ಭಾವನೆಗಳು ಏರುಪೇರು ಮಾಡುತ್ತದೆ. ಆದರೆ ಶಿಸ್ತಿಗೆ ಯಾರು ಬದ್ಧರಾಗುತ್ತಾರೋ ಅವರ ಯಶಸ್ಸು ಕಣ್ಮುಂದೆ ಸಾಕಾರವಾಗಲಿದೆ ಎಂದು ಸಂದೇಶ ನೀಡಿದರು.
ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಗಳು ವ್ಯವಹಾರ ಕ್ಷೇತ್ರವಾಗದೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಭವ್ಯ ಕೇಂದ್ರವಾಗಿ ಬೆಳೆಯಬೇಕು. ಪಿಯುಸಿ ಬದುಕಿನ ಅಮೂಲ್ಯ ಎರಡು ವರ್ಷಗಳಾಗಿದ್ದು, ಯಾವುದೇ ಕಾರಣಕ್ಕೂ ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೆ, ಶೈಕ್ಷಣಿಕ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಿ ಉಜ್ವಲ ಭವಿಷ್ಯ ನಿಮ್ಮದಾಗಿಸಿ ಎಂದು ವಿದ್ಯಾರ್ಥಿಗಳಿಗೆ ಹರಸಿದರು.
ಮುಖ್ಯ ಭಾಷಣಕಾರ, ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಈ ಮಂಡಗಳಲೆ ಮಾತನಾಡಿ, ಕಾಲೇಜಿನ ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರ ದೂರದೃಷ್ಟಿ ಚಿಂತನೆಗೆ ಇಂದು ವಿದ್ಯಾರ್ಥಿಗಳು ಸಾಧನೆ ಮೂಲಕ ಪ್ರತಿಫಲ ನೀಡಿದೆ. 152 ವಿದ್ಯಾರ್ಥಿಗಳ ಸಣ್ಣ ಸಮೂಹದ ಈ ಮಟ್ಟದ ಮೇರು ಸಾಧನೆ ಕಾಲೇಜಿಗೆ ಅಗಾಧವಾದ ಬೆಲೆ ತಂದುಕೊಟ್ಟಿದೆ. ಇದರಲ್ಲಿ ಪೋಷಕರ ನಂಬಿಕೆ, ಉಪನ್ಯಾಸಕರ ಅವಿರತ ಪರಿಶ್ರಮ, ಕೌನ್ಸೆಲಿಂಗ್ ವಿಭಾಗದ ತ್ಯಾಗ, ಕಾಲೇಜಿನ ಸಮಸ್ತ ಉದ್ಯೋಗಿಗಳ ನಿಸ್ವಾರ್ಥ ಸೇವೆ ಕಾರಣ. ಭವಿಷ್ಯದಲ್ಲಿ ಮತ್ತಷ್ಟು ಸಾಧನೆಗೆ ಈ ಕಾರ್ಯಕ್ರಮ ಭದ್ರ ಬುನಾದಿ ಎಂದು ಹೇಳಿದರು.
ವಿದ್ವತ್ ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ಕೆ.ರೈ, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಬಾಲಕೃಷ್ಣ ನಾಯಕ್, ವಿಭಾಗ ಮುಖ್ಯಸ್ಥರುಗಳಾದ ಅನಿಲ್ ಸುಸ್ರಾಪು, ಎಸ್.ಎನ್.ಭಟ್, ಡಾ.ಮಹಿತಾ, ವಿನೋದ್ ಎಸ್.ಇ. ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪೋಷಕರ ಪರವಾಗಿ ಗಣೇಶ್ ಭಟ್ ಹಾಗೂ ವಸಂತ್ ಶೆಟ್ಟಿ ಅಭಿಪ್ರಾಯ ಹಂಚಿಕೊಂಡರು. ಸಾಧಕ ವಿದ್ಯಾರ್ಥಿಗಳ ಪೈಕಿ ಚಿನ್ಮಯ್ ಜಿ.ಕೆ. ತಮ್ಮ ಸಾಧನೆಯ ಹಿಂದಿನ ಪರಿಶ್ರಮ ಹಾಗೂ ಪರೀಕ್ಷಾ ಸಿದ್ಧತೆ ಕುರಿತು ವಿದ್ಯಾರ್ಥಿಗಳೊಂದಿಗರ ಅನುಭವ ಹಂಚಿಕೊಂಡರು.
ಸಾಧಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ನಡೆಸಿದ ಸಿದ್ಧತೆಗಳು ಹಾಗೂ ಪರೀಕ್ಷೆ ವೇಳೆ ಎದುರಿಸಬೇಕಾದ ಕೆಲ ಸೂಕ್ಷ್ಮ ಸವಾಲುಗಳು, ಸಮಯ ಪಾಲನೆ ಕುರಿತಾಗಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಂವಾದದ ವೇಳೆ ತಮ್ಮ ಅನುಭವ ಹಾಗೂ ಸಲಹೆ ಹಂಚಿಕೊಂಡರು.
ನೀಟ್, ಜೆಇಇ, ಸಿಇಟಿ ಸಹಿತ ಬೋರ್ಡ್ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಸನ್ನಿಧಿ ಎ.ಎಚ್. ಸ್ವಾಗತಿಸಿ, ಕಾಶ್ವಿ ಪಿ.ದಿನೇಶ್ ವಂದಿಸಿದರು. ಪ್ರತಿಜ್ಞಾ ಹಾಗೂ ಇತರರು ಕಾರ್ಯಕ್ರಮ ನಿರೂಪಿಸಿದರು.
ಸಂಸ್ಕೃತ ದಲ್ಲಿ ಒಂದು ಶ್ಲೊಕವಿದೆ, ಯಶಸ್ಸಿನ ಹಾದಿ ತಲುಪಲು ವಿದ್ಯಾರ್ಥಿಗಳು ಕಾಕಚೇಷ್ಟೆ, ಬಕಧ್ಯಾನ, ಶ್ವಾನನಿದ್ರೆ, ಅಲ್ಪಾಹಾರಿ, ಗೃಹತ್ಯಾಗಿ ಎಂಬ ಪಂಚಲಕ್ಷಣ ಹೊಂದಿರಬೇಕು. ಅದರ ಸಂದೇಶವೆಂದರೆ ಯಾವುದೇ ಪರಿಸ್ಥಿಯಿರಲಿ ಸತತ ಪರಿಶ್ರಮ, ಏಕಾಗ್ರತೆ, ಜಾಗೃತಸ್ಥಿತಿ, ಉತ್ತಮ ವ್ಯಕ್ತಿತ್ವ, ಶಿಸ್ತುಗಳೆಡೆಗೆ ಗಮನ ನೀಡಿದರೆ ಯಶಸ್ಸು ನಿಶ್ಚಿತ ಎಂದು ಮುಖ್ಯ ಅತಿಥಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
- ಕೆ.ಪ್ರತಾಪಸಿಂಹ ನಾಯಕ್

.jpeg)
