ತುಂಬೆ ಗ್ರೂಪ್, ರೊಮೇನಿಯನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯುರೋಪಿಯನ್ ಮೆಡಿಕಲ್ ರೆಸಿಡೆನ್ಸಿ ಚಾಲನೆ

Upayuktha
0


ದುಬೈ: ಯುಎಇಯ (UAE) ತುಂಬೆ ಗ್ರೂಪ್ ಮತ್ತು ರೊಮೇನಿಯಾದ ‘ಜಾರ್ಜ್ ಎಮಿಲ್ ಪಲಾಡೆ ಮೆಡಿಸಿನ್, ಫಾರ್ಮಸಿ, ಸೈನ್ಸ್ ಮತ್ತು ಟೆಕ್ನಾಲಜಿ ಆಫ್ ತಾರ್ಗು ಮುರೆಸ್’ (UMFST) ವಿಶ್ವವಿದ್ಯಾಲಯದ ನಡುವಿನ ಹೊಸ ಸಹಯೋಗದ ಮೂಲಕ ಗಲ್ಫ್ ಪ್ರದೇಶದ ವೈದ್ಯಕೀಯ ಪದವೀಧರರು ಈಗ ಯುರೋಪಿಯನ್ ಸ್ಪೆಷಾಲಿಟಿ ತರಬೇತಿಯನ್ನು ನೇರವಾಗಿ ಪಡೆಯಬಹುದಾಗಿದೆ.


‘ತುಂಬೆ-UMFST ಇಂಟರ್ನ್ಯಾಷನಲ್ ರೆಸಿಡೆನ್ಸಿ ಪಾಥ್‌ವೇ ಪ್ರೋಗ್ರಾಂ’ ಯುರೋಪಿಯನ್ ಆರೋಗ್ಯ ರಕ್ಷಣಾ ಮಾನದಂಡಗಳಿಗೆ ಅನುಗುಣವಾಗಿ 49 ಮಾನ್ಯತೆ ಪಡೆದ ಮೆಡಿಕಲ್ ಸ್ಪೆಷಾಲಿಟಿಗಳಿಗೆ ಪ್ರವೇಶವನ್ನು ನೀಡುತ್ತದೆ. ತರಬೇತಿಯು 28 ಕ್ಲಿನಿಕಲ್, 13 ಸರ್ಜಿಕಲ್ ಮತ್ತು 8 ಪ್ಯಾರಾಕ್ಲಿನಿಕಲ್ ವಿಭಾಗಗಳನ್ನು ಒಳಗೊಂಡಿದೆ—ಇದರಲ್ಲಿ ಕಾರ್ಡಿಯಾಲಜಿ, ನ್ಯೂರೋಸರ್ಜರಿ, ಎಮರ್ಜೆನ್ಸಿ ಮೆಡಿಸಿನ್ ಮತ್ತು ರೇಡಿಯಾಲಜಿ ಸೇರಿವೆ. ಆಯ್ಕೆ ಮಾಡಿಕೊಳ್ಳುವ ಸ್ಪೆಷಾಲಿಟಿಯನ್ನು ಆಧರಿಸಿ ತರಬೇತಿಯ ಅವಧಿಯು ನಾಲ್ಕರಿಂದ ಆರು ವರ್ಷಗಳವರೆಗೆ ಇರುತ್ತದೆ.


ಈ ಒಪ್ಪಂದದಡಿಯಲ್ಲಿ, ಕ್ಲಿನಿಕಲ್ ತರಬೇತಿಯನ್ನು ರೊಮೇನಿಯಾದಲ್ಲಿರುವ UMFST ಯ ವಿಶ್ವವಿದ್ಯಾಲಯ ಸಂಯೋಜಿತ ಬೋಧನಾ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ಗರಿಷ್ಠ ಮೂರು ಸ್ಪೆಷಾಲಿಟಿ ಆಯ್ಕೆಗಳನ್ನು ಆದ್ಯತೆಯ ಮೇರೆಗೆ ನೀಡಿ ಅರ್ಜಿ ಸಲ್ಲಿಸಬಹುದು. ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತು ‘ದಿ ತುಂಬೆ ಇಂಟರ್ನ್ಯಾಷನಲ್ ಮೆಡಿಸಿನ್ ಪಾಥ್‌ವೇ ಪ್ರೋಗ್ರಾಂ’ನ ಪದವೀಧರರಿಗೆ ಪ್ರವೇಶಾತಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ವಿಶೇಷವೆಂದರೆ, ಈ ಪ್ರೋಗ್ರಾಂ ಅರ್ಹ ಅಭ್ಯರ್ಥಿಗಳಿಗೆ ಎಂಡಿ (MD) ಮುಗಿದ ತಕ್ಷಣವೇ ನೇರವಾಗಿ ರೆಸಿಡೆನ್ಸಿಗೆ ಪ್ರವೇಶಿಸಲು ಅವಕಾಶ ನೀಡುತ್ತದೆ; ಇದರಿಂದಾಗಿ ಪ್ರತ್ಯೇಕವಾಗಿ ರೊಟೇಟಿಂಗ್ ಇಂಟರ್ನ್‌ಶಿಪ್ ಮಾಡುವ ಅಗತ್ಯವಿರುವುದಿಲ್ಲ.


ತುಂಬೆ ಗ್ರೂಪ್ ಈ ಪ್ರಾದೇಶಿಕ ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸಲಿದ್ದು, ಅರ್ಜಿದಾರರಿಗೆ ದಾಖಲಾತಿ, ವೀಸಾ ಪ್ರಕ್ರಿಯೆ, ಓರಿಯಂಟೇಶನ್, ಕೆರಿಯರ್ ಕೌನ್ಸೆಲಿಂಗ್ ಮತ್ತು ಅಗತ್ಯವಿರುವ ಭಾಷಾ ತರಬೇತಿಯಲ್ಲಿ ನೆರವಾಗಲಿದೆ.


"ಪ್ರತಿ ವರ್ಷ ನಮ್ಮ ಪ್ರದೇಶದ ಸಾವಿರಾರು ಪ್ರತಿಭಾವಂತ ವೈದ್ಯಕೀಯ ಪದವೀಧರರು ಸ್ಪೆಷಾಲಿಟಿ ತರಬೇತಿಗೆ ಸ್ಪಷ್ಟ ಮಾರ್ಗಕ್ಕಾಗಿ ಹುಡುಕುತ್ತಾರೆ," ಎಂದು ತುಂಬೆ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಹೇಳಿದರು. "ಈ ಕಾರ್ಯಕ್ರಮವು ಅವರಿಗೆ ಸೂಕ್ತ ಮಾರ್ಗ ಮತ್ತು ಆಯ್ಕೆಯನ್ನು ನೀಡುತ್ತದೆ—49 ಸ್ಪೆಷಾಲಿಟಿಗಳು, ಯುರೋಪಿಯನ್ ಕ್ಲಿನಿಕಲ್ ಮಾನದಂಡಗಳು ಮತ್ತು ಮಾನ್ಯತೆ ಪಡೆದ ಬೋಧನಾ ಆಸ್ಪತ್ರೆಗಳ ಜೊತೆಗೆ ತುಂಬೆ ಗ್ರೂಪ್ ಪ್ರತಿ ಹಂತದಲ್ಲೂ ಅವರೊಂದಿಗಿರುತ್ತದೆ."


UMFST ರೇಕ್ಟರ್ ಪ್ರೊ. ಡಾ. ಲಿಯೊನಾರ್ಡ್ ಅಜಮ್ಫಿರೆ, ಈ ಉಪಕ್ರಮವನ್ನು ಗಲ್ಫ್ ಪ್ರದೇಶ ಮತ್ತು ಯುರೋಪ್ ನಡುವಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ದೀರ್ಘಕಾಲದ ಸೇತುವೆ ಎಂದು ಬಣ್ಣಿಸಿದರು.


ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು pathway@gmu.ac.ae ಮೂಲಕ ಸಂಪರ್ಕಿಸಬಹುದು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top