ನಾನು ನನಗೆ ಬರೆದ ಮೊದಲ ಪತ್ರ

Upayuktha
0

ದು ಏನನ್ನು ಅರಿಯದ ವಯಸ್ಸು, ಎಲ್ಲವು ಮನಸಿಗೆ ಹಿತವನ್ನು ಕೊಡುತಿತ್ತು. ಎಲ್ಲರನ್ನು ಒಂದೇ ರೀತಿ ನೋಡುವ ಭಾವನೆ. ಕನಸುಗಳ ಜೊತೆ ತೇಲಾಡುವ ಹುಮಸ್ಸು. ಎಲ್ಲವನ್ನು ತಕ್ಷಣ ಹೇಳಿಬಿಡುವ  ನಿಸ್ವಾರ್ಥವಾದ ಪ್ರೀತಿ. ನೋಡಿದನ್ನು ಅಥವಾ ಕೇಳಿದನ್ನು ಪ್ರಶ್ನೆ ಮಾಡುವ ಚಾಲಾಕಿತನ. ಇದರೆಲ್ಲಾ ನಡುವೆ ಆ ವಯಸ್ಸಲ್ಲಿ ಮೂಡಿದ ಆ ಒಂದು ನೋವು ಬದುಕಿನ ಉದ್ದಕ್ಕೂ ಸದಾ ಮಿಡಿಯುತ್ತದೆ.


       
ಅಂದು ಸರಿಸುಮಾರು  ರಾತ್ರಿಯ  ಸಮಯ. ದಿನಪೂರ್ತಿ ನಗುವಿನಂದಲೇ ಕಳೆಯುವ ನನಗೆ ಅದೇಕೋ ನನ್ನ ನಗುವೇ ಅ ದಿನ ಕಳೆದು ಹೋಗಿತ್ತು. ಕಳೆದು ಹೋದ ನನ್ನ ನಗುವನ್ನು ಎಷ್ಟೇ ಹುಡುಕಿದರೂ ಅ ನಗುವೇ ನನಗೆ ಕಣ್ಣ ಪರದೆಯ ಮುಂದೆ ಪ್ರಶ್ನೆಯನ್ನು ಹಾಕಿತ್ತು. ಅ ಪ್ರಶ್ನೆಗೆ ನಾನೇ ಉತ್ತರ ಎಂದು ತಿಳಿದಿದ್ದರೂ ಅದೇಕೋ ಬಾಯಿ ತೆರೆದು ಹೇಳಲು ಮುಜುಗರ ಅಡ್ಡವಾಗಿತ್ತು. ಬರೀ ನೋವುಗಳೇ ತುಂಬಿದ ಅ ದಿನವನ್ನು ನಲಿವುಗಳಲ್ಲಿ ಕಳೆಯಲು ಎಷ್ಟೇ ಪ್ರಯತ್ನ ಮಾಡಿದರೂ "ಮಳೆ ನಿಂತು ಹೋದ ಮೇಲೆ ಕೊಡೆಯನ್ನು ಹಿಡಿದ ಮೂರ್ಖ ತನದ ಕೆಲಸದ  ಹಾಗೆ  ಅಲ್ಲವೇ?" ನೋವುಗಳನ್ನು ಮರೆಸುವ ಶಕ್ತಿಯನ್ನು ಕೊಡು ದೇವರೇ ಎಂದು ಕೇಳುವ ಮುನ್ನವೇ ದೇವರೇ ಪ್ರತೀ ಉತ್ತರವಾಗಿ ನೀನೇ ತಂದುಕೊಂಡ ಈ ನೋವನ್ನು ನೀನೇ ಅನುಭವಿಸು ಎಂದು ಹೇಳುವ ರೀತಿ ಅ ದಿನ ಅನಿಸಿತ್ತು. 
              
ಇಷ್ಟೆಲ್ಲಾ ನೋವನ್ನು ಹೊತ್ತ ನನ್ನ ಮನಸು ಅಂದು ಪ್ರೀತಿಯಿಂದ ಗೀಚಿದ ನಾಲ್ಕು ಸಾಲುಗಳು ಬದುಕಿನ ಭರವಸೆಯ ಸಾಲುಗಳಾಗಿತ್ತು. ಪತ್ರವನ್ನು ಬರೆಯುವ ಮುನ್ನ, ಅದೇಕೋ  ಸುತ್ತಲೂ ಮೋಡ ಕವಿದ ವಾತಾವರಣ. ಬಾನು ಏನೋ ಸಂದೇಶವನ್ನು ಕೊಡುವ ರೀತಿ ಆಗಾಗ ಕಂಪಿಸುತಿತ್ತು, ಆಗಲೇ ಮೋಡ ಬೇರೆ ಮಳೆ ಬರುವ ಮುನ್ಸೂಚನೆಯನ್ನು ನೀಡಿತ್ತು, ಸುತ್ತಲೂ ಬೀಸುವ ಗಾಳಿ ಏನನ್ನೋ ಹೇಳಲು ಬಯಸುತಿತ್ತು. ಇದೆಲ್ಲವೂ  ನನ್ನ ಬರಹಕ್ಕೆ ಕಾದು ಕುಳಿತಿವೇ ಎಂದು ಆ ಕ್ಷಣ ಮಾತ್ರ ಅನಿಸಿದ್ದು ಸುಳ್ಳಲ್ಲಾ. ಬರಹವೇ  ಗೊತ್ತಿಲ್ಲದ ನಾನು ಅಂದು ಬರಹದ ಲೋಕಕ್ಕೆ ಕಾಲಿಟ್ಟ ದಿನ. ಬರೆದದ್ದು ನಾಲ್ಕು ಸಾಲುಗಳು ಆದರೂ, ನೂರಾರು ಪರಿಪೂರ್ಣತೆಯ ಅರ್ಥವನ್ನು ನೀಡಿತ್ತು. ಕಳೆದುಹೋದ ನಗು ಮತ್ತೆ ತುಟಿಯತ್ತ ಮೂಡಿತ್ತು. ಕಣ್ಣೀರು ಪತ್ರಕ್ಕೆ ಹೊಸ ರೀತಿಯ ಚಿತ್ರವನ್ನು  ಬಿಡಿಸಿತ್ತು. ಮನಸು ಆ  ಬರಹಕ್ಕೆ ಮರಳಾಗಿತ್ತು. ಕಾಗದ ಮತ್ತೇ ಅಕ್ಷರಕ್ಕೆ ಪರಿತಪಿಸುತಿತ್ತು. ಇಷ್ಟೆಲ್ಲಾ ಹೇಳಿದ ನಾನು ನನ್ನ ಆ ಭಾವನೆಗಳ  ಬರಹವನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ,

"ಎಲ್ಲರ ನಗುವಿನ ನಡುವೆ ನನ್ನ ನಗುವನ್ನು ಹುಡುಕಿದೆ,
ಬೇರೆಯವರ ಸಂತೋಷಕ್ಕಾಗಿ ನನ್ನನ್ನೇ ನಾ ಮರೆತು ಹೋದೆ
ಎಲ್ಲಾ ನನ್ನವರು  ಎಂದು ನಂಬಿ ಮೋಸಹೋದೆ,
ಮನದ ಬೇಸರ ಹೇಳಿಕೊಳ್ಳಲಾಗದೆ ಮೌನದ ಗೂಡಿಗೆ ಸರಿದೆ.
ನನ್ನ ಹೆಗಲ ಮೇಲೆ ಕೈ ಇಟ್ಟು ಸಮಾಧಾನಿಸುವವರು ಯಾರೂ ಇರಲಿಲ್ಲ, 
ಕೇವಲ ನನ್ನನ್ನು ನಾನು ಬಿಟ್ಟರೆ 
ನನ್ನ ಕಣ್ಣೀರನ್ನು ಒರೆಸಲು ನನ್ನ ಕೈ ಬಿಟ್ಟು ಬೇರೆ ಕೈ ಬರಲಿಲ್ಲ.
ಮನಸಿನ ನೋವುಗಳನ್ನು ನಿನ್ನಲ್ಲಿ ಬಿಟ್ಟರೆ ಬೇರೆ ಯಾರ ಜೊತೆ ಹೇಳಿಕೊಳ್ಳಲಿ ನೀನೇ ಹೇಳು?
ಅರೇ ಕ್ಷಣ ನಿನ್ನ ನನ್ನ  ಬರಹದ ಲೋಕದಲ್ಲಿ ಜೊತೆಯಾದೆ, 
ಮನಸಿನ ಗೊಂದಲಗಳಿಗೆ ಆಸರೆಯಾದೇ,
ಬರಹಕ್ಕೆ ನಿ ಕಾಗದವಾದರೆ, ಬರವಣಿಗೆಗೆ ನಾ ನಿನ್ನ ಮೇಲೆ ಕವಿತೆಯಾದೆ .
ನನ್ನ ನೋವಿನ ಆಳವನು ನೀನು ಅರಿತೆ,
ನನ್ನ ಒಂಟಿ ಪಯಣದ ಜೊತೆಗಾರ ಅದೇ.
ಜಗತ್ತು ನನ್ನ ಮಾತುಗಳ ಕೇಳದಿದ್ದಾಗ,
ನೀನೇ ನನ್ನ ಭಾವನೆಗಳ ಮಡಿಲಾದೇ."


ಈ ಸಾಲುಗಳು ನಿಜಕ್ಕೂ  ನನ್ನ ಬಾಳ ಪಯಣದಲ್ಲಿ  ನನ್ನ ಜೊತೆಯಾಗಿ  ಬಂದದ್ದು. ಮನಸಿನ ನೋವುಗಳನ್ನು ಮರೆಸಿದ ಆ ಒಂದು ಬರಹ, ಇಂದು ನಾನೇ ನನ್ನ ಸ್ವತಃ ಬರಹವನ್ನು  ಬರೆಯುವ ರೀತಿ ಮಾಡಿದೆ. ಈಗ ಓದಿದರೆ, ಹೌದು,ತುಟಿಯತ್ತ ನಗುವೊಂದು ಬಂದು ಮರೆಯಾಗುತ್ತದೆ. ಅದರೆ ಆ ನಗುವಿನ ಹಿಂದೆರುವ ಅದೆಷ್ಟೋ ನೋವುಗಳನ್ನು ಮತ್ತೇ ಕಣ್ಣ ಮುಂದೆ ತೆರೆದಿಡುತ್ತೆದೆ. ಈ ಕೊನೆಯ ಸಾಲುಗಳು ನಿನಗೆ ನನ್ನ ಪತ್ರವೇ "ಇನ್ನುಳಿದ ಬದುಕಿನ ಪ್ರತಿಯೊಂದು ಸಾಲನು, ನಿನ್ನದೇ ಪುಟದ  ಮೇಲೆ ಬರೆದು ಮುಗಿಸುವೆ. ನಿನ್ನ ಈ ಬರಹದ ಪಯಣವನು, ನನ್ನ ಉಸಿರಿರುವವರೆಗೂ ನಾ ನೆನೆಯುವೆ. ನಿನ್ನ ನನ್ನ ಬೇಟಿ ಪ್ರತಿಕ್ಷಣವು, ಪ್ರತಿದಿನವೂ ಹೊಸ ರೂಪದಲ್ಲಿ ಮುಂದುವರೆಯುತ್ತದೆ. ಅಂದು,ನನ್ನ ಮನಸಿನ ನೋವುಳಿಗೆ ಆಸರೆಯಾದೆ ನಿನಗೆ ಇಂದು ಎಂದು ಎಂದೆಂದೂ ನನ್ನ ಚಿರಋಣಿ.

- ಶಿಲ್ಪಾ ದಿಡುಪೆ

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top