ರ‍್ಯಾಗಿಂಗ್ ತಡೆಗಟ್ಟಲು ವಿದ್ಯಾರ್ಥಿಗಳು, ಕಾಲೇಜು ಆಡಳಿತ ವರ್ಗ ಪೋಲೀಸ್ ಇಲಾಖೆಗೆ ಸಹಕರಿಸುವುದು ಅಗತ್ಯ: ನವೀನ್ ಬೋರ್ಕರ್

Upayuktha
0

 


ಕಾರ್ಕಳ: ರ‍್ಯಾಗಿಂಗ್ ಎಂಬುದು ಕ್ರಿಮಿನಲ್ ಅಪರಾಧವಾಗಿದ್ದು, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬಾಳ್ವೆೆ ನಡೆಸಿ ಸಜ್ಜನರಾಗಿ ಸಾಧನೆ ಮಾಡಬೇಕು ಎಂದು ಕಾರ್ಕಳ ಕ್ರೈಂ ವಿಭಾಗದ ಪೋಲೀಸ್ ಅಧಿಕಾರಿ ನವೀನ್ ಬೋರ್ಕರ್ ಅಭಿಪ್ರಾಯಪಟ್ಟರು.

ನಿಟ್ಟೆೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಜರಗಿದ ಆ್ಯಂಟಿ ರ‍್ಯಾಗಿಂಗ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರ‍್ಯಾಗಿಂಗ್ ಎಂಬುದು ನಮ್ಮ ಸಂಸ್ಕೃತಿ ಮತ್ತು ಸಭ್ಯತೆಗೆ ವಿರುದ್ಧವಾಗಿದೆ. ಎಲ್ಲ ವಿದ್ಯಾರ್ಥಿಗಳು ಓದು ಮತ್ತು ಸಾಧನೆಯ ಕಡೆಗೆ ಗಮನ ಕೊಡಬೇಕು. ಯಾರಾದರೂ ರ‍್ಯಾಗಿಂಗ್ ಗೆ ಪ್ರೇರಣೆ, ರ‍್ಯಾಗಿಂಗ್ ಮೂಲಕ ಕಿರುಕುಳ ನೀಡಿದಲ್ಲಿ ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸಮಿತಿ ಗಮನಕ್ಕೆೆ ತರಬೇಕು ಎಂದರು. ಮಾದಕ ದ್ರವ್ಯ ವ್ಯಸನಗಳಿಂದ ಆಗುವ ಸಮಸ್ಯೆೆ ಮತ್ತು ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ಮುಂದೆ ಆಗಬಹುದಾದ ಅಪಾಯಗಳ ಬಗ್ಗೆೆ ಎಚ್ಚರಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಆಫ್ ಕ್ಯಾಂಪಸ್ ನ ಅಭಿವೃದ್ದಿ ಹಾಗೂ ನಿರ್ವಹಣಾ ವಿಭಾಗದ ನಿರ್ದೇಶಕ ಎ ಯೊಗೀಶ್ ಹೆಗ್ಡೆೆ ಮಾತನಾಡಿ, ನಿಟ್ಟೆೆ ವಿದ್ಯಾಸಂಸ್ಥೆೆಯಲ್ಲಿ ಉತ್ತಮ ಶಿಕ್ಷಣಕ್ಕೆೆ ಪೂರಕ ವ್ಯವಸ್ಥೆೆಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಾಳಜಿಗೆ ಕಾನೂನಾತ್ಮಕವಾಗಿ ಇರುವ ಎಲ್ಲ ಸಮಿತಿ ಮತ್ತು ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತದೆ, ವಿದ್ಯಾರ್ಥಿಗಳು ಈ ಬಗ್ಗೆೆ ಹೆಚ್ಚಿನ ಅರಿವು ಹೊಂದಿರಬೇಕು ಎಂದು ನುಡಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಚಿಪ್ಳೂಣ್ಕರ್ ಸ್ವಾಗತಿಸಿ, ಉಪಪ್ರಾಂಶುಪಾಲ ಡಾ| ನಾಗೇಶ್ ಪ್ರಭು ವಂದಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಹಾಸ್ಟೆಲ್ ನ ಚೀಫ್ ವಾರ್ಡನ್ ಡಾ| ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top