ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಎಸಿಸಿಎ ಓರಿಯೆಂಟೇಶನ್; ಜಾಗತಿಕ ವೃತ್ತಿ ಅವಕಾಶಗಳ ಕುರಿತು ಮಾಹಿತಿ

Upayuktha
0

 



ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್‌ನ ಬಿ.ಕಾಂ ವಿಭಾಗ ಹಾಗೂ ಮೈಲಾಜಿಕ್ ತಂಡದ ಸಹಯೋಗದಲ್ಲಿ ಜುಲೈ 31ರಂದು ಎಸಿಸಿಎ (ACCA) ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದಲ್ಲಿ ಎಸಿಸಿಎ ಕೋರ್ಸ್, ಅದರ ಜಾಗತಿಕ ಉದ್ಯೋಗಾವಕಾಶಗಳು, ಪರೀಕ್ಷಾ ಮಾದರಿ ಹಾಗೂ ವೃತ್ತಿ ಬೆಳವಣಿಗೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. 


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಎಮ್‌ಎ ಬಾಲಚಂದ್ರ ಸಾಲಗುಂಡಿ ಹಾಗೂ ಮೈಲಾಜಿಕ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನ ವಿಂಗ್ ಹೆಡ್ ಕೌಸ್ತುಭ್ ಪುಥ್ರನ್ ಅವರು ಎಸಿಸಿಎ ಅರ್ಹತೆಯ ಮಹತ್ವ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಬೇಡಿಕೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.


ಈ ಸಂದರ್ಭದಲ್ಲಿ ಎಸಿಸಿಎಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 


ಕಾರ್ಯಕ್ರಮದ ಯಶಸ್ಸಿಗೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್‌ನ ಡೀನ್ ಡಾ. ವೆಂಕಟೇಶ್ ಎಸ್. ಅಮೀನ್, ಬಿ.ಕಾಂ ವಿಭಾಗದ ಮುಖ್ಯಸ್ಥೆ ಪ್ರೊ. ಶರ್ಮಿಳಾ ಎಸ್. ಶೆಟ್ಟಿ, ಎಸಿಸಿಎ ಕೋರ್ಸ್ ಸಂಯೋಜಕಿ ಪ್ರೊ. ಯಶಸ್ವಿ ಎ. ಐಲ್ ಹಾಗೂ ಬಿ.ಕಾಂ ವಿಭಾಗದ ಅಧ್ಯಾಪಕರು ಸಹಕರಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top