ರೋಹನ್ ಕಾರ್ಪೋರೇಷನ್ ವತಿಯಿಂದ "ಫ್ರೀಡಮ್ ಪ್ಯಾಲೆಟ್ 2026" ಚಿತ್ರಕಲಾ ಸ್ಪರ್ಧೆ

Upayuktha
0




ಮಂಗಳೂರು: ಭಾರತದ 80ನೇ ಸ್ಯಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುವ ಉದ್ದೇಶದಿಂದ ರೋಹನ್ ಕಾರ್ಪೋರೇಷನ್ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ "ಫ್ರೀಡಮ್ ಪ್ಯಾಲೆಟ್ 2026" ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ.


ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಭಾಗವಹಿಸುವವರು ಸ್ವಾತಂತ್ರೋತ್ಸವದ ವಿಷಯವನ್ನಾಧರಿಸಿ ತಮ್ಮ ಚಿತ್ರವನ್ನು ರಚಿಸಿ, 10 ಆಗಸ್ಟ್ ಒಳಗಾಗಿ ರೋಹನ್ ಕಾರ್ಪೊರೇಶನ್ ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಲಿಂಕ್ ಅಥವಾ QR ಕೋಡ್ ಮೂಲಕ ಸಲ್ಲಿಸಬಹುದಾಗಿದೆ. ಮನೆ ಅಥವಾ ಶಾಲೆಯಲ್ಲಿಯೇ ಚಿತ್ರವನ್ನು ರಚಿಸಿ ಅಪ್‌ಲೋಡ್ ಮಾಡಲು ಅವಕಾಶವಿದ್ದು, ಸಲ್ಲಿಕೆಯಾಗುವ ಎಲ್ಲ ಚಿತ್ರಗಳ ಪೈಕಿ ಅತ್ಯುತ್ತಮ 60 ಚಿತ್ರಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. 'ಫ್ರೀಡಮ್ ಪ್ಯಾಲೆಟ್ 2026'ರ ಅಧಿಕೃತ ತೀರ್ಪುಗಾರರ ಸಹಭಾಗಿಯಾಗಿ ಪಿಕ್ಸೆಲ್ (Pixncil) ಕೈಜೋಡಿಸಿದೆ.


ಅಂತಿಮ ಸುತ್ತು 2026ರ ಆಗಸ್ಟ್ 13ರಂದು ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಲಿದ್ದು, ಆಯ್ಕೆಯಾದ ಸ್ಪರ್ಧಿಗಳು ನೇರ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಂತಿಮ ಸುತ್ತಿನ ವಿಷಯವನ್ನು ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗುವುದು. ಸ್ಪರ್ಧೆಗೆ ಅಗತ್ಯವಿರುವ ಎಲ್ಲಾ ಚಿತ್ರಕಲಾ ಸಾಮಗ್ರಿಗಳನ್ನು ಆಯೋಜಕರೇ ಒದಗಿಸಲಿದ್ದಾರೆ.


ವಿಜೇತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ₹25,000, ದ್ವಿತೀಯ ಬಹುಮಾನವಾಗಿ ₹15,000, ತೃತೀಯ ಬಹುಮಾನವಾಗಿ ₹10,000 ನೀಡಲಾಗುವುದು. ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ ಎಲ್ಲಾ ಸ್ಪರ್ಧಿಗಳಿಗೂ ಅವರ ಪ್ರತಿಭೆ ಮತ್ತು ಭಾಗವಹಿಸುವಿಕೆಯನ್ನು ಗೌರವಿಸಿ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top