ಪೇಜಾವರ ಶ್ರೀ ದೆಹಲಿ ಚಾತುರ್ಮಾಸ್ಯಕ್ಕೆ ದೇವಿ ಚಿತ್ರಲೇಖಾ ವಿಶೇಷ ವ್ಯಾಖ್ಯಾನ

Upayuktha
0

 ದಕ್ಷಿಣೋತ್ತರದ ಅಧ್ಯಾತ್ಮಿಕ ನಂಟು ದೃಢಗೊಳಿಸುವ ದಿವ್ಯತೆಯ ಸಾಕಾರ



ನವದೆಹಲಿ: ಸಂತರ ದರ್ಶನ, ಆಶೀರ್ವಾದ ಪ್ರಾಪ್ತಿಗಳು ಪುಣ್ಯಫಲ ಮಾತ್ರದಿಂದಲೇ ಸಾಧ್ಯ. ಹಾಗಿರುವಾಗ ಶತಮಾನಗಳ ಭವ್ಯ ಇತಿಹಾಸ ವಿರುವ ಸಂಸ್ಥಾನದ ಒಬ್ಬ ಸಂತರು ತಮ್ಮ ಚಾತುರ್ಮಾಸ್ಯ ವ್ರತ ನಡೆಸುತ್ತಾರೆ ಅಂದ್ರೆ ಅದು ದೇಶದ ಸನಾತನ ಧರ್ಮದ ನಂಟನ್ನು ದಕ್ಷಿಣದಿಂದ ಉತ್ತರದೊಂದಿಗೆ ಮತ್ತಷ್ಟು ದೃಢಗೊಳಿಸುವ ದಿವ್ಯ ಸಂದರ್ಭವಾಗಿದೆ ಎಂದು ಪ್ರಸಿದ್ಧ ಯುವ ಅಧ್ಯಾತ್ಮ ಚಿಂತಕಿ, ಪ್ರವಚನಕಾರಿಣಿ ದೇವಿ ಚಿತ್ರಲೇಖಾ ಉಲ್ಲೇಖಿಸಿದ್ದಾರೆ.


ನವದೆಹಲಿ ವಸಂತ್ ಕುಂಜ್ ಪೇಜಾವರ ಮಠ ಶಾಖೆಯಲ್ಲಿ ನಡೆಯುತ್ತಿರುವ ಶ್ರೀಗಳ 39 ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಭಾನುವಾರ ಸಂಜೆ ತಮ್ಮ ಉಪನ್ಯಾಸ ಸತ್ಸಂಗ ನಡೆಸಿ ಮಾತನಾಡಿದರು. 


ಈ ಸತ್ಸಂಗಕ್ಕೆ ಸಭಾಂಗಣ ತುಂಬಿತ್ತು. ತಮ್ಮ ಸುಶ್ರಾವ್ಯ ಭಜನೆಗಳೊಂದಿಗೆ ಅನೇಕ ಸದ್ಗರಂಥಗಳ ಉಲ್ಲೇಖಗಳೊಂದಿಗೆ ಮನೋಜ್ಞ ಉಪನ್ಯಾಸ ನೀಡಿದರು. ಶ್ರೀ ವಿಶ್ವಪ್ರಸನ್ನ ತೀರ್ಥರು ಸಂದೇಶ ನೀಡಿದರು.


ಕೇಂದ್ರೀಯ ಸಂಸ್ಕೃತ ವಿವಿಯ ಪ್ರಾಧ್ಯಾಪಕರುಗಳಾದ ಪ್ರೊ ಮುರಳೀಕೃಷ್ಣ, ಡಾ ಅರುಣ ಕುಮಾರ ಮಿಶ್ರಾ ಉಪಸ್ಥಿತರಿದ್ದು ಶುಭಾಶಂಸನೆಗೈದರು‌.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top