ಮಂಗಳೂರು ವಿ.ವಿ: ಅತಿಥಿ ಉಪನ್ಯಾಸಕರ ಸಂದರ್ಶನ

Upayuktha
0


ಮಂಗಳೂರು: 2026-27ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿ-ಸಂದರ್ಶನ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗಿದ್ದು, ಆಯ್ಕೆಗೆ ಸಂಬಂಧಿಸಿ ಸಂದರ್ಶನವು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ನಡೆಯಲಿದೆ.

      
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು, ಕಡ್ಡಾಯವಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು. ಪೂರ್ಣಕಾಲಿಕ ಬೋಧನಾ ಅವಧಿಯನ್ನು ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ ವಾರಕ್ಕೆ 16 ಗಂಟೆ ಎಂದು ಹಾಗೂ ವಿಜ್ಞಾನ ನಿಕಾಯಕ್ಕೆ 20 ಗಂಟೆಯೆಂದು ಪರಿಗಣಿಸಲಾಗುತ್ತದೆ.  ಪೂರ್ಣಕಾಲಿಕ ಬೋಧನಾ ಅವಧಿ ಇದ್ದಲ್ಲಿ ಮಾಸಿಕ ಗರಿಷ್ಠ ರೂ.40,000 ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಮಾಸಿಕ ಗರಿಷ್ಟ ರೂ.35,000 ಸಂಭಾವನೆ ಪಾವತಿ ಮಾಡಲಾಗುತ್ತದೆ. ಯು.ಜಿ.ಸಿ  ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 650 ರಂತೆ ಮತ್ತು ಯು.ಜಿ.ಸಿ  ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 600 ರಂತೆ ಸಂಭಾವನೆ ಪಾವತಿ ಮಾಡಲಾಗುತ್ತದೆ. 

ವಿಶ್ವವಿದ್ಯಾನಿಲಯವು ವಹಿಸುವ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬದ್ಧರಿರಬೇಕು. ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿದ ಅರ್ಜಿ ಹಾಗೂ ಮೂಲದಾಖಲೆಗಳ ಪ್ರತಿಯನ್ನು ಸಂದರ್ಶನ ದಿನದಂದು ಕಡ್ಡಾಯವಾಗಿ ತರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top